• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಬಿಎಂಪಿಯ 9 ಸಾವಿರ ಕೋಟಿ ಬಜೆಟ್‌ಗೆ ಸರ್ಕಾರದ ಒಪ್ಪಿಗೆ

|

ಬೆಂಗಳೂರು, ಮೇ 09 : ಲೋಕಸಭೆ ಚುನಾವಣೆ ಬಳಿಕ ಗುರುವಾರ ಮೊದಲ ಸಚಿವ ಸಂಪುಟ ಸಭೆ ನಡೆಯಿತು. ಬೃಹತ್ ಬೆಂಗಳೂರು ಮಾಹಾನಗರ ಪಾಲಿಕೆ ಬಜೆಟ್‌ಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಹಲವಾರು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕೆಲವು ಸಚಿವರು ಉಪ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ಕಾರಣ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ಬಿಬಿಎಂಪಿ ಬೃಹತ್ ಬಜೆಟ್‌ಗೆ ಕತ್ತರಿ ಹಾಕಿದ ಮೈತ್ರಿ ಸರ್ಕಾರ

ಸಭೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 9,824 ಕೋಟಿ ರೂ. ಬಜೆಟ್‌ಗೆ ಅನುಮೋದನೆ ನೀಡಲಾಯಿತು. ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಅವರು 13 ಸಾವಿರ ಕೋಟಿ ರೂ. ಬಜೆಟ್‌ಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದರು.

ಪ್ರಮುಖ ತೀರ್ಮಾನಗಳು

* ಬಿಬಿಎಂಪಿ ವ್ಯಾಪ್ತಿಯಲ್ಲಿ ಪ.ಜಾ/ಪ.ವರ್ಗದ ಜನ ವಾಸವಿರುವ ಪ್ರದೇಶಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ 573 ಕೋಟಿ ಕ್ರಿಯಾ ಯೋಜನೆಗೆ ಒಪ್ಪಿಗೆ

* ಚಿಂತಾಮಣಿ ಪಟ್ಟಣಕ್ಕೆ ಭಕ್ತರಹಳ್ಳಿಯ ಮೂಲಕ ನೀರು ಹರಿಸುವ 10.65 ಕೋಟಿ ಮೌಲ್ಯದ ಟಿಎಸ್‌ಪಿ ಕ್ರಿಯಾ ಯೋಜನೆಗೆ ಒಪ್ಪಿಗೆ

* ಫನಿ ಚಂಡಮಾರುತಕ್ಕೆ ತುತ್ತಾಗಿರುವ ಒಡಿಶಾ ರಾಜ್ಯಕ್ಕೆ 10 ಕೋಟಿ ನೆರವು ನೀಡಲು ಅನುಮೋದನೆ

English summary
The Cabinet meeting chaired by Chief Minister H.D.Kumaraswamy has decided to accept BBMP budget 2019 worth 9,824 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X