Karnataka Dam Water Level Today: ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಸಂಪೂರ್ಣ ವಿವರ ಇಲ್ಲಿದೆ
Karnataka Dam Water Level Today: ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ನೈಋತ್ಯ ಮುಂಗಾರು ಮಾರುತಗಳ ಹಿಮ್ಮೆಟ್ಟುವಿಕೆಯು 27.5°N/86.5°E, ಸುಪೌಲ್, ರಾಂಚಿ, ಸುಂದರ್‌ಗಢ, ಬಾರ್ಗಫ್, ಬಿಜಾಪುರ, ಹೈದರಾಬಾದ್, ಬೆಳಗಾವಿ, ಪಣಜಿ ಮತ್ತು 15°N/72°E ಮಾರ್ಗದ ಮೂಲಕ ಮುಂದುವರಿಯುತ್ತಿದೆ. ಮುಂದಿನ 3-4 ದಿನಗಳಲ್ಲಿ ಪೂರ್ವ ಭಾರತ, ಉತ್ತರ ದ್ವೀಪಕಲ್ಪದ (Northern Peninsula) ಕೆಲವು ಭಾಗಗಳು ಮತ್ತು ಈಶಾನ್ಯ ಭಾರತದ ಅನೇಕ ಭಾಗಗಳಿಂದ ನೈಋತ್ಯ ಮುಂಗಾರು ಮಾರುತಗಳು ಮತ್ತಷ್ಟು ಹಿಮ್ಮೆಟ್ಟಲು ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಥೈಲ್ಯಾಂಡ್ ಕೊಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸಮುದ್ರ ಮಟ್ಟದಿಂದ 7.6 ಕಿ.ಮೀ ಎತ್ತರದವರೆಗೆ ವಿಸ್ತರಿಸಿರುವ ಮೇಲ್ಮ ಸುಳಿಗಾಳಿ (upper air cyclonic circulation) ವ್ಯವಸ್ಥೆಯೊಂದು ಅಸ್ತಿತ್ವದಲ್ಲಿದೆ. ಅಕ್ಟೋಬರ್ 11 ರ ಸುಮಾರಿಗೆ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಮೇಲ್ಮ ಸುಳಿಗಾಳಿ ವ್ಯವಸ್ಥೆ ಉಂಟಾಗುವ ಸಾಧ್ಯತೆಯಿದ್ದು, ಮೇಲೆ ತಿಳಿಸಿದ ವ್ಯವಸ್ಥೆಯು ಅದರೊಂದಿಗೆ ವಿಲೀನಗೊಳ್ಳುವ ನಿರೀಕ್ಷೆಯಿದೆ. ಇದರ ಪ್ರಭಾವದಿಂದ, ಅಕ್ಟೋಬರ್ 13 ರ ಸುಮಾರಿಗೆ ಆಗೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವೊಂದು ರೂಪುಗೊಳ್ಳುವ ಸಾಧ್ಯತೆಯಿದೆ.

ಉತ್ತರ ಬಾಂಗ್ಲಾದೇಶ ಮತ್ತು ಪಕ್ಕದ ಅಸ್ಸಾಂನಿಂದ ತೆಲಂಗಾಣದವರೆಗೆ ಇದ್ದ 'ಟ್ರಫ್' (trough - ವಾಯುಭಾರ ಕುಸಿತದ ಕಣಿವೆ ಪ್ರದೇಶ) ಈಗ ಪಶ್ಚಿಮ ಅಸ್ಸಾಂನಿಂದ ತೆಲಂಗಾಣದವರೆಗೆ; ಅಂದರೆ ಉತ್ತರ ಬಾಂಗ್ಲಾದೇಶ, ಉಪ-ಹಿಮಾಲಯದ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಜಾರ್ಖಂಡ್, ಒಡಿಶಾ ಹಾಗೂ ಛತ್ತೀಸ್‌ಗಢದ ಮೂಲಕ ಸಮುದ್ರ ಮಟ್ಟದಿಂದ 5.8 ಕಿ.ಮೀ ಎತ್ತರದಲ್ಲಿ ಹಾದುಹೋಗುತ್ತಿದೆ ಕೊಮೊರಿನ್ ಪ್ರದೇಶದಿಂದ ಮರಾಠವಾಡದವರೆಗೆ ಇದ್ದ 'ಟ್ರಫ್' ಈಗ ಕೊಮೊರಿನ್ ಪ್ರದೇಶದಿಂದ ಉತ್ತರ ಒಳನಾಡು ಕರ್ನಾಟಕದವರೆಗೆ; ಅಂದರೆ ತಮಿಳುನಾಡು ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಮೂಲಕ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಹಾದುಹೋಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ. ಇಂದಿನ ಕರ್ನಾಟಕದ 14 ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ.
ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 102.60
ಒಳಹರಿವು: 354
ಹೊರಹರಿವು: 2,519 ಕ್ಯೂಸೆಕ್ಸ್‌ಗಳಲ್ಲಿ
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2,848.81
ಒಳಹರಿವು: 110
ಹೊರಹರಿವು: 1,700 ಕ್ಯೂಸೆಕ್ಸ್‌ಗಳಲ್ಲಿ
ಕಬಿನಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284.00
ಇಂದಿನ ಮಟ್ಟ: 2268.16
ಒಳಹರಿವು: 1,209
ಹೊರಹರಿವು: 1,300 ಕ್ಯೂಸೆಕ್ಸ್‌ಗಳಲ್ಲಿ
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922
ಇಂದಿನ ಮಟ್ಟ: 2,892.44
ಒಳಹರಿವು: 606
ಹೊರಹರಿವು: 300 ಕ್ಯೂಸೆಕ್ಸ್‌ಗಳಲ್ಲಿ
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819
ಇಂದಿನ ಮಟ್ಟ: 1,793.65
ಒಳಹರಿವು: 0
ಹೊರಹರಿವು: 5,090 ಕ್ಯೂಸೆಕ್ಸ್‌ಗಳಲ್ಲಿ
ಸೂಪಾ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 546.45
ಒಳಹರಿವು: 217.37
ಹೊರಹರಿವು: 5,539.14 ಕ್ಯೂಸೆಕ್ಸ್‌ಗಳಲ್ಲಿ
ಮಾಣಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 595
ಇಂದಿನ ಮಟ್ಟ: 585.37
ಒಳಹರಿವು: 0
ಹೊರಹರಿವು: 1,332
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,620.88
ಒಳಹರಿವು: 0
ಹೊರಹರಿವು: 10,012
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.50
ಇಂದಿನ ಮಟ್ಟ: 2,065.38
ಒಳಹರಿವು: 0
ಹೊರಹರಿವು: 194
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,174.65
ಒಳಹರಿವು: 0
ಹೊರಹರಿವು: 164
ತುಂಗಾ (ಮೀ)
ಗರಿಷ್ಠ ಮಟ್ಟ (ಅಡಿಗಳಲ್ಲಿ): 588.24
ಇಂದಿನ ಮಟ್ಟ: 588.23
ಒಳಹರಿವು: 1,943
ಹೊರಹರಿವು: 1,434
ಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 186
ಇಂದಿನ ಮಟ್ಟ: 173.5
ಒಳಹರಿವು: 239
ಹೊರಹರಿವು: 772
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.60
ಇಂದಿನ ಮಟ್ಟ: 518.14
ಒಳಹರಿವು: 0
ಹೊರಹರಿವು: 13,600
ನಾರಾಯಣಪುರ ಜಲಾಶಯ
ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25
ಇಂದಿನ ಮಟ್ಟ: 491.42
ಒಳಹರಿವು: 5,962
ಹೊರಹರಿವು: 14,423


Click it and Unblock the Notifications
