ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲದಕ್ಕೂ ಮೋದಿ ಮೋದಿ ಅಂದರೆ ರಾಜ್ಯ ಬಿಜೆಪಿಗೆ ಆಗೋದು ಇದೇ ಗತಿ!

|
Google Oneindia Kannada News

Recommended Video

Narendra Modi: ಬಿಜೆಪಿ ನಾಯಕರು ಹೆಚ್ಚು ನರೇಂದ್ರ ಮೋದಿ ಮೇಲೆ ಅವಲಂಬಿತರಾದರೆ ಹೀಗೆ ಆಗೋದು

ಈಗ ತಾನೇ ಮುಗಿದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿರಬಹುದು, ಕಳೆದ ವರ್ಷದ ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ ಸಿಂಗಲ್ ಲಾರ್ಜೆಸ್ಟ್ ಪಕ್ಷ ಆಗಿರಬಹುದು, ಆದರೆ ಹೋದ ತಿಂಗಳಲ್ಲಿ (ಮೇ 2019) ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ?

ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಮತ್ತು ಅಸೆಂಬ್ಲಿ ಚುನಾವಣೆಯಲ್ಲೂ ಒಂದಷ್ಟರ ಮಟ್ಟಿಗೆ ಪ್ರಭಾವೀ ಕೇಂದ್ರ ನಾಯಕರುಗಳ ಛಾಪು ಇರುವುದು ಸಹಜ. ಅದರ ಗುಂಗಿನಲ್ಲೇ ಚುನಾವಣೆ ಗೆಲ್ಲುವುದನ್ನೂ ನೋಡಿಕೊಂಡು ಬರುತ್ತಿದ್ದೇವೆ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದು ರಾಜ್ಯ ನಾಯಕರ ಮತ್ತು ಸ್ಥಳೀಯ ಮುಖಂಡರ ವರ್ಚಸ್ಸಿನಿಂದ.

ಸ್ಥಳೀಯ ಸಂಸ್ಥೆಗಳ ಚುನಾವಣೆ 2019 : ಸಂಪೂರ್ಣ ಫಲಿತಾಂಶಸ್ಥಳೀಯ ಸಂಸ್ಥೆಗಳ ಚುನಾವಣೆ 2019 : ಸಂಪೂರ್ಣ ಫಲಿತಾಂಶ

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಬಿಜೆಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಗ್ಗರಿಸಿದೆ. ಕಾಂಗ್ರೆಸ್ ಮೊದಲ ಸ್ಥಾನದಲ್ಲಿದ್ದರೆ, ನಂತರ ಬಿಜೆಪಿ ಮತ್ತು ಜೆಡಿಎಸ್. ಬಹುಷಃ ರಾಜ್ಯ ಬಿಜೆಪಿ ನಾಯಕರು ಮೋದಿ ಗುಂಗಿನಿಂದ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ.

ಸ್ಥಳೀಯ ಸಂಸ್ಥೆಗಳ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್‌ಸ್ಥಳೀಯ ಸಂಸ್ಥೆಗಳ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್‌

ಸಾರ್ವತ್ರಿಕ ಚುನಾವಣೆಯಲ್ಲೂ ಹಲವು ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರಿನಲ್ಲೇ ಮತಯಾಚಿಸಿದ್ದು ಗೊತ್ತಿರುವ ವಿಚಾರ, ಯಾಕೆಂದರೆ ಈ ಹಿಂದೆ ಸಂಸದರಾಗಿ ಅವರ ಕೆಲಸ ಮತದಾರರಿಗೆ ತೃಪ್ತಿ ತಂದಿರಲಿಲ್ಲ. ಬಿಜೆಪಿ ಏನು ಇಂದು ಕರ್ನಾಟಕದಲ್ಲಿ 25ಸ್ಥಾನ ಗೆದ್ದಿದೆಯೋ ಅದರ ಹಿಂದೆ ಕೆಲಸ ಮಾಡಿದ್ದು ಮೋದಿ ಎನ್ನುವ ಹೆಸರು.

ಸ್ಥಳೀಯ ಸಂಸ್ಥೆ ಚುನಾವಣೆ

ಸ್ಥಳೀಯ ಸಂಸ್ಥೆ ಚುನಾವಣೆ

ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶವನ್ನು ಅವಲೋಕಿಸುವುದಾದರೆ, ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಹೆಸರಿಲ್ಲದೇ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಶಕ್ತಿಯಿಲ್ಲವೇ ಎನ್ನುವ ಸಂಶಯ ಕಾಡುವುದು ಸಹಜ. ಈ ಚುನಾವಣೆಗಳಲ್ಲಿ ಮೋದಿ ಹೆಸರು ಕೆಲಸ ಮಾಡುವುದಿಲ್ಲ, ಅಲ್ಲಿ ಏನಿದ್ದರೂ ಲೋಕಲ್ ಲೀಡರ್ಸುಗಳ ಕಾರುಬಾರು. ಮೋದಿಯ ಪ್ರಭಾವಕ್ಕೆ ರಾಜ್ಯ ಬಿಜೆಪಿ ನಾಯಕರು ಇಷ್ಟೊಂದು ಅವಲಂಬಿತರಾದರೆ ಹೇಗೆ ಎನ್ನುವುದು ಕಾರ್ಯಕರ್ತರಿಗೂ ಕಾಡುತ್ತಿರುವ ಪ್ರಶ್ನೆ.

ಮಿನಿ ಮತದಾನ ಎಂದೇ ಪರಿಗಣಿಸಲ್ಪಟ್ಟಿದ್ದ ಸ್ಥಳೀಯ ಸಂಸ್ಥೆ ಚುನಾವಣೆ

ಮಿನಿ ಮತದಾನ ಎಂದೇ ಪರಿಗಣಿಸಲ್ಪಟ್ಟಿದ್ದ ಸ್ಥಳೀಯ ಸಂಸ್ಥೆ ಚುನಾವಣೆ

ಲೋಕಸಭಾ ಚುನಾವಣೆಯ ನಂತರ ನಡೆದ 'ಮಿನಿ ಮತದಾನ' ಎಂದೇ ಪರಿಗಣಿಸಲ್ಪಟ್ಟಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳದೇ ಚುನಾವಣೆ ಎದುರಿಸಿತ್ತು. ಹಾಗಾಗಿ, ಹಿಂದಿನಿಂದಲೂ ಮೈತ್ರಿಗೆ ವಿರೋಧ ವ್ಯಕ್ತಪಡಿಸಿಕೊಂಡು ಬರುತ್ತಿದ್ದ ಎರಡೂ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಿದರೆ, ಬಿಜೆಪಿಯವರು ಲೋಕಸಭೆಯ ಗುಂಗಿನಲ್ಲೇ ಕಾಲ ಕಳೆದರು. ಪರಿಣಾಮ.. ಎಲ್ಲೆಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತೋ, ಸ್ಥಳೀಯ ಚುನಾವಣೆಯಲ್ಲಿ ಅಲ್ಲೆಲ್ಲಾ ಸೋತಿತು.

ಮುಖ್ಯಮಂತ್ರಿ ಗಾದಿ ತಪ್ಪಿದರೂ ಬಿಜೆಪಿ ಅಧ್ಯಕ್ಷ ಕುರ್ಚಿ ಉಳಿಸಿಕೊಂಡ ಬಿಎಸ್ ಯಡಿಯೂರಪ್ಪಮುಖ್ಯಮಂತ್ರಿ ಗಾದಿ ತಪ್ಪಿದರೂ ಬಿಜೆಪಿ ಅಧ್ಯಕ್ಷ ಕುರ್ಚಿ ಉಳಿಸಿಕೊಂಡ ಬಿಎಸ್ ಯಡಿಯೂರಪ್ಪ

ಕಾಂಗ್ರೆಸ್ ಸ್ಥಳೀಯ ಸಂಸ್ಥೆಯ ಚುನಾವಣೆಯೇ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಆಸ್ತಿ

ಕಾಂಗ್ರೆಸ್ ಸ್ಥಳೀಯ ಸಂಸ್ಥೆಯ ಚುನಾವಣೆಯೇ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಆಸ್ತಿ

ಪಕ್ಷದ ಬೇರನ್ನು ಗಟ್ಟಿಮಾಡಿಕೊಳ್ಳಲು ಸ್ಥಳೀಯ ಸಂಸ್ಥೆ ಚುನಾವಣೆ ಅತಿಮುಖ್ಯ. ಬಹುತೇಕ ತಮ್ಮದೇ ನಾಯಕರೇ ಅಭಿಪ್ರಾಯ ಪಡುವಂತೆ ಮೈತ್ರಿ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಇನ್ನಿಲ್ಲದಂತೆ ಪೆಟ್ಟು ತಿಂದಿದ್ದ ಕಾಂಗ್ರೆಸ್, ಸ್ಥಳೀಯವಾಗಿ ಉತ್ತಮ ಪ್ರದರ್ಶನ ನೀಡಿದೆ. ಹಾಗಾಗಿ, ಕಾಂಗ್ರೆಸ್ ಸ್ಥಳೀಯ ಸಂಸ್ಥೆಯ ಚುನಾವಣೆಯೇ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಆಸ್ತಿ ಎಂದು ಹೇಳಿಕೊಂಡು ಬರಲಾರಂಭಿಸಿದೆ.

ಏಳು ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಎರಡರಲ್ಲಿ, ಇನ್ನೈದು ಅತಂತ್ರ

ಏಳು ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಎರಡರಲ್ಲಿ, ಇನ್ನೈದು ಅತಂತ್ರ

ಏಳು ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಎರಡರಲ್ಲಿ ಬಹುಮತ ಪಡೆದುಕೊಂಡಿದೆ, ಇನ್ನೈದು ಅತಂತ್ರ ಸ್ಥಿತಿಯಲ್ಲಿದೆ. ಮೂವತ್ತು ಪುರಸಭೆಯಲ್ಲಿ ಬಿಜೆಪಿ 5, ಕಾಂಗ್ರೆಸ್ 13, ಜೆಡಿಎಸ್ 01, ಎರಡರಲ್ಲಿ ಪಕ್ಷೇತರ ಅಭ್ಯರ್ಥಿಗಳ ಪ್ರಾಬಲ್ಯವಿದೆ. ಇನ್ನು, ಒಂಬತ್ತು ಪುರಸಭೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪ್ರಕಾರ, ಪಕ್ಷ ನಿರೀಕ್ಷಿಸಿದಷ್ಟು ಸ್ಥಾನವನ್ನು ಗೆದ್ದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದೆ. ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಆಧರಿಸಿಕೊಂಡು, ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಇವಿಎಂ ಮೇಲೆ ಶಂಕ್ತೆ ವ್ಯಕ್ತಪಡಿಸಿದೆ,

English summary
Karnataka Civic polls, Congress wins, BJP stands second. Is state BJP leaders too much depending on Prime Miniter Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X