ಸಿಎಂ, ಡಿಸಿಎಂ ಬಿಕ್ಕಟ್ಟು: ದೆಹಲಿಯಲ್ಲಿ ಸಿದ್ಧವಾಯಿತು ಮಾಸ್ಟರ್‌ ಪ್ಲ್ಯಾನ್‌

ಕಾಂಗ್ರೆಸ್‌ ಸರ್ಕಾರ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಕೊಂಡಾಗಲೇ ವಿಘ್ನಗಳು ಎದುರಾಗಿವೆ. ಮೊದಲು ಲೊಕಸಭಾ ಚುನಾವಣೆಯಲ್ಲಿ ಪ್ರದರ್ಶನ್‌ ಸರ್ಕಾರಕ್ಕೆ ತಲೆನೋವಾದರೆ, ಈಗ ಪಕ್ಷದಲ್ಲಿನ್ನ ಭಿನ್ನಾಭಿಪ್ರಾಯವೇ ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿಕೊಡುತ್ತಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಒಂದೇ ಒಂದು ವಿಷಯ ಅಂದರೆ ಅದು ಮುಖ್ಯಮಂತ್ರಿ ಬದಲಾವಣೆ..

ಇಷ್ಟು ದಿನ ಈ ಸುದ್ದಿ ಬರಿ ಊಹಾಪೋಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಈಗ ರಾಜಕೀಯ ಅಖಾಡಕ್ಕೆ ಸ್ವಾಮಿಜಿಗಳು ಎಂಟ್ರಿ ನೀಡಿದ ಮೇಲೆ ಈ ಸುದ್ದಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಇದರ ಪರ ಹಾಗೂ ವಿರೋಧ ಹೇಳಿಕೆಗಳನ್ನು ಆಡಳಿತಾರೂಡ ಸರ್ಕಾರದ ಶಾಸಕರು ಬಹಿರಂಗ ಹೇಳಿಕೆ ನೀಡುತ್ತಿರುವುದು ನಾಯಕರ ತಲೆ ನೋವು ಹೆಚ್ಚಿಸಿದೆ. ಅಲ್ಲದೆ ಹೆಚ್ಚುವರಿ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸುವ ಹೇಳಿಕೆಯೂ ಸಹ ಈಗ ಬಿಸಿ ತುಪ್ಪದಂತೆ ಆಡಳಿತಾರೂಢ ಪಕ್ಷಕ್ಕೆ ಕಾಡುತ್ತಿದೆ.

karnataka CM and DCM Crisis Master Plan Ready in Delhi

ದೆಹಲಿಯಲ್ಲಿ ಮಹತ್ವದ ಸಭೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರ ನಡುವೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ರಾಜ್ಯದಲ್ಲಿನ ಬೆಳವಣಿಗಗಳ ಬೆನ್ನಲ್ಲೆ ಸಿಎಂ ಸಿದ್ಧರಾಮಯ್ಯ ದೆಹಲಿಯಲ್ಲಿ ಪಕ್ಷದ ಮುಖಂಡರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ತಾನು ಏನು ಕಮ್ಮಿ ಇಲ್ಲ ಎಂಬಂತೆ ಡಿಕೆ ಶಿವಕುಮಾರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಡಿಕೆ ಶಿವಕುಮಾರ್‌ ಅವರ ಸ್ಥಾನದ ಮೇಲೆ ಹಲವರ ಕಣ್ಣು ನೆಟ್ಟಿದೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಎರಡು ಪ್ರಮುಖ ಖಾತೆಗಳನ್ನು ಹೊಂದಿರುವುದು ಎದುರಾಳಿ ಬಣದ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಈ ಬಗ್ಗೆ ಹೈಕಮಾಂಡ್‌ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಇನ್ನು ಹಲವು ಚುನಾವಣೆಗಳು ನಡೆಯಬೇಕಿದೆ. ಅಲ್ಲಿಯವರೆಗೂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು

18ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ನಂಬಿ ಹಲವು ಸಮುದಾಯಗಳು ಮತ ಹಾಕಿವೆ. ಆ ಸಮುದಾಯದ ನಾಯಕರಿಗೂ ವಿಶೇಷ ಸ್ಥಾನ ಮಾನದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಹೈ ಕಮಾಂಡ್‌ ಯೋಚಿಸುವ ಸಾಧ್ಯತೆ ಇದೆ. ಇನ್ನು ಸಿದ್ಧರಾಮಯ್ಯ ಬಣದ ಪರಿಶಿಷ್ಟ ಪಂಗಡದ ಮುಖಂಡ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಹ ಕೆಪಿಸಿಸಿ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಅವರು ಅಧ್ಯಕ್ಷ ಸ್ಥಾನವನ್ನು ತಮಗೆ ನೀಡಿದರೆ, ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದು ತಿಳಿಸಿದ್ದಾರೆ. ಚುನಾವಣೆಯಲ್ಲಿ ಪಕ್ಷವನ್ನು ನಂಬಿ ಮತ ಚಲಾಯಿಸಿದ ಉತ್ತರ ಕರ್ನಾಟಕದ ಭಾಗದ ವೀರಶೈವ-ಲಿಂಗಾಯತ ನಾಯಕರನ್ನೂ ಸಹ ಈ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಇದೆ.

karnataka CM and DCM Crisis Master Plan Ready in Delhi

ನಾಯಕರ ಈ ಜಟಾಪಟಿ ಈಗ ಹೈಕಮಾಂಡ್‌ ಅಂಗಳಕ್ಕೆ ಹೋಗಿ ನಿಂತಿದೆ. ಕಾಂಗ್ರೆಸ್‌ ಹೈ ಕಮಾಂಡ್‌ ನಾಯಕರ ಶಮನವನ್ನು ಬಗೆ ಹರಿಸಲು ಯಾವ ಹೊಸ ಪ್ಲ್ಯಾನ್‌ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+