Karnataka CM: ದೆಹಲಿ ಫೈನಲ್ ಮೀಟಿಂಗ್‌ನಲ್ಲಿ ಬಂಡೆಗೆ ಬಲ, ಟಗರುಗೆ ಬೆಂಬಲ ಸಿಗುತ್ತಾ?

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಮತ ಪಡೆದು ಜಯ ಸಾಧಿಸಿದೆ. ಆದರೆ ಫಲಿತಾಂಶ ಬಂದು ನಾಲ್ಕು ದಿನವಾದರೂ ಇನ್ನೂ ಸಿಎಂ ಘೋಷಣೆ ಆಗಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಖರ್ಚಿಗಾಗಿ ಹಗ್ಗಜಗ್ಗಾಟ ನಡೆದಿದೆ. ಹೀಗಾಗಿ ಸಿಎಂ ಆಯ್ಕೆ ಚಂಡು ಸದ್ಯ ಹೈಕಮಾಂಡ್ ಅಂಗಳದಲ್ಲಿ ಬಿದ್ದಿದೆ. ಇಂದು ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ಫೈನಲ್ ಮೀಟಿಂಗ್ ನಡೆಯಲಿದ್ದು ಇಂದೇ ಸಿಎಂ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆಯುವ ಮೂಲಕ ಅಧಿಕಾರ ಗಳಿಸಿರುವ ಕಾಂಗ್ರೆಸ್​​ ಪಕ್ಷಕ್ಕೀಗ ಮುಖ್ಯಮಂತ್ರಿ ಆಯ್ಕೆಯೇ ಬಹುದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿರುವ ವೀಕ್ಷಕರು ಆ ಕುರಿತು ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಒಪ್ಪಿಸಿದ್ದರು.

Karnataka CM

ಅದಾದ ನಂತರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಇಬ್ಬರ ಜತೆಗೂ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದಾಗ್ಯೂ, ಮಂಗಳವಾರ ರಾತ್ರಿಯಾದೂ ಅಂತಿಮ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿದೆ.

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಕೂಡ ತಮ್ಮ ಪಟ್ಟು ಸಡಿಲಗೊಳಿಸಲಿಲ್ಲ. ಇಂದಿನ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಜೊತೆ ಸಭೆ ನಡೆಯಲಿದೆ.

Karnataka CM

ನೂತನವಾಗಿ ಆಯ್ಕೆಯಾದ 60 ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರಿಗೆ ಸಿಎಂ ಆಯ್ಕೆ ಮಾಡಲು ಬೆಂಬ ಸೂಚಿಸಿದ್ದಾರೆ. ಇತ್ತು ಡಿಕೆ ಶಿವಕುಮಾರ್ ಅವರಿಗೆ 40 ಶಾಸಕರು ಬೆಂಬಲ ನೀಡಿದರೆ ಇನ್ನು ಉಳಿದವರು ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿರುತ್ತೇವೆ ಎಂದಿದ್ದಾರೆ.

ಇತ್ತ ಸಿದ್ದರಾಮಯ್ಯ ಖರ್ಗೆ ಸಭೆ ಬಳಿಕ ಫುಲ್ ಖುಷಿಯಾಗಿದ್ದಾರೆ. ಆದರೂ ಮೇಲಿಂದ ಮೇಲೆ ಮೀಟಿಂಗ್ ಆದರೂ ಸಿಎಂ ಯಾರು ಎಂದು ಫೈನಲ್ ಆಗಿಲ್ಲ.

ಸಿದ್ದರಾಮಯ್ಯ ವಾದವೇನು? ಚಾಮರಾಜನಗರ ಹಾಗೂ ಬೀದರ್ ವರೆಗೂ ಸಿದ್ದರಾಮಯ್ಯ ವರ್ಚಸ್ಸು ಇದೆ. ಅಹಿಂದ ಮತ ಗಳಿಸುವುದರಲ್ಲಿ ನನ್ನ ಪಾತ್ರ ದೊಡ್ಡದು. ಇದಲ್ಲದೆ ಶಾಸಕರು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದಾರೆ. ಎಲ್ಲಾ ಸಮುದಾಯಗಳು ನನ್ನ ಪರ ಮತಗಳನ್ನು ಹಾಕಿವೆ. ಇದು ನನ್ನ ಕೊನೆ ಚುನಾವಣೆ. ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ನನಗೆ ಸಿಎಂ ಸ್ಥಾನ ಕೊಡಿ ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.

Karnataka CM

ಡಿಕೆ ಶಿವಕುಮಾರ್ ವಾದವೇನು?

ಕೆಪಿಸಿಸಿ ಅಧ್ಯಕ್ಷರಿಗೆ ಸಿಎಂ ಸ್ಥಾನ ಕೊಡುವುದು ಸಂಪ್ರದಾಯ. ಕಾಂಗ್ರೆಸ್‌ ಪಕ್ಷ ಕಟ್ಟಿದವನು ನಾನು. ಲಿಂಗಾಯತ ಮತಗಳು ನನ್ನಿಂದ ಬಂದಿವೆ. ಒಂದು ವೇಳೆ ನನಗೆ ಸಿಎಂ ಸ್ಥಾನ ಕೊಡದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಮತಗಳು ದೂರವಾಗಬಹುದು.

ನನ್ನಿಂದಾಗಿ ಹೆಚ್ಚು ಮತಗಳನ್ನು ಬಂದಿವೆ. ದಲಿತರಿಗೆ ಕಾಂಗ್ರೆಸ್‌ ದೊಡ್ಡ ಪಕ್ಷ, ಒಕ್ಕಲಿಗ, ಲಿಂಗಾಯತ ಹಾಗೂ ದಲಿತ ಮತಗಳು ನನ್ನಂದಲೇ ಕಾಂಗ್ರೆಸ್‌ಗೆ ಬಂದಿವೆ. ಹೀಗಾಗಿ ನನಗೆ ಸಿಎಂ ಸ್ಥಾನ ಕೊಡಿ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+