ಮೋದಿ ಭಯಂಕರ ನಡೆ: ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆ

Posted By:
Subscribe to Oneindia Kannada

ಬೆಂಗಳೂರು, ನ 9: ಐನೂರು ಮತ್ತು ಸಾವಿರ ನೋಟುಗಳನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ನಿರ್ಧಾರವನ್ನು ಕರ್ನಾಟಕದ ಕಾಂಗ್ರೆಸ್ ನಾಯಕರು ಮುಕ್ತಕಂಠದಿಂದ ಹೊಗಳಿದ್ದಾರೆ ಮತ್ತು ತೆಗಳಿದ್ದಾರೆ.

ಈ ನಡುವೆ, ನೋಟು ವಿನಿಮಯ ಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶ ನೀಡಬೇಕಾಗಿತ್ತು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾದರೂ, ಒಟ್ಟಾರೆಯಾಗಿ ಮೋದಿ ನಡೆಗೆ ಎಲ್ಲಡೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ. (ನೋಟು ರದ್ದತಿ, ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಅಂಶ)

ಈ ಹಿಂದೆ ಮೊರಾರ್ಜಿ ದೇಸಾಯಿ ನೂರು ರೂಪಾಯಿ ನೋಟನ್ನು ನಿಷೇಧ ಮಾಡಿದ್ದನ್ನು ಬಿಟ್ಟರೆ, ಮೋದಿ ಮಂಗಳವಾರ ತೆಗೆದುಕೊಂಡ ಡೈನಾಮಿಕ್ ನಿರ್ಧಾರ ಹಿಂದೆಂದೂ ಆಗಿರಲಿಲ್ಲ. ಹಾಗಾಗಿಯೇ, ಸಾಮಾಜಿಕ ತಾಣಗಳು ಮೋದಿಮಯವಾಗಿ ಹೋಗಿವೆ.

ವಿದೇಶದಲ್ಲಿರುವ ಕಪ್ಪುಹಣವನ್ನು ತರುತ್ತೇನೆಂದು ಭರವಸೆ ನೀಡಿದ್ದ ಮೋದಿ ಈಗ ಐನೂರು, ಸಾವಿರ ರೂಪಾಯಿ ನೋಟನ್ನು ಬ್ಯಾನ್ ಮಾಡಿ ನಾಟಕ ಮಾಡುತ್ತಿದ್ದಾರೆಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು. (ಚಾಯ್ ವಾಲಾ ಪ್ರಧಾನಿಯಾದರೆ ಹೀಗೇ ಆಗೋದು)

ಇದರ ಹೊರತಾಗಿ ಬ್ಯಾಂಕಿಂಗ್ ವಲಯದಲ್ಲಿ ಮೋದಿ ನಿರ್ಧಾರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ನಡುವೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಚಿವರುಗಳು ಮೋದಿ ನಿರ್ಧಾರದ ಬಗ್ಗೆ ಏನಂತಾರೆ, ಗಮನಿಸಬೇಕಾದ ಡಿ ಕೆ ಶಿವಕುಮಾರ್ ಹೇಳಿಕೆ ಏನು? ಮುಂದೆ ಓದಿ..

ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಮೋದಿ ನಮ್ಮನ್ನು ಕೇಳಿ ಬ್ಯಾನ್ ಮಾಡಿದ್ರಾ.. ಕಪ್ಪುಹಣ ಇರುವವರು ಚಿಂತೆ ಮಾಡಬೇಕು, ಇಲ್ಲದಿದ್ದರೆ ಯಾಕೆ ಚಿಂತೆ ಮಾಡಬೇಕು. ಸಮಯಾವಕಾಶ ಕೊಡದೇ ಈ ರೀತಿ ನಿಷೇಧ ಹೇರಿದರೆ ಜನರಿಗೆ ತೊಂದರೆ ಆಗಲ್ವೇನ್ರೀ? - ಸಿಎಂ ಸಿದ್ದರಾಮಯ್ಯ

ಕೆ ಬಿ ಕೋಳಿವಾಡ

ಕೆ ಬಿ ಕೋಳಿವಾಡ

ಮೋದಿ ಸರಕಾರದ ಉತ್ತಮ ಹೆಜ್ಜೆ. ಕಪ್ಪುಹಣಕ್ಕೆ ಕಡಿವಾಣ ಬೀಳಬೇಕಾಗಿದೆ. ಕೇಂದ್ರ ಸರಕಾರದ ಕ್ರಮವನ್ನು ನಾವು ಸ್ವಾಗತಿಸುತ್ತೇವೆ - ಕೆ ಬಿ ಕೋಳಿವಾಡ, ವಿಧಾನಸಭೆಯ ಸ್ಪೀಕರ್.

ಕಾಗೋಡು ತಿಮ್ಮಪ್ಪ

ಕಾಗೋಡು ತಿಮ್ಮಪ್ಪ

ಒಳ್ಳೆಯ ನಿರ್ಧಾರ ತೆಗೆದುಕೊಂಡಾಗ ಸಾರ್ವಜನಿಕರಿಗೆ ಸ್ವಲ್ಪ ತೊಂದರೆಯಾಗುವುದು ಸಹಜ. ಜನರು ಅಡ್ಜಸ್ಟ್ ಮಾಡಿಕೊಳ್ಳಬೇಕು. ದಿಸ್ ಇಸ್ ವೆರಿ ಗುಡ್ ಸ್ಟೆಪ್ - ಕಂದಾಯ ಸಚಿವ ಕಾಗೋಡು ತಿಮ್ಮಪ್ಪ.

ಟಿ ಬಿ ಜಯಚಂದ್ರ

ಟಿ ಬಿ ಜಯಚಂದ್ರ

ಮೊದಲ ಬಾರಿಗೆ ನಿನ್ನೆ ಕಣ್ತುಂಬ ನಿದ್ದೆ ಮಾಡಿದೆ. ಕಪ್ಪುಹಣಕ್ಕೆ ಒಂದು ಪರಿಹಾರ ಸಿಗಬೇಕಿತ್ತು, ಮೋದಿಯವರ ನಿರ್ಧಾರ ನನಗೆ ಸಂತೋಷ ತಂದಿದೆ. ಅತ್ಯಂತ ಖುಷಿಯಿಂದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ - ಕಾನೂನು ಸಚಿವ ಟಿ ಬಿ ಜಯಚಂದ್ರ.

ಪರಮೇಶ್ವರ್

ಪರಮೇಶ್ವರ್

ಈ ನಿರ್ಧಾರದ ಪರಿಣಾಮ ಏನಾಗಬಹುದು ಎಂದು ಈಗಲೇ ಹೇಳುವುದು ಕಷ್ಟ. ದೇಶದಲ್ಲಿರುವ ಕಪ್ಪುಹಣದ ಬಗ್ಗೆ ನನ್ನ ನಿಲುವನ್ನು ಈ ಹಿಂದೇನೂ ಹೇಳಿದ್ದೆ. ನಮ್ಮ ಪಕ್ಷದವರು ಮೋದಿಯವರ ಚುನಾವಣಾ ಪ್ರಣಾಳಿಕೆಯಂತೆ ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸ್ ತನ್ನಿ ಎಂದು ಹೇಳಿದ್ದೆವು - ಪರಮೇಶ್ವರ್, ಗೃಹಸಚಿವ ಮತ್ತು ಕೆಪಿಸಿಸಿ ಅಧ್ಯಕ್ಷರು.

ಡಿ ಕೆ ಶಿವಕುಮಾರ್

ಡಿ ಕೆ ಶಿವಕುಮಾರ್

ಮೋದಿ ನಿಜವಾಗಲೂ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಸ್ವಲ್ಪ ಕಾಲಾವಕಾಶ ನೀಡಬೇಕಾಗಿತ್ತು, ಜನರೇನು ನೂರು ರೂಪಾಯಿ ನೋಟನ್ನೇ ಇಟ್ಟುಕೊಂಡಿರುತ್ತಾರಾ? ಒಂದಂತೂ ಸತ್ಯ, ಅಧಿಕಾರಕ್ಕೇರಿಸಿದ ಜನರೇ, ಮೋದಿಯನ್ನು ಕೆಳಗಿಳಿಸಲಿದ್ದಾರೆ - ಇಂಧನ ಸಚಿವ ಡಿ ಕೆ ಶಿವಕುಮಾರ್.

ರಮೇಶ್ ಕುಮಾರ್

ರಮೇಶ್ ಕುಮಾರ್

ಇದೊಂದು ಸ್ವಾಗತಾರ್ಹ ಕ್ರಮ, ಒಟ್ಟಿನಲ್ಲಿ ಈ ಪ್ರಕ್ರಿಯೆ ಸರಿಯಾದ ದಾರಿಯಲ್ಲಿ ನಡೆದರೆ ಸಾಕು - ಆರೋಗ್ಯ ಸಚಿವ ರಮೇಶ್ ಕುಮಾರ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Congress leaders including CM Siddaramaiah's reaction on Rs. 500 and Rs.1000 currency note ban.
Please Wait while comments are loading...