ಮಳೆ.. ಮಳೆ.. ಬೆಂಗಳೂರಲ್ಲಿ ಇವತ್ತು ಕೂಡ ಮಳೆ ಗ್ಯಾರಂಟಿ!
ಮಳೆ.. ಮಳೆ.. ಭರ್ಜರಿ ಮಳೆ ಕಂಡು ನಿನ್ನೆ ಬೆಂಗಳೂರಿನ ಜನರು ಕುಣಿದಾಡಿದ್ದಾರೆ. ಈ ನಡುವೆ ಮತ್ತೊಂದು ಸಿಹಿ ಸುದ್ದಿ ಬೆಂಗಳೂರು ನಿವಾಸಿಗಳಿಗೆ ಸಿಕ್ಕಿದೆ. ಅದು ಏನು ಅಂದರೆ, ನಿನ್ನೆ ಬಿದ್ದ ಮಳೆ ಬರೀ ಸ್ಯಾಂಪಲ್ ಅಂತೆ. ಇದೀಗ, ಒರಿಜಿನಲ್ ಮಳೆಯ ಆರ್ಭಟ ಶುರು ಆಗಲಿದೆ ಅಂತಾ ಹವಾಮಾನ ಇಲಾಖೆ ಇದೀಗ ವಾರ್ನಿಂಗ್ ಕೊಟ್ಟಿದೆ. ಹಾಗಾದ್ರೆ ಬೆಂಗಳೂರು ಮಳೆ ಆರ್ಭಟ ಹೇಗಿರಲಿದೆ? ಮುಂದೆ ಓದಿ.
ಬೆಂಗಳೂರು ಅಂದ್ರೆ 20 ವರ್ಷಗಳ ಹಿಂದೆ ಎಸಿ ಸಿಟಿ ಎಂಬ ಹೆಸರು ಇತ್ತು. ಯಾಕಂದ್ರೆ ಈ ನಮ್ಮ ಬೆಂಗಳೂರು ಬೇಸಿಗೆ ಸಮಯದಲ್ಲೂ ಕೂಲ್ ಕೂಲ್ ಆಗಿ ಇರೋದು. ಆದ್ರೆ ಏನ್ ಮಾಡೋದು, ಬೆಂಗಳೂರು ಈಗ ಕಾಂಕ್ರಿಟ್ ಕಾಡು ಆಗಿದೆ. ಬೆಂಗಳೂರಲ್ಲಿ ಇದ್ದ ಗಿಡ & ಮರ ಎಲ್ಲಾ ನಾಶವಾಗಿ ಹೋಗುತ್ತಿವೆ. ಹೀಗಾಗಿ ಬೆಂಗಳೂರಿನಲ್ಲೂ ಅಂತರ್ಜಲ ಕೂಡ ಕುಸಿದು ಹೋಗಿ, ಕೋಟ್ಯಂತರ ಜನರು ನರಳುತ್ತಿದ್ದಾರೆ. ಈ ನಡುವೆ ಮಳೆ ಬೇಕು, ಮಳೆ ಬೇಕು ಅಂತ ದೇವರ ಮೊರೆ ಹೋಗುವ ಪರಿಸ್ಥಿತಿ ಕೂಡ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ನಿನ್ನೆ ಭರ್ಜರಿಯಾಗಿ ಮಳೆ ಬಿದ್ದಿತ್ತು, ಈ ಮಧ್ಯೆ ಮುಂದಿನ 48 ಗಂಟೆಗಳ ಕಾಲ ಮತ್ತೆ ಭರ್ಜರಿ ಮಳೆ ಬರುವ ನಿರೀಕ್ಷೆ ಇದೆ.

5 ತಿಂಗಳಿಂದ ಮಳೆ ಇರಲಿಲ್ಲ!
ಮಳೆ ಬೀಳುತ್ತಿಲ್ಲ ಅಂತಾ ಕನ್ನಡಿಗರು ಪರದಾಡುತ್ತಿರುವ ಸಮಯಕ್ಕೇ, ಭರ್ಜರಿ ಮಳೆ ಆಗಮನ ಆಗಿದೆ. ಕಳೆದ 5 ತಿಂಗಳಿಂದ ಕರ್ನಾಟಕದ ಕರಾವಳಿ ಜಿಲ್ಲೆ ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಕೊಪ್ಪಳ, ಧಾರವಾಡ, ಕಲಬುರಗಿ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಾರಣಕ್ಕೆ ಜನ ನಲುಗಿದ್ದಾರೆ.
24 ಗಂಟೆಗಳ #ಕರ್ನಾಟಕ #ಮಳೆ ನಕ್ಷೆ: 3rdಮೇ 8.30AM ರಿಂದ 4th ಮೇ 2024 ರ 8.30AM ರವರೆಗೆ, ಅತ್ಯಧಿಕ 79.5 ಮಿಮೀ @ಬೆಂಗಳೂರು ಗ್ರಾಮಾಂತರ_ಹೊಸಕೋಟೆ_ಜಡಿಗೇನಹಳ್ಳಿ. #ಬೇಸಿಗೆಮಳೆ #ವಸಂತಮಳೆ #ಪೂರ್ವಮುಂಗಾರು #KarnatakaRains pic.twitter.com/bSr27tlmsR
— Karnataka State Natural Disaster Monitoring Centre (@KarnatakaSNDMC) May 4, 2024
ಆದ್ರೆ ಇದೀಗ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬರುತ್ತಿದ್ದು, ಜನರು ಕುಣಿದು ಕುಪ್ಪಳಿಸಿದ್ದಾರೆ. ಹಾಗೇ ಮುಂದಿನ 24 ಗಂಟೆಯಲ್ಲಿ ಬೆಂಗಳೂರು ಸೇರಿ ಹಲವಾರು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಕನ್ನಡಿಗರು ಮತ್ತೆ ಖುಷಿ ಖುಷಿಯಾಗಿ ಕುಣಿದಾಡುವ ಸಮಯ ಬಂದಿದೆ. ಅದರಲ್ಲೂ ಬೆಂಗಳೂರಿನ ನಿವಾಸಿಗಳಿಗೆ ಬಿಗ್ ರಿಲೀಫ್ ಸಿಗಲಿದೆ.
ಉತ್ತರ ಕರ್ನಾಟಕದಲ್ಲೂ ಮಳೆ ಆರ್ಭಟ
ಕಳೆದ ವಾರ ಮತ್ತು ಏಪ್ರಿಲ್ 3ನೇ ವಾರ ಉತ್ತರ ಕರ್ನಾಟಕ ಭಾಗದಲ್ಲಿ ಭರ್ಜರಿ ಮಳೆಯ ಆಗಮನ ಆಗಿತ್ತು. ಇದೀಗ ದಕ್ಷಿಣ ಕರ್ನಾಟಕದ ರಾಜ್ಯಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಹೀಗೆ ಮಳೆಯ ಅಬ್ಬರ ನೋಡಿದ ಜನರು, ಫುಲ್ ಖುಷ್ ಆಗಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಸೇರಿ ದಕ್ಷಿಣದಲ್ಲಿ ಹಲವು ಜಿಲ್ಲೆಗಳು ಭರ್ಜರಿ ಮಳೆಗೆ ಸಾಕ್ಷಿ ಆಗಲಿವೆಯಂತೆ.
ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರೆ...
ಮನುಷ್ಯ ಕ್ರೂರಿ ಆಗುತ್ತಿದ್ದು, ಪ್ರಕೃತಿ ವಿರುದ್ಧ ತನ್ನ ಕ್ರೂರ ನೀತಿಗಳನ್ನು ಅನ್ವಯಿಸುತ್ತಿದ್ದಾನೆ. ಇದೇ ಕಾರಣಕ್ಕೆ ಇದೀಗ ಮಳೆ ಸರಿಯಾದ ಸಮಯಕ್ಕೆ ಬರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸುತ್ತಿದ್ದಾರೆ. ಆದರೆ ಮನುಷ್ಯ ಮಾತ್ರ ತನ್ನ ದುರಾಸೆಯ, ಮತ್ತು ದುರ್ಬುದ್ಧಿಯ ಮಿತಿ ಮೀರಿದ್ದು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಮುಂದೆ ಮನುಷ್ಯರ ಬದುಕಿಗೆ ಇದು ಸಮಸ್ಯೆ ಎದನ್ನಲಾಗುತ್ತಿದೆ. ಪರಿಸರ ಸಂರಕ್ಷಕರು ಕೂಡ ಇದೇ ವಿಚಾರವಾಗಿ ಈಗ ಚರ್ಚೆ ಮಾಡುತ್ತಿದ್ದಾರೆ, ಹೀಗಾಗಿ ಇದೆಲ್ಲಾ ಏನಾಗುತ್ತೆ ಎಂಬ ಚಿಂತೆಯು ಹಬ್ಬಿದೆ.
ತಂಪು.. ತಂಪು.. ಕೂಲ್.. ಕೂಲ್..!
ಮಳೆ.. ಮಳೆ.. ಭರ್ಜರಿ ಮಳೆ ಬಂದಿದ್ದು, ಭೂತಾಯಿ & ಮನಸ್ಸು ಎರಡೂ ತಂಪಾಗಿದೆ. ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೆಲವೇ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳ ಜನರು ಭಾರಿ ಬಿಸಿಲು & ಬಿಸಿಯಾದ ಗಾಳಿಗೆ ನಲುಗಿ ಹೋಗಿದ್ದರು. ಮನೆ ಮೇಲೆ ಇರುವ ನೀರಿನ ಟ್ಯಾಂಕರ್ ಕೂಡ ಕರಗಿ ಹೋಗುವಷ್ಟು, ಮನೆಯಲ್ಲಿ ಬರುವ ನಲ್ಲಿ ನೀರು ಕೂಡ ಕುದಿಯುವಷ್ಟು ಬಿಸಿಲು ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ತಂಪು ತಂಪು ಕೂಲ್.. ಕೂಲ್.. ಆಗಿದೆ ನಮ್ಮ ಕರ್ನಾಟಕ. ಹಾಗಾದರೆ ಇನ್ನೂ ಎಷ್ಟು ದಿನಗಳ ಕಾಲ ವಾತಾವರಣ ಹೀಗೆ ಇರಲಿದೆ ಗೊತ್ತಾ?












Click it and Unblock the Notifications