Get Updates
Get notified of breaking news, exclusive insights, and must-see stories!

Lok Sabha Election: ದುಡ್ಡು, ಎಣ್ಣೆ, ಸೀರೆ, ಟಿವಿ ಎಲ್ಲಾ ಆಯಿತು.. ಅಭ್ಯರ್ಥಿಗಳಿಂದ ಗುಟ್ಕಾ ಹಂಚಿಕೆ ಬಲು ಜೋರು

ಚುನಾವಣೆಗಳು ಬಂತೆಂದರೆ ಸಾಕು ಮತದಾರರ ಮನವಲಿಸಲು ತರಹೆವಾರಿ ಮಾರ್ಗಗಳನ್ನು ಅಭ್ಯರ್ಥಿಗಳನ್ನು ಹುಡುಕುತ್ತಾರೆ. ಇಷ್ಟು ದಿನ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ದುಡ್ಡು, ಎಣ್ಣೆ, ಸೀರೆ, ಮಿಕ್ಸರ್‌, ಗ್ರ್ಯಾಂಡರ್‌, ಸ್ಮಾರ್ಟ್‌ ಟಿವಿ, ಎಲ್‌ಇಡಿ ಟಿವಿಗಳನ್ನು ನೀಡುವುದನ್ನು ನಾವು ನೋಡಿದ್ದೇವೆ. ಈಗ ಈ ಎಲ್ಲದಕ್ಕೂ ಗುಡ್‌ಬೈ ಹೇಳಿದ ಅಭ್ಯರ್ಥಿಗಳು ಹೊಸ ಮಾರ್ಗವನ್ನು ಅನುಸರಿಸುತ್ತಿದ್ದಾರೆ.

ಚುನಾವಣೆಗಳ ದಿನಾಂಕಗಳು ಘೋಷಣೆ ಆಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ವೇಳೆ ಅಭ್ಯರ್ಥಿಗಳು ಮತದಾರರಿಗೆ ನೀಡಲು ಸಂಗ್ರಹಿಸಿಟ್ಟಿದ್ದ ಹಲವು ವಸ್ತುಗಳನ್ನು ವಶಪಡಿಸಿಕೊಂಡಿರುವ ಸುದ್ದಿಯನ್ನು ನೋಡಿರುತ್ತಿರಾ.. ಹಣಕ್ಕೆ ತಮ್ಮ ಅಮೂಲ್ಯವಾದ ಮತವನ್ನು ಮಾರಾಟ ಮಾಡಿಕೊಂಡ ಪ್ರಕರಣಗಳು ಸಹ ನೋಡಿರುತ್ತೀರಾ. ಆದರೆ ಈ ಬಾರಿ ಅಭ್ಯರ್ಥಿಗಳು ವಿಭಿನ್ನ ತಂತ್ರದ ಮೊರೆಗೆ ಹೋಗಿದ್ದಾರೆ.

Karnataka Candidates Offer Unusual Vote Incentives TVs Gutkha Tobacco Chutney Salt

ವಿಭಿನ್ನ ತಂತ್ರಕ್ಕೆ ಮಣೆ ಹಾಕಿದ ಅಭ್ಯರ್ಥಿಗಳು

ಮತದಾರರನ್ನು ಸೆಳೆಯಲು ಹಲವು ಪಕ್ಷಗಳು ಬೇರೆ ಬೇರೆ ತಂತ್ರದ ಮೊರೆ ಹೋಗುತ್ತವೆ. ಈ ವೇಳೆ ಮತದಾರ ಬಳಿಸುವ ದಿನ ನಿತ್ಯದ ವಸ್ತುಗಳನ್ನು ಹಾಗೂ ಬಟ್ಟೆಗಳನ್ನು ಕೊಡುವುದನ್ನು ಎಲ್ಲ ಚುನಾವಣೆಗಳಲ್ಲಿ ನೋಡಿರುತ್ತೇವೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಗುಟ್ಕಾ, ಚಹಾ ಪುಡಿ, ಟಾಮೆಟೋ ಸಾಸ್‌ಗಳನ್ನು ಸಹ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮತದಾರರಿಗೆ ಅಡುಗೆ ಪಾತ್ರೆಗಳು, ಮಿಕ್ಸ್‌ರಗಳು, ಸೀರೆಗಳು, ಚೂಡಿದಾರ್ಗಳು, ದುಪಟ್ಟಾಗಳು ಮತ್ತು ಪ್ಯಾಂಟ್ಗಳನ್ನು ಸಹ ನೀಡಲಾಗುತ್ತಿದೆ. ಬೀದರ್, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಲಬುರಗಿ ಜಿಲ್ಲೆಗಳು ಹೀಗೆ ನೀಡುವಲ್ಲಿ ಎದ್ದು ಕಾಣುತ್ತವೆ ಎಂದು ಕರ್ನಾಟಕದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಅವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

Karnataka Candidates Offer Unusual Vote Incentives TVs Gutkha Tobacco Chutney Salt

4 ಸಾವಿರ ಕೆಜಿ ಗುಟ್ಕಾ ವಶ

ಬೀದರ್ ಜಿಲ್ಲೆಯಲ್ಲಿ 10 ಲಕ್ಷ ಮೌಲ್ಯದ 4,000 ಕೆಜಿ ತೂಕದ ಅಪಾರ ಪ್ರಮಾಣದ ಪಾನ್ ಮಸಾಲಾ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಚಿಕ್ಕಬಳ್ಳಾಪುರದಲ್ಲಿ 24 ಲಕ್ಷ ಮೌಲ್ಯದ 96 ದುಬಾರಿ ವಾಚ್ ಗಳನ್ನು ಚಿಕ್ಕಬಳ್ಳಾಪುರ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಳ್ಳಲಾಗಿದೆ. ಈ ವಾಚ್‌ಗಳು ದುಬಾರಿಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಚ್ 22 ರಂದು ಬಳ್ಳಾರಿ ಕ್ಷೇತ್ರದಲ್ಲಿ 30 ಲಕ್ಷ ಮೌಲ್ಯದ 203 ಕೆಜಿ ಶ್ರೀಗಂಧವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಎಫ್‌ಐಆರ್ ದಾಲಿಸಿದ್ದು, ನಾಲ್ವರನ್ನು ಬಂಧಿಸಲಾಗಿದೆ.

ಶಿವೊಮಗ್ಗದಲ್ಲಿ ಏನೆಲ್ಲಾ ಸಿಕ್ಕಿವೆ?

ಶಿವಮೊಗ್ಗದ ಉಚಿತ ಉಡುಗೊರೆಗಳಲ್ಲಿ ಗೂಗಲ್ ಟಿವಿ ಬಾಕ್ಸ್‌ಗಳು, ಟೀ ಬ್ಯಾಗ್‌ಗಳು ಮತ್ತು ತಂಬಾಂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಇವುಗಳನ್ನು ಯಾವ ಕಾರಣಕ್ಕೆ ಬಳಸಲಾಗುತ್ತಿದೆ ಎಂದು ಸರಿಯಾಗಿ ತಿಳಿದಿಲ್ಲ. ಆದರೆ ಇವುಗಳಿಗೆ ಸರಿಯಾದ ಬಿಲ್ ಇಲ್ಲದೇ ಸಂಗ್ರಹಿಸಿದ್ದರಿಂದ್ದ ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ವಶಪಡಿಸಿಕೊಂಡ ಪ್ರಮುಖ ವಸ್ತುಗಳು ದಿನಸಿಗಳಾಗಿವೆ. ದಿನಸಿಗಳನ್ನು ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ ಮತ್ತು ವಿತರಣೆಗಾಗಿ ವಿವಿಧ ಗೋದಾಮುಗಳಲ್ಲಿ ಇರಿಸಲಾಗುತ್ತದೆ. ನಿಸ್ಸಂಶಯವಾಗಿ, ಯಾವುದೇ ಬಿಲ್‌ಗಳನ್ನು ಲಗತ್ತಿಸಲಾಗಿಲ್ಲ. ಬೆಂಗಳೂರು ಜಿಲ್ಲೆಯಲ್ಲಿಯೂ ಮತದಾರರನ್ನು ಪ್ರೇರೇಪಿಸುವ ದಿನಸಿ ವಸ್ತುಗಳ ಬಳಕೆ ಹೆಚ್ಚಾಗಿದೆ ಎಂದು ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆಗಳು ನಡೆಯುತ್ತಿವೆ. ಮೊದಲ ಹಂತದ ಮತದಾನ ಏಪ್ರಿಲ್‌ 26ಕ್ಕೆ ನಡೆದರೆ ಎರಡನೇ ಹಂತದ ಮತದಾನ ಮೇ 7ಕ್ಕೆ ನಡೆಯಲಿದೆ. ಚುನಾವಣೆಯ ಕಾವು ಏರುತ್ತಿದೆ. ಇನ್ನು ಯಾವ ಯಾವ ಆಮೀಷಗಳನ್ನು ಒಡ್ಡಿ ಅಭ್ಯರ್ಥಿಗಳು ಮತದಾರರ ಮನವಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+