ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಕಾಂಗ್ರೆಸ್-ಜೆಡಿಎಸ್‌ ಶಾಸಕರಿಗೆ ಬೆಂಗಳೂರಿಗೆ ಬರಲು ಬುಲಾವ್

|
Google Oneindia Kannada News

ಬೆಂಗಳೂರು, ಜನವರಿ 15: ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್‌ನ ಐದು ಶಾಸಕರು ಹಾಗೂ ಪಕ್ಷೇತರ ಇಬ್ಬರು ಶಾಸಕರು ಬಿಜೆಪಿ ಪಾಳಯಕ್ಕೆ ಹಾರಿದ ನಂತರ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ ಎಲ್ಲಾ ಶಾಸಕರನ್ನು ಒಂದೆಡೆ ಸೇರಿಸಲು ಹೊರಟಿದೆ.

ಬೆಂಬಲ ವಾಪಸ್ ಪಡೆದ ಇಬ್ಬರು ಶಾಸಕರು ಹೇಳಿದ್ದೇನು? ಬೆಂಬಲ ವಾಪಸ್ ಪಡೆದ ಇಬ್ಬರು ಶಾಸಕರು ಹೇಳಿದ್ದೇನು?

ಎಲ್ಲಾ ಕಾಂಗ್ರೆಸ್ ಶಾಸಕರು ನಾಳೆ ಸಂಜೆ ಒಳಗೆ ಬೆಂಗಳೂರಿಗೆ ಬರಬೇಕು ಎಂದು ಕೆಪಿಸಿಸಿ ಸೂಚನೆ ನೀಡಿದ್ದು, ಎಲ್ಲಾ ಶಾಸಕರೊಡನೆ ಕಾಂಗ್ರೆಸ್ ಮುಖಂಡರು ಮತ್ತು ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಭೆ ನಡೆಸಲಿದ್ದಾರೆ.

Operation ಕಮಲ ಯಶಸ್ಸಾಗಲು ಸಾಧ್ಯವಿಲ್ಲ ಅನ್ನೋದಿಕ್ಕೆ ಇಲ್ಲಿವೆ 4 ಕಾರಣಗಳು Operation ಕಮಲ ಯಶಸ್ಸಾಗಲು ಸಾಧ್ಯವಿಲ್ಲ ಅನ್ನೋದಿಕ್ಕೆ ಇಲ್ಲಿವೆ 4 ಕಾರಣಗಳು

ಸಭೆಯ ಬಳಿಕ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದ್ದು, ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ರೆಸಾರ್ಟ್‌ ರಾಜಕಾರಣ ಶುರುವಾಗಿದೆ. ಈಗಾಗಲೇ ಇಬ್ಬರು ಪಕ್ಷೇತರರ ಹಾಗೂ ಐದು ಅತೃಪ್ತ ಶಾಸಕರ ಬಲವನ್ನು ಕಳೆದುಕೊಂಡಿರುವ ಕಾಂಗ್ರೆಸ್‌ ಇನ್ನಷ್ಟು ಶಾಸಕರನ್ನು ಕಳೆದುಕೊಳ್ಳದಂತೆ ನಿಗಾ ವಹಿಸಲು ರೆಸಾರ್ಟ್‌ನತ್ತ ಮುಖ ಮಾಡಲಿದೆ.

Karnataka congress call all its MLAs to Bengaluru, they may go to resort

ಜೆಡಿಎಸ್‌ ಸಹ ತನ್ನೆಲ್ಲಾ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಎಲ್ಲಾ ಶಾಸಕರನ್ನು ಬೆಂಗಳೂರಿಗೆ ಕರೆಸಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಅವರೊಡನೆ ಮಾತನಾಡಲಿದ್ದಾರೆ. ಆ ನಂತರ ಅವರೂ ಸಹ ರೆಸಾರ್ಟ್ ಹಾದಿ ಹಿಡಿಯಲಿದ್ದಾರೆ.

ಅಲುಗಾಡಲು ಆರಂಭವಾದ ಸರ್ಕಾರ, ಎಚ್‌ಡಿಕೆ-ಕೆ.ಸಿ.ವೇಣುಗೋಪಾಲ್ ಭೇಟಿಅಲುಗಾಡಲು ಆರಂಭವಾದ ಸರ್ಕಾರ, ಎಚ್‌ಡಿಕೆ-ಕೆ.ಸಿ.ವೇಣುಗೋಪಾಲ್ ಭೇಟಿ

ಬಿಜೆಪಿಯ ಎಲ್ಲಾ ಶಾಸಕರು ಹರಿಯಾಣದ ಗುರುಗ್ರಾಮದ ಐಟಿಸಿ ಗೋಲ್ಡ್‌ ರೆಸಾರ್ಟ್‌ನಲ್ಲಿದ್ದು, ಆಪರೇಷನ್ ಕಮಲ ಪೂರ್ಣವಾಗುವವರೆಗೂ ಅವರು ಮರಳುವ ಸಾಧ್ಯತೆ ಬಹು ಕಡಿಮೆ.

English summary
Karnataka cogress call all its MLAs to Bengaluru they may go to resort. JDS also call their MLAs to Bengaluru. Both parties wats to protect them MLAs from Operation kamala of Karnataka BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X