ಸಿಇಟಿ ಆನ್ ಲೈನ್ ನೋಂದಣಿ ಜನವರಿ 30 ರಿಂದ ಆರಂಭ
ಬೆಂಗಳೂರು, ಜ. 28: ಜನವರಿ 30 ರಿಂದ 2015ರ ಸಿಇಟಿ ಪರೀಕ್ಷೆ ನೋಂದಣಿ ಪ್ರಕ್ರಿಯೆಗೆ ಆನ್ ಲೈನ್ ಮೂಲಕ ಅವಕಾಶ ಒದಗಿಸಲಾಗುವುದು ಎಂದು ಕರ್ನಾಟಕ ಎಕ್ಸಾಮಿನೆಷನ್ ಅಥಾರಿಟಿ(ಕೆಇಎ) ಪ್ರಕಟಣೆ ಹೊರಡಿಸಿದೆ.
2015 ರ ಏಪ್ರಿಲ್ 29, 30 ರಂದು ಸಿಇಟಿ ಪರೀಕ್ಷೆ ನಡೆಸಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಜನವರಿ 30 ರಿಂದ ಆನ್ ಲೈನ್ ನೋಂದಣಿ ಸಾಧ್ಯವಾಗುತ್ತದೆ ಎಂದು ತಿಳಿಸಿದೆ.[ಏಪ್ರಿಲ್ 29ರಿಂದ ಸಿಇಟಿ ಪರೀಕ್ಷೆ]

ವೈದ್ಯಕೀಯ, ಹೋಮಿಯೋಪತಿ, ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಕೃಷಿಗೆ ಸಂಬಂಧಿಸಿದ ಕೋರ್ಸ್ ಗಳಿಗೆ ನೋಂದಣಿ ಮಾಡಬಹುದು. ಈ ಬಾರಿ ಅಪ್ಲಿಕೇಶನ್ ಗಳು ಕೇವಲ ಆನ್ ಲೈನ್ ನಲ್ಲಿ ಲಭ್ಯವಿದೆ. ಕಳೆದ ಬಾರಿಯಂತೆ ಶಾಲಾ ಮತ್ತು ಕಾಲೇಜುಗಳಲ್ಲಿ ಲಭ್ಯವಿರುವುದಿಲ್ಲ.[ಸಿಇಟಿ ಕಾಯ್ದೆ ಜಾರಿಗೆ ಬಂದರೆ, ಕಾಮೆಡ್-ಕೆ ರದ್ದು?]
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ ತಾಣ ಮತ್ತು ಸಹಾಯವಾಣಿ 080 23460460(ಬೆಳಗ್ಗೆ 9.30 ರಿಂದ ಸಂಜೆ 6)ನ್ನು ಸಂಪರ್ಕಿಸಬಹುದು.












Click it and Unblock the Notifications