ಜಾತಿ ಪದ್ಧತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಜಾತಿ ಪದ್ಧತಿ ಸಮಾಜದಲ್ಲಿ ವಿಷ ಬೇರಿನಂತೆ ಹರಡಿದ್ದು, ಇದೇ ಕಾರಣಕ್ಕೆ ಭಾರತ ಹಲವು ರೀತಿಯಲ್ಲಿ ಸಾಮಾಜಿಕ ಸಮಸ್ಯೆ ಎದರಿಸುತ್ತಿದೆ. ಆದ್ರೂ ಈ ಜಾತಿ ಪದ್ಧತಿ ತೊಲಗಿಸಬೇಕು ಅಂತಾ ವಿಶ್ವಗುರು ಬಸವಣ್ಣ ಅವರಿಂದ ಹಿಡಿದು ಹಲವಾರು ಮಹಾತ್ಮರು ಪ್ರಯತ್ನಿಸಿದ್ರು. ಇ‍ಷ್ಟಾದ್ರೂ ಭಾರತೀಯ ಸಮಾಜದಲ್ಲಿ ವಿಷ ಬೀಜದಂತೆ ಜಾತಿ ಪದ್ಧತಿ ಹರಡಿಕೊಂಡಿದ್ದು, ಹೀಗಿದ್ದಾಗ ಸಿಎಂ ಸಿದ್ದರಾಮಯ್ಯ ಅವರು ಜಾತಿ ಪದ್ಧತಿಯ ಬಗ್ಗೆ ಮಾತನಾಡಿದ್ದಾರೆ.

ರಾಜ್ಯದಲ್ಲಿ ಈಗ ಜಾತಿ ಗಣತಿ ವರದಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅದರಲ್ಲೂ ಈಗ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಜಾತಿ ಗಣತಿ ಬಿಡುಗಡೆ ಮಾಡಿಯೇ ಸಿದ್ಧ ಎನ್ನುತ್ತಿದೆ. ಈ ಸಮಯದಲ್ಲೇ ಸಿಎಂ ಸಿದ್ದರಾಮಯ್ಯ ಅವರು ಭಾರತ ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ಪದ್ಧತಿ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಕರ್ನಾಟಕದ ಸಿಎಂ, ಜಾತಿ ಪದ್ಧತಿ ಬಗ್ಗೆ ಹೇಳಿದ್ದು ಏನು? ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

Karnataka CM Siddaramaiah Spoke About The Caste System In Our Society

ಒಂದು ಜಾತಿಗೆ ಸೀಮಿತವಾಗಬಾರದು

ಹಿಂದಿನ ಜನ್ಮ, ಮುಂದಿನ ಜನ್ಮ ಎನ್ನುವುದೇ ಇಲ್ಲ. ಈ ಜನ್ಮದಲ್ಲಿ ನಾವು ಮಾಡುವ ಕೆಲಸವೆ ಮುಖ್ಯ. ಈ ಹಿನ್ನೆಲೆ ಬಸವಾದಿ ಶರಣರು ಸೇರಿದಂತೆ ಕನಕದಾಸರು ಕರ್ಮ ಸಿದ್ಧಾಂತ, ಜನ್ಮದ ಮೌಡ್ಯ ಸಾರಾಸಗಟಾಗಿ ತಿರಸ್ಕರಿಸಿದರು. ಕಾಗಿನೆಲೆ ಪೀಠವು ಯಾವತ್ತೂ ಒಂದು ಜಾತಿಯ ನೆಲೆ ಆಗಬಾರದು. ಇದು ಎಲ್ಲ ಶೋಷಿತ ಸಮುದಾಯದ ನೆಲೆ ಆಗಬೇಕು ಕನಕ ಜಯಂತಿ ಪ್ರಯುಕ್ತ ಭಾವೈಕ್ಯತಾ ಸಮಾವೇಶ ಏರ್ಪಿಡಿಸಿರುವ ಶ್ರೀ ಮಠದ ಗುರುಗಳಿಗೆ ಹೃದಯಪೂರ್ವಕ ವಂದನೆ, ಅಂತಾ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ.

ಮನುಷ್ಯ ಪ್ರೇಮವನ್ನ ಜಗತ್ತಿಗೆ ನೀಡಿದರು

ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಅವರು, ಕಾಗಿನೆಲೆ ಮಹಾಸಂಸ್ಥಾನ ಕನಕ‌ ಗುರುಪೀಠದಲ್ಲಿ ಆಯೋಜಿಸಿದ್ದ 536ನೇ ಶ್ರೀ ಕನಕ ಜಯಂತ್ಯುತ್ಸವ & ಭಾವೈಕ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು. ನಾವ್ಯಾರೂ ಅರ್ಜಿ ಹಾಕೊಂಡು ಜಾತಿ ಅಥವಾ ಧರ್ಮ ಆರಿಸಿಕೊಂಡು ಹುಟ್ಟಿಲ್ಲ. ಮೊದ್ಲು ಮನುಷ್ಯರು ಮನುಷ್ಯರ ಪ್ರೀತಿಸಬೇಕು. ಜಾತಿ & ಧರ್ಮ ರಹಿತ ಮನುಷ್ಯ ಪ್ರೇಮವನ್ನ ಕನಕದಾಸರು ಜಗತ್ತಿಗೆ ನೀಡಿದ್ರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಮೂಲಕ ಜಾತಿ ಪದ್ಧತಿ ವಿರುದ್ಧ ಸಿಎಂ ಸಿದ್ದರಾಮಯ್ಯ, ತೀವ್ರ ವಾಗ್ದಾಳಿ ನಡೆಸಿದರು.

Karnataka CM Siddaramaiah Spoke About The Caste System In Our Society

ಕುರುಬರ ಮಠ ಆಗಬೇಕು ಎಂದು...

ಇನ್ನು ತಮ್ಮ ಮಾತು ಮುಂದುವರಿಸಿದ ಸಿಎಂ ಸಿದ್ದರಾಮಯ್ಯ ಅವರು, ಕನಕಗುರು ಪೀಠ ಸ್ಥಾಪಿಸುವಾಗ ಇದನ್ನ ಕುರುಬರ ಮಠ ಆಗಬೇಕು ಎಂದು ಇಚ್ಚಿಸಲೇ ಇರ್ಲಿಲ್ಲ. ಎಲ್ಲ ಶೋಷಿತ ಧರ್ಮಗಳ ಮಠ ಆಗಬೇಕು ಎನ್ನುವುದು ನಮ್ಮೆಲ್ಲರ ಉದ್ದೇಶ ಆಗಿತ್ತು, ಎಂದರು ಕರ್ನಾಟಕದ ಸಿಎಂ ಸಿದ್ದರಾಮಯ್ಯ ಈ ಮೂಲಕ ನಮ್ಮ ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ಪದ್ಧತಿ ಬಗ್ಗೆ ವಾಗ್ದಾಳಿ ನಡೆಸಿದ್ರು. ಅಲ್ಲದೆ ಶೋಷಿತ ವರ್ಗಗಳ ಪರ ಮತ್ತೊಮ್ಮೆ ಮಾತನಾಡಿದ್ರು.

ಬಸವಣ್ಣ, ಅಂಬೇಡ್ಕರ್, ಕುವೆಂಪು...

ಹಾಗೆ ಧರ್ಮ ಇರುವುದು ನಮಗಾಗಿ. ನಾವು ಧರ್ಮಕ್ಕಾಗಿ ಅಲ್ಲ. ಅದಕ್ಕೇ ಕನಕದಾಸರು ಕುಲ ಕುಲವೆಂದು ಬಡಿದಾಡದಿರಿ ಎಂದು ಹೆಳಿದ್ದು. ಬಸವಣ್ಣನವರು "ಇವ ನಮ್ಮವ ಇವ ನಮ್ಮವ" ಎಂದಿದ್ದು. ಕುವೆಂಪು ಅವರು, "ಹುಟ್ಟುವಾಗ ಎಲ್ಲರೂ ವಿಶ್ವ ಮಾನವರು" ಎಂದರು, ಇನ್ನ ಅಂಬೇಡ್ಕರ್ ಅವರು ಸಮ ಸಮಾಜದ ಬಗ್ಗೆ ಹೇಳಿದರು. ಬಸವಾದಿ ಶರಣರು, ಕನಕದಾಸರು, ಅಂಬೇಡ್ಕರ್, ಕುವೆಂಪು, ಸೂಫಿಗಳ ಆಶಯಗಳೆಲ್ಲಾ ಒಂದೇ ಆಗಿತ್ತು. ಆದ್ದರಿಂದ ನಾವುಗಳು ಇವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+