ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರದ ಸಚಿವ ಸಂಪುಟ ಸಭೆಯ ತೀರ್ಮಾನಗಳು

|
Google Oneindia Kannada News

ಬೆಂಗಳೂರು, ಮೇ 8 : ಕೆಪಿಎಸ್‌ಸಿಯ ಐವರು ಸದಸ್ಯರ ಅಮಾನತು, ಬೆಂಗಳೂರಿನ ಕೆರೆ ಒತ್ತುವರಿ ಕಾರ್ಯಾಚರಣೆ ತೆರವು ಸ್ಥಗಿತ, ಮೈಶುಗರ್ ಕಾರ್ಖಾನೆ ಪುನರುಜ್ಜೀವನಕ್ಕೆ 95 ಕೋಟಿ ರೂ. ನೆರವು ನೀಡುವುದು ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಯಿತು. ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಸಭೆಯ ತೀರ್ಮಾನಗಳನ್ನು ತಿಳಿಸಿದರು.[ಕೆಎಟಿ ಮೆಟ್ಟಿಲೇರಿದ ಕೆಪಿಎಸ್ ಸಿ ನೇಮಕಾತಿ ವಿವಾದ]

Karnataka cabinet meeting

ಸಂಪುಟ ಸಭೆಯ ತೀರ್ಮಾನಗಳು

* 2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿ ಸಂದರ್ಶನದ ವೇಳೆ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ 5 ಸದಸ್ಯರನ್ನು ಅಮಾನತು ಮಾಡಿ ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ.

* ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆರೆ ಒತ್ತುವರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕೆರೆ ಮತ್ತು ಅರಣ್ಯ ಜಮೀನು ಸೇರಿದಂತೆ ಸರ್ಕಾರಿ ಜಮೀನು ಒತ್ತುವರಿ ಪ್ರಕರಣಗಳ ವಿಚಾರಣೆ ಹಾಗೂ ಭೂಗಳ್ಳರಿಗೆ ಶಿಕ್ಷೆ ನೀಡುವ ಸಂಬಂಧ 2 ವಿಶೇಷ ನ್ಯಾಯಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ.

* ಬನ್ನೇರುಘಟ್ಟ, ಕುದುರೆಮುಖ, ಭದ್ರಾ ವನ್ಯಧಾಮ, ಆದಿಚುಂಚನಗಿರಿ ನವಿಲುಧಾಮ, ತಲಕಾವೇರಿ ವನ್ಯಧಾಮ, ದರೋಜಿ ಕರಡಿ ಧಾಮ ಸೇರಿದಂತೆ ರಾಜ್ಯದ 30 ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ವನ್ಯಜೀವಿ ಪ್ರದೇಶಗಳನ್ನು 'ಪರಿಸರ ಸೂಕ್ಷ್ಮ ವಲಯ' ಎಂದು ಘೋಷಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ. [ಕುದುರೆಮುಖ ಇನ್ನು ಸಂರಕ್ಷಿತ ಹುಲಿಧಾಮ]

* ರಾಜ್ಯಾದ್ಯಂತ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿವರವಾದ ಚರ್ಚೆ ನಡೆದಿದೆ. ಆದರೆ, ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

* 8 ನೇ ತರಗತಿಯ 5.52 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು 199.30 ಕೋಟಿ ರೂ. ಬಿಡುಗಡೆ

* 1 ಸಾವಿರ ಶಾಲೆಗಳಲ್ಲಿ ಐಐಎಂಬಿ ಸಹಯೋಗದಲ್ಲಿ ಟೆಲಿ ಶಿಕ್ಷಣ ನೀಡಲು ಒಪ್ಪಿಗೆ

* ಮಂಡ್ಯದ ಮೈಶುಗರ್ ಕಾರ್ಖಾನೆ ಪುನರುಜ್ಜೀವನಕ್ಕೆ 95 ಕೋಟಿ ರೂ. ನೀಡಲು ಒಪ್ಪಿಗೆ

English summary
Karnataka government decided ti suspend five Karnataka Public Service Commission (KPSC) members allegedly involved in the 2011 scam. The decision was taken in a cabinet meeting on Thursday, May 7th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X