ದಮ್ಮು ತಾಕತ್ತಿದ್ದರೆ ಬಿಜೆಪಿ ಆ ದೊಣ್ಣೆನಾಯಕನ ಹೆಸರು ಹೇಳಲಿ!: ಕಾಂಗ್ರೆಸ್ ಸವಾಲು
ಬೆಂಗಳೂರು, ಏಪ್ರಿಲ್ 29: ದಮ್ಮು ತಾಕತ್ತಿದ್ದರೆ ಬಿಜೆಪಿ ಆ ದೊಣ್ಣೆನಾಯಕನ ಹೆಸರು ಹೇಳಲಿ ಎಂದು ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಸವಾಲು ಹಾಕಿದೆ.
ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ಹೇಳಿಕೆ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಒಂದು ಗ್ರಾಮ ಪಂಚಾಯ್ತಿ ಎಲೆಕ್ಷನ್ ನಿಂತು ಗೆಲ್ಲಲಾಗದವರು ಇಡೀ ಬಿಜೆಪಿಯನ್ನು ಹಿಡಿತಕ್ಕೆ ಪಡೆದು ಕುಣಿಸುತ್ತಿದ್ದಾರೆ! ರೇಣುಕಾಚಾರ್ಯ ಅವರು ಹೇಳಿದ ಗ್ರಾ.ಪಂ ಚುನಾವಣೆಗೂ ನಿಲ್ಲಲಾಗದ ಆ ನಾಯಕ ಯಾರು?ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೈಪಡೆ, ದಮ್ಮು ತಾಕತ್ತಿದ್ದರೆ ಬಿಜೆಪಿ ಆ ದೊಣ್ಣೆನಾಯಕನ ಹೆಸರು ಹೇಳಲಿ! ಎಂದು ಸವಾಲು ಹಾಕಿದೆ. ಜೊತೆಗೆ ಬಿಜೆಪಿ ಈಗ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದೆಯೋ ಆತ್ಮಹತ್ಯೆ ವಿಮರ್ಶೆ ಮಾಡಿಕೊಳ್ಳುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ! ಎಂದು ವ್ಯಂಗ್ಯವಾಡಿದೆ.
ಮಾರಿ ಎಂದರೆ ಏನರ್ಥ ಎಂದು ರಾಜ್ಯ ಬಿಜೆಪಿಯನ್ನ ಕಾಂಗ್ರೆಸ್ ಪ್ರಶ್ನಿಸಿದ್ದು, ಮಹಿಳೆಯರನ್ನು ಘನತೆ, ಗೌರವದ ದೃಷ್ಟಿಯಲ್ಲಿ ನೋಡಲು ಬಿಜೆಪಿಗೆ ಸಾಧ್ಯವಿಲ್ಲವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮಹಿಳೆಯರನ್ನು "ಮಾರಿ" ಎನ್ನುವ ಮೂಲಕ ಬಿಜೆಪಿ ತನ್ನೊಳಗಿನ ವಿಷಕಾರಿ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಸ್ತ್ರೀಯರ ಗೌರವಕ್ಕೆ ಚ್ಯುತಿ ತಂದ ಬಿಜೆಪಿ ನಾಡಿನ ಸಮಸ್ತ ಮಹಿಳೆಯರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ರೇಣುಕಾಚಾರ್ಯ ಹೇಳಿದ್ದೇನು?
ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲದವರು ನಮಗೆ ಪಾಠ ಮಾಡ್ತಾರೆ. ತಮಿಳುನಾಡಿನಿಂದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಕೊಡ್ತಾರೆ. ಏನು ಅಣ್ಣಾಮಲೈ ದೊಡ್ಡ ಹೀರೋನಾ? ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಗ್ರಾಮ ಪಂಚಾಯಿತಿ ಗೆಲ್ಲದವರು ನಮಗೆ ಬಂದು ಪಾಠ ಮಾಡ್ತಾರೆ. ಅಣ್ಣಾಮಲೈ ಏನು ದೊಡ್ಡ ಹೀರೋನಾ? ಸೆಲ್ಯೂಟ್ ಹೊಡೆಯುತ್ತಿದ್ದವರಿಂದ ಬಸವರಾಜ ಬೊಮ್ಮಾಯಿ ಅವರು ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ, ಮುಜುಗರ ಸೃಷ್ಟಿಸಿದ್ದರು. ಇವೆಲ್ಲಾ ನನ್ನ ಮಾತುಗಳಲ್ಲ, ಕಾರ್ಯಕರ್ತರ ಭಾವನೆಗಳು. ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಮೇಲೆ ಅದನ್ನು ಮತಗಳಾಗಿ ಪರಿವರ್ತನೆ ಮಾಡುವ ಮುಖಗಳು ಬೇಕಲ್ವಾ? ಎಂದು ಕಿಡಿಕಾರಿದ್ದಾರೆ.
ಒಂದು ಗ್ರಾಮ ಪಂಚಾಯ್ತಿ ಎಲೆಕ್ಷನ್ ನಿಂತು ಗೆಲ್ಲಲಾಗದವರು ಇಡೀ ಬಿಜೆಪಿಯನ್ನು ಹಿಡಿತಕ್ಕೆ ಪಡೆದು ಕುಣಿಸುತ್ತಿದ್ದಾರೆ!
— Karnataka Congress (@INCKarnataka) June 29, 2023
ರೇಣುಕಾಚಾರ್ಯ ಅವರು ಹೇಳಿದ ಗ್ರಾ.ಪಂ ಚುನಾವಣೆಗೂ ನಿಲ್ಲಲಾಗದ ಆ ನಾಯಕ ಯಾರು?
ದಮ್ಮು ತಾಕತ್ತಿದ್ದರೆ @BJP4Karnataka ಆ ದೊಣ್ಣೆನಾಯಕನ ಹೆಸರು ಹೇಳಲಿ!
ಬಿಜೆಪಿ ಈಗ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದೆಯೋ ಆತ್ಮಹತ್ಯೆ… pic.twitter.com/FmnN0xJA8X












Click it and Unblock the Notifications