Government Employee : ಸರ್ಕಾರಿ ನೌಕರರ ಭವಿಷ್ಯ ನಿಧಿ ನಿಯಮ ಬದಲು, ವಿವರ
ಬೆಂಗಳೂರು, ನವೆಂಬರ್ 18: ಕರ್ನಾಟಕದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿಯೊಂದಿದೆ. ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ಅಡಿಯಲ್ಲಿ ತಾತ್ಕಾಲಿಕ ಮುಂಗಡಗಳನ್ನು ಮತ್ತು ಭಾಗಶಃ ಅಂತಿಮ ಹಿಂಪಡೆಯುವಿಕೆ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದ್ದು, ವಿವರಣೆಯನ್ನು ಸಹ ನೀಡಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನೇತ್ರಪ್ರಭಾ ಎಂ. ಧಾಯಪುಲೆ ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು) ಆದೇಶವನ್ನು ಹೊರಡಿಸಿದ್ದಾರೆ. ಭವಿಷ್ಯ ನಿಧಿಗಳ ಅಧಿನಿಯಮ, 1925 (1925ರ ಕೇಂದ್ರ ಅಧಿನಿಯಮ) 8ನೇ ಪ್ರಕರಣವನ್ನು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ರ 8ರೊಂದಿಗೆ ಓದಿಕೊಂಡು ಅದೇ ಅಧಿನಿಯಮದ (3)ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ 2016 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ಮುಂದಿನ ಕರಡನ್ನು ರಚಿಸಲು ಉದ್ದೇಶಿಸಿದೆ ಎಂದು ಹೇಳಿದೆ.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯ ಪಡಿಸಿರುವಂತೆ ಅಧಿಸೂಚನೆ ಸಂಖ್ಯೆ ದಿನಾಂಕ 31.07.2024 ಅನ್ನು ದಿನಾಂಕ 7ನೇ ಆಗಸ್ಟ್, 2024ರ ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳಗಾಗಿ ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿದ್ದುದರಿಂದ ಮತ್ತು ಸದರಿ ರಾಜ್ಯ ಪತ್ರವನ್ನು ದಿನಾಂಕ 7ನೇ ಆಗಸ್ಟ್ 2024 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ ಯಾವುದೇ ಆಕ್ಷೇಪಣೆಗಳು, ಸಲಹೆಗಳು ಮತ್ತು ಸ್ವೀಕೃತವಾಗಿಲ್ಲ ಎಂದು ತಿಳಿಸಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14 ರ (3)ನೇ ಪ್ರಕರಣದ (1)ನೇ ಉಪ-ಪ್ರಕರಣವನ್ನು ಅದೇ ಅಧಿನಿಯಮದ ಪ್ರಕರಣ 8 ರೊಂದಿಗೆ ಓದಿಕೊಂದಂತೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಭವಿಷ್ಯ ನಿಧಿಗಳ ಅಧಿನಿಯಮ, 1925 (1925 ರ ಕೇಂದ್ರ ಅಧಿನಿಯಮ XIX)ದ 8ನೇ ಪ್ರಕರಣವನ್ನು ಓದಿಕೊಂಡು, ಕರ್ನಾಟಕ ಸರ್ಕಾರವು ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ಅನ್ನು ಮತ್ತಷ್ಟು ತಿದ್ದುಪಡಿ ಮಾಡಿದೆ.
ಈ ನಿಯಮಗಳನ್ನು ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (ತಿದ್ದುಪಡಿ) ನಿಯಮಗಳು 2024 ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು. ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ಅನುಸೂಚಿಯಲ್ಲಿ ಈ ಕೆಳಕಂಡಂತೆ ಸೇರಿಸತಕ್ಕದ್ದು, ಅಂದರೆ (ನಿಯಮ 16 ಮತ್ತು 17ಕ್ಕೆ)
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ಅಡಿಯಲ್ಲಿ ತಾತ್ಕಾಲಿಕ ಮುಂಗಡಗಳನ್ನು ಮತ್ತು ಭಾಗಶಃ ಅಂತಿಮ ಹಿಂಪಡೆಯುವಿಕೆಗಳನ್ನು ಮಂಜೂರು ಮಾಡಲು ಸಕ್ಷಮವಾಗಿರುವ ಪ್ರಾಧಿಕಾರಗಳು.
ತಾತ್ಕಾಲಿಕ ಮುಂಗಡಗಳು: ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ನಿಯಮ-16 ಮತ್ತು ನಿಯಮ-17ರ ಅಡಿಯಲ್ಲಿ ದಿನಾಂಕ 21.10.1994ರ ಸರ್ಕಾರಿ ಆದೇಶ ಎಫ್‌ಡಿ 48 ಮಕಮು 1994 ರಲ್ಲಿ ನಿಗದಿಪಡಿಸಲಾಗಿರುವ Take Home Salaryಯ ಮಿತಿ ಹಾಗೂ ಚಂದಾದಾರರ ಲಭ್ಯವಿರುವ ಸೇವೆಯ ಅವಧಿಯನ್ನು ಗಣನೆಗೆ ತೆಗೆದುಕೊಂಡು ತಾತ್ಕಾಲಿಕ ಮುಂಗಡಗಳನ್ನು ಮಂಜೂರು ಮಾಡುವ ಪ್ರಾಧಿಕಾರಗಳು ಈ ಕೆಳಗಿನಂತಿರುತ್ತವೆ.
ಮಂಜೂರಾತಿ ಪ್ರಾಧಿಕಾರ: ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಜಂಟಿ ನಿರ್ದೇಶಕರು ಅಥವ ನಿಯಂತ್ರಣಾಧಿಕಾರಿಗಳು. ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರಿಗೆ ಸದರಿ ನಿಯಮಗಳ ನಿಯಮ 16 ಮತ್ತು 17ರ ಅಡಿಯಲ್ಲಿ ಅಥವಾ ತಾತ್ಕಾಲಿಕ ಮುಂಗಡಗಳನ್ನು ಅದರಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಗಳಿಗೆ ಮಂಜೂರು ಮಾಡುವ ದಿನಾಂಕದಂದು ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ 80% ಅನ್ನು ಮಂಜೂರು ಮಾಡುವುದು.
ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು. ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸದರಿ ನಿಯಮಗಳ ನಿಯಮ 16 ಮತ್ತು 17 ರಡಿಯಲ್ಲಿ ತಾತ್ಕಾಲಿಕ ಮುಂಗಡಗಳನ್ನು ಅದರಲ್ಲಿ ನಿರ್ಧಿಷ್ಟಪಡಿಸಿದ ಉದ್ದೇಶಗಳಿಗೆ ಮಂಜೂರು ಮಾಡುವ ದಿನಾಂಕದಂದು ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ 80% ಅನ್ನು ಮಂಜೂರು ಮಾಡುವುದು.
ಹಿಂಪಡೆಯುವಿಕೆಗಳು. ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ನಿಯಮ 26ರ ಜೊತೆಗೆ ಓದಲಾದ ನಿಯಮ-27 ರ ಅಡಿಯಲ್ಲಿ ಭಾಗಶಃ ಅಂತಿಮ ಹಿಂಪಡೆಯುವಿಕೆಗಳನ್ನು ಮಂಜೂರು ಮಾಡುವ ಪ್ರಾಧಿಕಾರಗಳು ಈ ಕೆಳಗಿನಂತಿರುತ್ತವೆ.
ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಂಟಿ ನಿರ್ದೇಶಕರು ಅಥವ ನಿಯಂತ್ರಣ ಅಧಿಕಾರಿಗಳು. ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ, ಸದರಿ ನಿಯಮಗಳ ನಿಯಮ ಅಥವಾ 26(1) ನೇ ಉಪನಿಯಮದ ಅಂಶ(a) ರಲ್ಲಿ ನಿರ್ದಿಷ್ಟ ಪಡಿಸಿದ ಕಾರಣಕ್ಕಾಗಿ ಅದರೊಂದಿಗೆ ಓದಲಾದ ನಿಯಮ 27 ರಡಿಯಲ್ಲಿ ಭಾಗಶ: ಅಂತಿಮ ಹಿಂತೆಗೆದುಕೊಳ್ಳುವಿಕೆಯನ್ನು ನಿರ್ದಿಷ್ಟಪಡಿಸಿದ ಉದ್ದೇಶಗಳಿಗೆ ಮಂಜೂರು ಮಾಡುವ
ದಿನಾಂಕದಂದು ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ 90% ಅನ್ನು ಮಂಜೂರು ಮಾಡುವುದು.
ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು. ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಇತರೆ ಇಲಾಖಾ ಹೊರತುಪಡಿಸಿ ಇತರ ಕಛೇರಿಗಳಲ್ಲಿ ಸಿಬ್ಬಂದಿಗಳನ್ನು ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ, ಸದರಿ ನಿಯಮಗಳ ನಿಯಮ 26(1) ನೇ ಉಪನಿಯಮದ ಅಂಶ(a) ರಲ್ಲಿ ನಿರ್ದಿಷ್ಟ ಪಡಿಸಿದ ಕಾರಣಕ್ಕಾಗಿ ಅದರೊಂದಿಗೆ ಓದಲಾದ ನಿಯಮ 27 ರಡಿಯಲ್ಲಿ ಭಾಗಶ: ಅಂತಿಮ ಹಿಂತೆಗೆದುಕೊಳ್ಳುವಿಕೆಯನ್ನು ಅದರಲ್ಲಿ ಮಂಜೂರು ಮಾಡುವ ನಿರ್ದಿಷ್ಟಪಡಿಸಿದ ಉದ್ದೇಶಗಳಿಗೆ ದಿನಾಂಕದಂದು ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ 90% ಅನ್ನು ಮಂಜೂರು ಮಾಡುವುದು.












Click it and Unblock the Notifications