Karnataka Dam Water Level: ಮುಂದುವರಿದ ಮಳೆ, ರಾಜ್ಯದ ಅಣೆಕಟ್ಟುಗಳಲ್ಲಿ ಹೆಚ್ಚಾಯ್ತ ನೀರಿನ ಸಂಗ್ರಹ, ಇಂದಿನ ಮಟ್ಟ..
ಕರ್ನಾಟಕದಾದ್ಯಂತ ಉತ್ತಮ ಮಳೆ ಆಗುತ್ತಿದೆ. ಶನಿವಾರ ವಿಜಯಪುರ, ಬಾಲಗಕೋಟೆ, ಧಾರವಾಡ ಸೇರಿದಂತೆ ವಿವಿಧ ಕಡೆಗಳಲ್ಲಿ ವ್ಯಾಪಕ ಮಳೆ ಆಗಿದೆ. ಕಳೆದ ಹಲವು ವಾರಗಳಿಂದ ಮಲೆನಾಡಿನ ಭಾಗಗಳಲ್ಲಿ ನಿರಂತರವಾಗಿ ಧಾರಕಾರ ಮಳೆ ಆಗಿದೆ. ಪರಿಣಾಮ ರಾಜ್ಯ ಪ್ರಮುಖ ಅಣೆಕಟ್ಟುಗಳು ತುಂಬಿ ಹರಿದಿವೆ. ಒಳ ಮತ್ತು ಹೊರ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಇಂದಿನ ಡ್ಯಾಂ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾದ ಪರಿಣಾಮ ಕಾವೇರಿ, ಕಬಿನಿ, ಹಾರಂಗಿ, ಭದ್ರಾ, ಹೇಮಾವತಿ ಸೇರಿದಂತೆ ಅನೇಕ ಅಣೆಕಟ್ಟುಗಳು ಭರ್ತಿ ಆಗಿವೆ. ಮಳೆ ನಿರಂತರವಾಗಿ ಸುರಿದ ಪರಿಣಾಮ ಪ್ರತಿ ದಿನ ಒಳಹರಿವು ಹೆಚ್ಚಾಗಿದ್ದರಿಂದ ಹೊರ ಹರಿವು ಸಹ ಏರಿಕೆ ಕಂಡಿದೆ. ಇಂದಿನ ರಾಜ್ಯದ ಜಲಾಶಯಗಳ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಇಂದಿನ ಅಣೆಕಟ್ಟುಗಳ ನೀರಿನ ವಿವರ
ಕಬಿನಿ ಅಣೆಕಟ್ಟಿನ ವಿವರ
* ಡ್ಯಾಂ ಒಟ್ಟು ನೀರಿನ ಮಟ್ಟ: 2284 ಅಡಿ
* ಇಂದಿನ ನೀರಿನ ಮಟ್ಟ: 2281.79 ಅಡಿ
* ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 19.52 ಟಿಎಂಸಿ
* ಇವತ್ತಿನ ನೀರಿನ ಸಂಗ್ರಹ: 18.11 ಟಿಎಂಸಿ
* ಒಳಹರಿವು: 4557 ಕ್ಯೂಸೆಕ್
* ಇಂದಿನ ಹೊರ ಹರಿವು: 5350 ಕ್ಯೂಸೆಕ್
ಹೇಮಾವತಿ ಡ್ಯಾಂ ನೀರಿನ ವಿವರ
* ಡ್ಯಾಂ ಒಟ್ಟು ನೀರಿನ ಮಟ್ಟ: 2922 ಅಡಿ
* ಇಂದಿನ ನೀರಿನ ಮಟ್ಟ: 2922 ಅಡಿ
* ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 37.10 ಟಿಎಂಸಿ
* ಇವತ್ತಿನ ನೀರಿನ ಸಂಗ್ರಹ: 37.103 ಟಿಎಂಸಿ
* ಒಳಹರಿವು: 7908 ಕ್ಯೂಸೆಕ್
* ಇಂದಿನ ಹೊರ ಹರಿವು: 3250 ಕ್ಯೂಸೆಕ್
KRS ಡ್ಯಾಂ ನೀರಿನ ವಿವರ
* ಡ್ಯಾಂ ಒಟ್ಟು ನೀರಿನ ಮಟ್ಟ: 124.80 ಅಡಿ
* ಇಂದಿನ ನೀರಿನ ಮಟ್ಟ: 124.28 ಅಡಿ
* ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
* ಇವತ್ತಿನ ನೀರಿನ ಸಂಗ್ರಹ: 48.726 ಟಿಎಂಸಿ
* ಒಳಹರಿವು: 7761 ಕ್ಯೂಸೆಕ್
* ಇಂದಿನ ಹೊರ ಹರಿವು: 4963 ಕ್ಯೂಸೆಕ್
ಆಲಮಟ್ಟಿ ಜಲಾಶಯದ ನೀರಿನ ಮಟ್ಟ
* ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123 ಟಿಎಂಸಿ
* ಇವತ್ತಿನ ನೀರಿನ ಸಂಗ್ರಹ: 119.91 ಟಿಎಂಸಿ
* ಒಳಹರಿವು: 31,134 ಕ್ಯೂಸೆಕ್
* ಇಂದಿನ ಹೊರ ಹರಿವು: 42500 ಕ್ಯೂಸೆಕ್
ಹಾರಂಗಿ ಅಣೆಕಟ್ಟಿನ ನೀರಿನ ವಿವರ
* ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 8.50 ಟಿಎಂಸಿ
* ಇವತ್ತಿನ ನೀರಿನ ಸಂಗ್ರಹ: 7.44 ಟಿಎಂಸಿ
* ಒಳಹರಿವು: 1975 ಕ್ಯೂಸೆಕ್
|* ಇಂದಿನ ಹೊರ ಹರಿವು: 1637 ಕ್ಯೂಸೆಕ್
ಭದ್ರಾ ಡ್ಯಾಂ ಇಂದಿನ ವಿವರ
* ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 71.54 ಟಿಎಂಸಿ
* ಇವತ್ತಿನ ನೀರಿನ ಸಂಗ್ರಹ: 68 ಟಿಎಂಸಿ
* ಒಳಹರಿವು: 6394 ಕ್ಯೂಸೆಕ್
* ಇಂದಿನ ಹೊರ ಹರಿವು: 5214 ಕ್ಯೂಸೆಕ್












Click it and Unblock the Notifications