ಕರ್ನಾಟಕದಲ್ಲಿ ಕೊರೊನಾ ನಿಯಮ ಉಲ್ಲಂಘನೆ: ವಸೂಲಿಯಾದ ದಂಡವೆಷ್ಟು?
ಬೆಂಗಳೂರು, ಆಗಸ್ಟ್ 11: ಮಾಸ್ಕ್ ಧರಸದೇ ಇರುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವುದು, ಗೃಹ ಬಂಧನ ನಿರ್ಲಕ್ಷ್ಯ ಸೇರಿದಂತೆ ಕರ್ನಾಟಕ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವವರಿಂದ ಬರೋಬ್ಬರಿ 6.65 ಕೋಟಿ ರೂ ದಂಡ ವಿಧಿಸಲಾಗಿದೆ.
Recommended Video
ಒಟ್ಟು 5.7 ಲಕ್ಷ ಮಂದಿ ಗೃಹ ಬಂಧನದ ನಿಯಮಗಳನ್ನು ಮೀರಿದ್ದಾರೆ. 5821 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ ನಿಮಯವನ್ನು 3246 ಮಂದಿ ಪದೇ ಪದೇ ಉಲ್ಲಂಘಿಸಿದ್ದಾರೆ.
ಸರ್ಕಾರ ಬೆಂಗಳೂರಿನಲ್ಲಿರುವ 5 ಕೊವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಲು ತೀರ್ಮಾನ ಕೈಗೊಂಡಿದೆ. ಒಂದು ವೇಳೆ ಆರೈಕೆ ಕೇಂದ್ರಗಳನ್ನು ಮುಚ್ಚಿದರೆ ನಗರದಲ್ಲಿ ಪ್ರಸ್ತುತ ಲಭ್ಯವಿರುವ 4,267 ಹಾಸಿಗೆಗಳ ಪೈಕಿ 2,614 ಹಾಸಿಗೆಗಳು ಲಭ್ಯವಾಗುವುದಿಲ್ಲ.

ಬೆಂಗಳೂರು ನಗರದಲ್ಲಿರುವ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 75,428. ನಗರದಲ್ಲಿ ಒಟ್ಟು ಸರ್ಕಾರ ನಡೆಸುವ 11 ಕೊವಿಡ್ ಆರೈಕೆ ಕೇಂದ್ರಗಳಿವೆ. ಇವುಗಳಲ್ಲಿ ನೂರಾರು ಹಾಸಿಗೆಗಳು ಖಾಲಿ ಇವೆ.
ಬೆಂಗಳೂರು ನಗರದಲ್ಲಿರುವ ಕೊವಿಡ್ ಆರೈಕೆ ಕೇಂದ್ರಗಳ ಉಸ್ತುವಾರಿಯನ್ನು ಐಎಎಸ್ ಅಧಿಕಾರಿ ರಾಜೇಂದ್ರ ಕಟಾರಿಯಾ ನೋಡಿಕೊಳ್ಳುತ್ತಿದ್ದಾರೆ. ನಗರದ ಕೊವಿಡ್ ಆರೈಕೆ ಕೇಂದ್ರದಲ್ಲಿ ಶೇ 20ರಷ್ಟು ಬೆಡ್ ಖಾಲಿ ಇದೆ. ಆದ್ದರಿಂದ, ಕೇಂದ್ರಗಳನ್ನು ಮುಚ್ಚುವ ಆಲೋಚನೆ ಇದೆ ಎಂದರು.












Click it and Unblock the Notifications