ರಾಜ್ಯದಲ್ಲಿ ಬಸ್ ದರ ಏರಿಕೆ ಫಿಕ್ಸ್! ನ. 4ರಂದು ಈ ಬಗ್ಗೆ ಅಂತಿಮ ನಿರ್ಧಾರ, ಎಷ್ಟಾಗಲಿದೆ ಹೆಚ್ಚಳ?

ಬೆಂಗಳೂರು: ರಾಜ್ಯದ ಸರ್ಕಾರಿ ಬಸ್ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆಯ ಬಿಸಿ ತಟ್ಟಲಿದ್ದು, ನವೆಂಬರ್ 4ರಂದು ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ರಾಜ್ಯ ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭೈರತಿ ಸುರೇಶ್, ಪ್ರಯಾಣ ದರ ಪರಿಷ್ಕರಣೆ ವಿಚಾರದ ಬಗ್ಗೆ ಸಂಪುಟದಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

Karnataka Bus Fare Hike Imminent Final Decision on November 4 by Transport Minister Byrathi Suresh

ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರವು ಐದು ಬಾರಿ ಇಂಧನ ಬೆಲೆಗಳನ್ನು ಹೆಚ್ಚಿಸಿರುವ ಕಾರಣ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಮಸ್ಯೆಗೆ ಸಿಲುಕಿವೆ. ನಿಗಮಗಳ ಆರ್ಥಿಕ ಹೊರೆಯನ್ನ ತಗ್ಗಿಸಲು ಮತ್ತು ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆಗಳನ್ನ ಒದಗಿಸಲು ದರ ಏರಿಕೆ ಮಾಡುವುದು ಅನಿವಾರ್ಯ ಎಂದು ಭೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲಾ ಕ್ಯಾಬಿನೆಟ್ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನ ಸಾರಿಗೆ ಇಲಾಖೆಗೆ ವಹಿಸಿದ್ದಾರೆ. ಪ್ರಕ್ರಿಯೆಯ ಭಾಗವಾಗಿ, ನವೆಂಬರ್ 3 ರಂದು ನಾಲ್ಕೂ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದು, ನವೆಂಬರ್ 4ರಂದು ಅಂತಿಮ ನಿರ್ಧಾರ ಅಧಿಕೃತವಾಗಿ ಹೊರಬೀಳಲಿದೆ.

ಬಿಎಂಟಿಸಿ ದರ ಹೆಚ್ಚಳ: ವರದಿಯ ಶಿಫಾರಸುಗಳೇನು?

ಇತ್ತೀಚೆಗಷ್ಟೇ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದ ಮೂವರು ಸದಸ್ಯರ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ರಾಜ್ಯ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ವರದಿಯ ಪ್ರಕಾರ ಕೆಎಸ್ಆರ್‌ಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ದರಗಳನ್ನು ಶೇ. 25 ರಷ್ಟು ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.

ಆದರೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದರವನ್ನ ಬರೋಬ್ಬರಿ ಶೇ. 40 ರಷ್ಟು ಹೆಚ್ಚಿಸಲು ಸಮಿತಿ ಸಲಹೆ ನೀಡಿದೆ. ನಿಗಮಗಳನ್ನ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ದರ ಏರಿಕೆ ಅನಿವಾರ್ಯ ಎಂದು ಸಮಿತಿ ಎಚ್ಚರಿಸಿದೆ. ಈ ಹಿಂದೆ ಜನವರಿ 5, 2025ರಂದು ದರಗಳನ್ನು ಶೇ. 15 ರಷ್ಟು ಹೆಚ್ಚಿಸಲಾಗಿತ್ತು.

ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟ: ಪ್ರಮುಖ ಕಾರಣಗಳು

ಸಾರಿಗೆ ನಿಗಮಗಳು ಪ್ರಸ್ತುತ ಸುಮಾರು 6,600 ಕೋಟಿ ರೂಪಾಯಿಗಳ ಬೃಹತ್ ಸಾಲದ ಸುಳಿಯಲ್ಲಿ ಸಿಲುಕಿವೆ. ಇದರಲ್ಲಿ ನೌಕರರ ಭವಿಷ್ಯ ನಿಧಿ (PF), ಡೀಸೆಲ್ ಬಾಕಿ, ಮತ್ತು ನಿವೃತ್ತ ನೌಕರರ ಗ್ರಾಚ್ಯುಟಿ ಬಾಕಿ ಕೂಡ ಸೇರಿದೆ.

ಜುಲೈ 1, 2026ರಿಂದ ಜಾರಿಗೆ ಬಂದ ಶೇ. 12.5 ರಷ್ಟು ವೇತನ ಹೆಚ್ಚಳದಿಂದಾಗಿ ನಿಗಮಗಳ ವಾರ್ಷಿಕ ವೆಚ್ಚಕ್ಕೆ ಹೆಚ್ಚುವರಿಯಾಗಿ 873.64 ಕೋಟಿ ರೂಪಾಯಿ ಹೊರೆಯಾಗಿದೆ. ಜೊತೆಗೆ, ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 7.81 ರೂಪಾಯಿ ಏರಿಕೆಯಾಗಿರುವುದರಿಂದ ವಾರ್ಷಿಕ ಇಂಧನ ಬಿಲ್ 395 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.

ಶಕ್ತಿ ಯೋಜನೆ ಪರಿಣಾಮ

ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಶಕ್ತಿ ಯೋಜನೆಯೂ ಸಾರಿಗೆ ನಿಗಮಗಳ ದೈನಂದಿನ ನಗದು ಹರಿವಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಹಣ ಪಾವತಿಸಿ ಟಿಕೆಟ್ ಖರೀದಿಸುವ ಪುರುಷ ಪ್ರಯಾಣಿಕರ ಪ್ರಮಾಣ ಶೇ. 48 ರಿಂದ ಶೇ. 36 ಕ್ಕೆ ಕುಸಿದಿದೆ.

2023ರ ಜೂನ್‌ನಿಂದ 2026ರ ಜುಲೈವರೆಗೆ ನಿಗಮಗಳು ಶಕ್ತಿ ಯೋಜನೆಗಾಗಿ ಒಟ್ಟು 20,956 ಕೋಟಿ ರೂಪಾಯಿ ವೆಚ್ಚ ಮಾಡಿದ್ದರೂ, ಸರ್ಕಾರದಿಂದ ಮರುಪಾವತಿಯಾಗಿರುವುದು ಕೇವಲ 15,305 ಕೋಟಿ ರೂಪಾಯಿ ಮಾತ್ರ.

ಇನ್ನೂ 5,651 ಕೋಟಿ ರೂಪಾಯಿಗಳ ದೊಡ್ಡ ಮೊತ್ತ ಬಾಕಿ ಉಳಿದಿದೆ. 2026-27ನೇ ಸಾಲಿನಲ್ಲಿ ಮೀಸಲಿಟ್ಟ 5,300 ಕೋಟಿ ರೂಪಾಯಿಗಳಲ್ಲಿ ಇದುವರೆಗೆ ಕೇವಲ 3,080 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಈ ಎಲ್ಲಾ ಆರ್ಥಿಕ ಸವಾಲುಗಳು ಸಾರಿಗೆ ಇಲಾಖೆಗೆ ದರ ಏರಿಕೆಯೊಂದೇ ದಾರಿ ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+