‘ಇದನ್ನ ನೋಡಿದ್ರೆ ಬಿಜೆಪಿ ಕಾಲದ ರೇಪ್ ಬಗ್ಗೆ ಅರ್ಥವಾಗುತ್ತೆ’ ಸಿಎಂ ಸಿದ್ಧರಾಮಯ್ಯ

ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯ ಘಟನೆ ಇದೀಗ ಕರ್ನಾಟಕ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರೇಮಿಗಳಿಬ್ಬರು ಓಡಿ ಹೋಗಿದ್ದರು ಅಂತಾ ಆರೋಪಿಸಿ, ಮಹಿಳೆಯೊಬ್ಬರನ್ನ ವಸ್ತ್ರ ರಹಿತರಾಗಿ ಮಾಡಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದರು. ಒಂದ್ಕಡೆ ಕಾಂಗ್ರೆಸ್‌ನ ವಿರುದ್ಧ ಇದೇ ವಿಚಾರ ಪ್ರಸ್ತಾಪ ಮಾಡಿ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಈಗ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 'ಬಿಜೆಪಿಯವರಿಗೆ ಸ್ವಲ್ಪ ಬುದ್ದಿ ಕಡಿಮೆ ಅನಿಸುತ್ತದೆ. ಲೇಹರ್ ಸಿಂಗ್ ಅವರು ಏನು ಆರೋಪ ಮಾಡೋದು' ಎಂದಿದ್ದಾರೆ. ಅಲ್ಲದೆ ಬೆಳಗಾವಿ ಘಟನೆಯಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ. ಸರ್ಕಾರ ಎಲ್ಲಾ ರೀತಿ ಕಾನೂನು ಕ್ರಮಗಳನ್ನ ಕೈಗೊಂಡಿದೆ. ಹೆಣ್ಣು ಮಗಳ ಮೇಲೆ ದೌರ್ಜನ್ಯ ಆಗಿರೋದು ಖಂಡನೀಯ. ನಮ್ಮ ಗೃಹ ಸಚಿವರು ತಕ್ಷಣ ಅಲ್ಲಿ ಹೋದರು. ಆರೋಪಿಗಳನ್ನು ಕೂಡಲೇ ಅರೆಸ್ಟ್ ಮಾಡಲಾಗಿದೆ. ನಡ್ಡಾ & ಬಿಜೆಪಿ ನಾಯಕರು ಇಲ್ಲಿ ಅನಗತ್ಯ ರಾಜಕೀಯ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ರು.

Karnataka CM Siddaramaiah Reacts Over Belagavi Incident

ಬಿಜೆಪಿ ಆಡಳಿತದ ವಿರುದ್ಧ ಆರೋಪ

ಸಿಎಂ ಸಿದ್ದರಾಮಯ್ಯ ಅವರು ಇದೇ ವೇಳೆ ಬಿಜೆಪಿ ಆಡಳಿತದ ವಿರುದ್ಧವೂ ಗಂಭೀರವಾದ ಆರೋಪ ಮಾಡಿದ್ದಾರೆ. ರಾಷ್ಟ್ರೀಯ ಅಪರಾಧ ಅಂಕಿ ಅಂಶ ತಗೆದು ನೋಡಿ ಬಿಜೆಪಿ ಕಾಲದಲ್ಲಿ ಏನಾಗಿದೆ ಅಂತಾ ಗೊತ್ತಾಗುತ್ತೆ. ಉತ್ತರ ಪ್ರದೇಶದ ಘಟನೆಯನ್ನು ಉದಾಹರಣೆ ಆಗಿ ನೀಡಿ, ಇದಕ್ಕೆ ನಡ್ಡಾ ಏನ್ ಹೇಳ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ವಿರುದ್ಧವೂ ಸಿಎಂ ಸಿದ್ದರಾಮಯ್ಯ ಗರಂ ಆದರು.

ಯತೀಂದ್ರ & ಜಾತಿ ಗಣತಿ ಬಗ್ಗೆ

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮಗ ಯತೀಂದ್ರ ಅವರ ಬಗ್ಗೆ ಮಾತನಾಡಿದ್ರು ಯತೀಂದ್ರ ಅವರನ್ನು ಲೋಕಸಭೆಗೆ ನಿಲ್ಲಸೋದಿಲ್ಲ. ಆದ್ರೆ ಜನ ಬಯಸಿದ್ರೆ ಏನ್ ಮಾಡೋದು ಎಂದು ಪ್ರಶ್ನಿಸಿದರು. ಇದರ ಜೊತೆಗೆ, ಜಾತಿ ಗಣತಿ ವರದಿ ಬಗ್ಗೆ ಮಾತನಾಡಿದ್ದಾರೆ ಸಿಎಂ. ಜಾತಿ ಗಣತಿ ವರದಿ ಇನ್ನೂ ಬಂದಿಲ್ಲ. ಅದ್ರಲ್ಲಿ ಏನಿದೆ ಅನ್ನೋದು ಗೊತ್ತಾ ನಿಮಗೆ, ನನಗೂ ಗೊತ್ತಿಲ್ಲ? ಅವರಿಗೆ ಕೂಡ ಗೊತ್ತಿಲ್ಲ ಎಂದು ಜಾತಿ ಗಣತಿ ಕುರಿತು ಪ್ರತಿಕ್ರಿಯೆ ನೀಡಿದರು ಸಿಎಂ ಸಿದ್ದರಾಮಯ್ಯ.

Karnataka CM Siddaramaiah Reacts Over Belagavi Incident

ಹಾಗೇ ಈ ವೇಳೆ, ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡೋ ವಿಚಾರದ ಕುರಿತಾಗಿ, ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ. ಸರ್ಕಾರ ತೀರ್ಮಾನ ಮಾಡಿಲ್ಲ, ಅದು ಅವರವರ ಅಭಿಪ್ರಾಯ ಎಂದು ತಿಳಿಸಿದರು. ಈ ಮೂಲಕ ರಾಜ್ಯದಲ್ಲಿ ಭಾರಿ ಚರ್ಚೆಗೆ ವೇದಿಕೆಯಾಗಿರುವ ವಿಚಾರದ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ ಕರ್ನಾಟಕದ ಸಿಎಂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+