• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪಚುನಾವಣೆ, ಡಿಸಿಎಂ ಪರಮಾಪ್ತನೇ ಜೆಡಿಎಸ್ ಅಭ್ಯರ್ಥಿ: ಅಕ್ಷರಶಃ ಬೆಚ್ಚಿಬಿದ್ದ ಬಿಜೆಪಿ

|

ಹದಿನೈದು ಕ್ಷೇತ್ರಗಳ ಅಸೆಂಬ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನ ಸೋಮವಾರಕ್ಕೆ (ನ 18) ಮುಕ್ತಾಯಗೊಂಡಿದೆ. ಕೊನೆಯ ದಿನ ನಡೆದ ಅನಿರೀಕ್ಷಿತ ಬೆಳವಣಿಗೆ, ಬಿಜೆಪಿಗೆ ಊಹಿಸಲೂ ಅಸಾಧ್ಯವಾದ ಶಾಕ್ ಅನ್ನು ನೀಡಿದೆ.

ಮೂರು ಕ್ಷೇತ್ರಗಳಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಗಳು ಪಕ್ಷೇತರರಾಗಿ/ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತೆಲೆಬಿಸಿ ಮಾಡಿದೆ.

ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್

ಕೆಲವು ದಿನಗಳ ಹಿಂದೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮಾತಾಡಿರುವ ಆಡಿಯೋವೊಂದು ಬಹಿರಂಗಗೊಂಡು, ಬಿಜೆಪಿಯಲ್ಲಿ ರಂಪ ರಾಮಾಯಣಕ್ಕೆ ಕಾರಣವಾಗಿತ್ತು.

ತಮ್ಮನ್ನು ಸೋಲಿಸಿದವರನ್ನೇ ಗೆಲ್ಲಿಸಬೇಕಾದ ಹೊಣೆ: ಡಿಸಿಎಂ ಲಕ್ಷ್ಮಣ ಸವದಿ ಅತಂತ್ರ

ಅಥಣಿಯಲ್ಲಿ ತಮ್ಮ ನೇರ ಪ್ರತಿಸ್ಪರ್ಧಿ ಮಹೇಶ್ ಕುಮಠಳ್ಳಿ ಬಗ್ಗೆ ಡಿಸಿಎಂ ಸವದಿ ಕೇವಲವಾಗಿ ಮಾತನಾಡಿರುವ ಆಡಿಯೋ ಅದಾಗಿತ್ತು. ಕುಮಠಳ್ಳಿ ಇದಕ್ಕಾಗಿ ಕಣ್ಣೀರೂ ಸುರಿಸಿದ್ದರು. ಈಗ, ಉಪಚುನಾವಣೆ ನಡೆಯುತ್ತಿರುವ ಆ ಕ್ಷೇತ್ರದಲ್ಲಿ ಕುಮಠಳ್ಳಿ ಪರವಾಗಿ, ಪ್ರಚಾರ ನಡೆಸುವ ಅನಿವಾರ್ಯತೆ ಸವದಿಗೆ. ಇವರ ಆಪ್ತನೇ, ಅಲ್ಲಿನ ಜೆಡಿಎಸ್ ಅಭ್ಯರ್ಥಿ.

ಸರ್ವೋಚ್ಚ ನ್ಯಾಯಾಲಯದ ಆದೇಶ

ಸರ್ವೋಚ್ಚ ನ್ಯಾಯಾಲಯದ ಆದೇಶ

ಅನರ್ಹ ಶಾಸಕರ ವಿಚಾರದಲ್ಲಿ, ಸರ್ವೋಚ್ಚ ನ್ಯಾಯಾಲಯದ ಆದೇಶ ಹೊರಬಿದ್ದ ಮರುದಿನವೇ, ಇವರೆಲ್ಲಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆದರೆ, ಇವರೆಲ್ಲಾ ಬಿಜೆಪಿಗೆ ಸೇರುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗೈರಾಗಿದ್ದರು. ಇದರ ಮುನ್ನಾದಿನ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ, ಮಹೇಶ್ ಕುಮಠಳ್ಳಿಗೆ ಟಿಕೆಟ್ ನೀಡುವುದಕ್ಕೆ ಸವದಿ ವಿರೋಧ ವ್ಯಕ್ತಪಡಿಸಿದ್ದರು ಎನ್ನುವ ಮಾಹಿತಿಯಿದೆ.

ಅಥಣಿ ಕ್ಷೇತ್ರದ ಉಸ್ತುವಾರಿ

ಅಥಣಿ ಕ್ಷೇತ್ರದ ಉಸ್ತುವಾರಿ

ಅಥಣಿ ಕ್ಷೇತ್ರದ ಉಸ್ತುವಾರಿಯನ್ನಾಗಿ ಡಿಸಿಎಂ ಸವದಿಯವರನ್ನು ನೇಮಿಸಿ ಯಡಿಯೂರಪ್ಪ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಸರಕಾರದ ಅಳಿವು ಉಳಿವಿನ ಪ್ರಶ್ನೆಯಾಗಿರುವ ಈ ಉಪಚುನಾವಣೆಯ ಒಂದೊಂದು ಕ್ಷೇತ್ರವೂ ಬಿಜೆಪಿ ಪಾಲಿಗೆ ನಿರ್ಣಾಯಕ. ಬಿಜೆಪಿ ಗೆಲ್ಲಬಹುದು ಎನ್ನುವ ಕ್ಷೇತ್ರಗಳಲ್ಲಿ ಅಥಣಿ ಕೂಡಾ ಒಂದು. ಆದರೆ, ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಬಿಜೆಪಿಗೆ ದೊಡ್ಡ ಶಾಕ್ ಎದುರಾಗಿದೆ.

ದೇವೇಗೌಡ್ರು, ಹಿಂದೆ ಮುಂದೆ ನೋಡದೇ ಗುರು ದಸ್ಯಾಳ ಅವರಿಗೆ ಬಿಫಾರಂ ನೀಡಿದರು

ದೇವೇಗೌಡ್ರು, ಹಿಂದೆ ಮುಂದೆ ನೋಡದೇ ಗುರು ದಸ್ಯಾಳ ಅವರಿಗೆ ಬಿಫಾರಂ ನೀಡಿದರು

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ಪರಮಾಪ್ತ, ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸ್ಪರ್ಧೆಯಿಂದ ಕ್ಷೇತ್ರದ ಬದಲಾಗಬಹುದಾದ ರಾಜಕೀಯ ಲೆಕ್ಕಾಚಾರದ ಸೂಕ್ಷ್ಮತೆಯನ್ನು ಅರಿತ ಜೆಡಿಎಸ್ ವರಿಷ್ಠ ದೇವೇಗೌಡ್ರು, ಹಿಂದೆ ಮುಂದೆ ನೋಡದೇ ಗುರು ದಾಸ್ಯಾಳ ಅವರಿಗೆ ಬಿಫಾರಂ ಅನ್ನು ನೀಡಿದ್ದಾರೆ. ಇದು, ಕ್ಷೇತ್ರದ ಚಿತ್ರಣವನ್ನೇ ಬದಲಿಸುವ ಸಾಧ್ಯತೆಯಿದೆ. ಜೊತೆಗೆ, ಈ ಕೊನೆಗಳಿಗೆಯ ರಾಜಕೀಯ, ಲಕ್ಷ್ಮಣ್ ಸವದಿ ಮೇಲೆ ಅನುಮಾನ ಪಡುವಂತಾಗಿದೆ.

ಉಪಮುಖ್ಯಮಂತ್ರಿ ಸವದಿ

ಉಪಮುಖ್ಯಮಂತ್ರಿ ಸವದಿ

ಬಿಜೆಪಿಯ ಜಿಲ್ಲಾಪಂಚಾಯತ್ ಸದಸ್ಯರಾಗಿರುವ ಗುರು ದಾಸ್ಯಾಳ, ಉಪಮುಖ್ಯಮಂತ್ರಿ ಸವದಿ ಅವರ ಪರಮಾಪ್ತ. ಜೊತೆಗೆ, ಇವರು ಪಂಚಮಶಾಲಿ ಸಮುದಾಯಕ್ಕೆ ಸೇರಿದವರು. ಇವರ ಎಂಟ್ರಿಯಿಂದ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿ ಜೆಡಿಎಸ್ಸಿಗೆ ಅಷ್ಟೇನೂ ಅನುಕೂಲಕರವಾದ ವಾತಾವರಣ ಇಲ್ಲದೇ ಇದ್ದರೂ, ವೈಯಕ್ತಿಕವಾಗಿ ದಾಸ್ಯಾಳ ವರ್ಚಸ್ಸನ್ನು ಹೊಂದಿದ್ದಾರೆ. ಜೊತೆಗೆ, ಡಿಸಿಎಂ ಸವದಿ ಪರಮಾಪ್ತ ಎನ್ನುವ ಟ್ಯಾಗ್ ಲೈನ್ ಬೇರೆ.

ಲಕ್ಷ್ಮಣ್ ಸವದಿ, ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು

ಲಕ್ಷ್ಮಣ್ ಸವದಿ, ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು

ಲಕ್ಷ್ಮಣ್ ಸವದಿ, ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಯಾಕೆಂದರೆ, ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು, ಒಂದೋ ಪರಿಷತ್ ಸದಸ್ಯರಾಗಿರಬೇಕು, ಇಲ್ಲವೇ ವಿಧಾನಸಭಾ ಸದಸ್ಯರಾಗಬೇಕು. ಮುಂದಿನ ಆರೇಳು ತಿಂಗಳಲ್ಲಿ, ಪರಿಷತ್ತಿನ ಯಾವ ಸ್ಥಾನ ಖಾಲಿಯಾಗುತ್ತಿಲ್ಲ. ಹಾಗಾಗಿ, ಸವದಿಯ ಪೂರ್ಣ ಸಹಕಾರ, ಉಪಚುನಾವಣೆ ಗೆಲ್ಲಲು ಸಿಗುತ್ತೋ, ಇಲ್ಲವೋ ಎನ್ನುವುದು ಡಿಸೆಂಬರ್ ಒಂಬತ್ತರ ಫಲಿತಾಂಶದ ದಿನದಂದು ಗೊತ್ತಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka By Election: In The Last Day Of Nomination Filing, BJP Faced Tough Fight In Athani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more