Gruha Jyothi Scheme Launch: ಕಲಬುರಗಿಯಲ್ಲಿ ‘ಗೃಹ ಜ್ಯೋತಿ’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ: ಸಾವಿರಾರು ಜನರು ಭಾಗಿ

ಕಲಬುರಗಿ, ಆಗಸ್ಟ್‌ 05: 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ 'ಗೃಹ ಜ್ಯೋತಿ' ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಈ ವೇಳೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.

ಈ ಯೋಜನೆಯನ್ನು ಆಗಸ್ಟ್ 1 ರಂದು ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ವಿದ್ಯುತ್‌ ಬಳಕೆ ಮತ್ತು ರಾಜ್ಯ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ 'ಶೂನ್ಯ' ಬಿಲ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ.

Karnataka CM Siddaramaiah Officially Lights Gruha Jyothi Scheme in Kalaburagi

ಇಂಧನ ಸಚಿವ ಕೆ.ಜೆ.ಜಾರ್ಜ್, ಸಚಿವರಾದ ಶರಣಪ್ರಕಾಶ ಪಾಟೀಲ್, ರಹೀಂ ಖಾನ್‌, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಯೋಜನೆಯ ನೋಂದಣಿ ಜುಲೈ 1 ರಂದು ಪ್ರಾರಂಭವಾಗಿದೆ. ಜುಲೈ 27 ರ ಮೊದಲು ನೋಂದಾಯಿಸಿದ ಜನರು ಜುಲೈ ತಿಂಗಳಿನ ಉಚಿತ ವಿದ್ಯುತ್‌ಗೆ ಅರ್ಹರಾಗಿರುತ್ತಾರೆ. ಅದರ ನಂತರ ನೋಂದಾಯಿಸಿದ ಗ್ರಾಹಕರನ್ನು ಆಗಸ್ಟ್ ತಿಂಗಳಿಗೆ ಪರಿಗಣಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

Karnataka CM Siddaramaiah Officially Lights Gruha Jyothi Scheme in Kalaburagi

2.5 ಕೋಟಿ ಅರ್ಹ ಫಲಾನುಭವಿಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಉಳಿದವರು ಇನ್ನೂ ನೋಂದಾಯಿಸಿಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ ಐದು 'ಖಾತರಿ'ಗಳಲ್ಲಿ ಈ ಯೋಜನೆಯೂ ಒಂದಾಗಿದೆ.

ನಿಯಮಗಳ ಪ್ರಕಾರ, ಇಂಧನ ಪೂರೈಕೆ ಕಂಪನಿಗಳು 12 ತಿಂಗಳ ಬಳಕೆಯ ಸರಾಸರಿಯನ್ನು ತೆಗೆದುಕೊಳ್ಳುತ್ತವೆ. ಈ ಸರಾಸರಿಗೆ 10 ಪ್ರತಿಶತವನ್ನು ಸೇರಿಸಿ ಪ್ರತಿ ಗ್ರಾಹಕನಿಗೆ ಉಚಿತ ವಿದ್ಯುತ್‌ ನೀಡಲು ಸರ್ಕಾರ ಯೋಜನೆ ರೂಪಿಸಿದೆ.

Karnataka CM Siddaramaiah Officially Lights Gruha Jyothi Scheme in Kalaburagi

200 ಯೂನಿಟ್‌ಗಿಂತ ಕಡಿಮೆ ಇರುವ ಗ್ರಾಹಕರು ಬಿಲ್‌ ಪಾವತಿಸುವಂತಿಲ್ಲ. ಅಂದರೆ, ಅವರು ಶೂನ್ಯ ಬಿಲ್‌ ಅನ್ನು ಪಡೆಯುತ್ತಾರೆ. ಹೆಚ್ಚು ವಿದ್ಯುತ್ ಬಳಸುವ ಜನರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 200 ಯೂನಿಟ್‌ಗಿಂತ ಹೆಚ್ಚು ಬಳಕೆಯಾದರೆ ಜನರು ಸಂಪೂರ್ಣ ಬಿಲ್ ಪಾವತಿಸಬೇಕು.

ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಇಂಧನ ಸಚಿವ ಜಾರ್ಜ್‌ ಹೇಳಿದ್ದೇನು?

ನೋಂದಾವಣೆ ಬಗ್ಗೆ ಮಾತನಾಡಿರುವ ಇಂಧನ ಸಚಿವ ಕೆ ಜೆ ಜಾರ್ಜ್‌ ಅವರು, 'ಅನೇಕರು ಯೋಜನೆಗೆ ನೋಂದಾಯಿಸಿಕೊಂಡಿಲ್ಲ. ಒಂದಕ್ಕಿಂತ ಹೆಚ್ಚು ಆರ್‌ಆರ್‌ ಸಂಖ್ಯೆಗಳನ್ನು ಹೊಂದಿರುವ ಕಾರಣ ಕೆಲವನ್ನು ತಿರಸ್ಕರಿಸಲಾಗಿದೆ. ಇನ್ನೂ ಹಲವರು ಅರ್ಜಿ ಸಲ್ಲಿಸಬೇಕಿದೆ' ಎಂದು ಹೇಳಿದ್ದಾರೆ.

ಇಲಾಖೆಯ ದಾಖಲೆಗಳ ಪ್ರಕಾರ, ಯೋಜನೆಗೆ ನೋಂದಾಯಿಸಿದ 1,41,23,240 ಗ್ರಾಹಕರಲ್ಲಿ, 1,23,10,788 ಗ್ರಾಹಕರು ನೇರವಾಗಿ ಗೃಹ ಜ್ಯೋತಿ ಯೋಜನೆಯಡಿ ನೋಂದಾಯಿಸಿದ್ದರೆ. 18,12,452 ಗ್ರಾಹಕರು ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಮತ್ತು ಅಮೃತ ಅಡಿಯಲ್ಲಿ ನೋಂದಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+