Karnataka Caste Census Report 2025: ಕರ್ನಾಟಕದಲ್ಲಿ ಯಾವ ಜಾತಿಯ ಜನ ಎಷ್ಟಿದ್ದಾರೆ, ಇಲ್ಲಿದೆ ಮಾಹಿತಿ!
ಕರ್ನಾಟಕದ ಜಾತಿ ಗಣತಿ ವರದಿ ಕೊನೆಗೂ ಬಹಿರಂಗವಾಗಿದೆ. ಆದರೆ, ಸರ್ಕಾರ ಈ ವರದಿಯನ್ನು ಇನ್ನೂ ಸಂಪೂರ್ಣವಾಗಿ ಜನರ ಮುಂದೆ ಇರಿಸಿಲ್ಲ. ಈಗ ಬರುತ್ತಿರುವ ಜಾತಿ ಗಣತಿ ವರದಿಯ ಅಂಕಿ - ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದೊಂದು ವಿವಾದಕ್ಕೆ ಕಾರಣವಾದರೆ, ಮತ್ತೊಂದು ಕಡೆ ಲಿಂಗಾಯತರು ಸೇರಿದಂತೆ ವಿವಿಧ ಪ್ರಮುಖ ಜಾತಿಗಳ ಜನಸಂಖ್ಯೆಯ ಬಗ್ಗೆಯೂ ಭಾರೀ ಚರ್ಚೆಗಳು ಶುರುವಾಗಿದೆ. ಇಷ್ಟಕ್ಕೂ ಕರ್ನಾಟಕದಲ್ಲಿ ಯಾವ ಜಾತಿಯ ಜನ ಎಷ್ಟಿದ್ದಾರೆ. ಈಗ ನಡೆಯುತ್ತಿರುವ ಚರ್ಚೆಗಳೇನು ಎನ್ನುವ ವಿವರ ನೋಡೋಣ.
ಜಾತಿ ಗಣತಿ ವಿಚಾರವು ಕರ್ನಾಟಕದಲ್ಲಿ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಕರ್ನಾಟಕದಲ್ಲಿ ಜಾತಿ ಗಣತಿಯಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನುವ ಅಂಶವು ಭಾರೀ ಚರ್ಚೆಗೆ ಕಾರಣವಾಗಿದ್ದರೆ. ವಿವಿಧ ಜಾತಿಗಳನ್ನು ವಿಭಜನೆ ಮಾಡಲಾಗಿದೆ ಎನ್ನುವ ಅಂಶವು ಭಾರೀ ಚರ್ಚೆಗೆ ಕಾರಣವಾಗಿದೆ. ಜಾತಿ ಗಣತಿಯಲ್ಲಿ 10 ಜಾತಿಗಳ ವಿವರ ಹಾಗೂ ಈಗ ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇಲ್ಲಿದೆ. ಕರ್ನಾಟಕದಲ್ಲಿ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವರದಿ (ಜಾತಿ ಗಣತಿ)ಯು ಇದೀಗ ಬಹಿರಂಗವಾಗಿದೆ. ಅಧಿಕೃತವಾಗಿ ಸರ್ಕಾರ ಈ ಅಂಕಿ - ಅಂಶವನ್ನು ಜನರ ಮುಂದೆ ಇರಿಸಿಲ್ಲ. ಆದರೆ, ಸಚಿವರಿಗೆ ಪ್ರತಿಗಳನ್ನು ಸಲ್ಲಿಕೆ ಮಾಡಲಾಗಿದೆ.

ರಾಜ್ಯದಲ್ಲಿ ಇಷ್ಟು ದಿನಗಳ ಕಾಲ ವಿವಾದ ಕೇಂದ್ರ ಬಿಂದುವಾಗಿದ್ದ ಜಾತಿ ಗಣತಿಯು ಇದೀಗ ಬಹಿರಂಗವಾಗಿದೆ. ಆದರೆ ಸರ್ಕಾರಕ್ಕೆ ಈ ಜಾತಿ ಗಣತಿ ವರದಿಯು ತಿರುಗು ಬಾಣವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಮೊದಲನೆಯದಾಗಿ ಜಾತಿ ಗಣತಿ ವರದಿ ಮಂಡನೆಗೆ ರಾಜ್ಯದ ಕಾಂಗ್ರೆಸ್ ಸಚಿವರಿಂದಲೇ ವಿರೋಧ ವ್ಯಕ್ತವಾಗಿದೆ. ಜಾತಿ ಗಣತಿ ವರದಿಯಲ್ಲಿ ಕೆಲವೊಂದು ನಿರ್ದಿಷ್ಟ ಜಾತಿಗಳ ಅಥವಾ ಸಮುದಾಯದ ಸಂಖ್ಯೆ ಕಡಿಮೆಯಾಗಿದೆ ಎಂದು ಕೆಲವು ಸಚಿವರು ಸಚಿವ ಸಂಪುಟ ಸಭೆಯಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಇದೀಗ ಈ ಅನುಮಾನವನ್ನು ದೂರ ಮಾಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಸರತ್ತು ನಡೆಸುವಂತೆ ಆಗಿದೆ. ಹೀಗಾಗಿ, ವಿಧಾನಸಭಾವಾರು ಮಾಹಿತಿಯನ್ನು ಅವರು ಸಚಿವರಿಗೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾತಿ ಗಣತಿ ವರದಿಗೆ ಸಮಿತಿಯನ್ನು ರಚನೆ ಮಾಡಲಾಗಿತ್ತು. ಇದೀಗ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.
ಜಾತಿ ಗಣತಿ ವರದಿಯ ಪ್ರಕಾರ ಯಾವ ಜಾತಿ ಜನ ಸಂಖ್ಯೆ ಎಷ್ಟಿದೆ ?
ಸಮುದಾಯ ಜನಸಂಖ್ಯೆ
ಪರಿಶಿಷ್ಟ ಜಾತಿ 1 ಕೋಟಿ
ಮುಸ್ಲಿಂ 75 ಲಕ್ಷ
ಲಿಂಗಾಯತ 66 ಲಕ್ಷ
ಒಕ್ಕಲಿಗ 61 ಲಕ್ಷ
ಕುರುಬ 44 ಲಕ್ಷ
ಪರಿಶಿಷ್ಟ ಪಂಗಡ 42 ಲಕ್ಷ
ವೀರಶೈವ ಲಿಂಗಾಯತ 10 ಲಕ್ಷ
ಬಣಜಿಗ 10 ಲಕ್ಷ
ಕ್ರೈಸ್ತರು 9 ಲಕ್ಷ












Click it and Unblock the Notifications