ಕರ್ನಾಟಕ ವಿಧಾನಸಭೆ ಅಧಿವೇಶನ: ರೈತಪರ ಬಜೆಟ್ ಮಂಡಿಸಿದ ಕುಮಾರಸ್ವಾಮಿ

ಬೆಂಗಳೂರು, ಫೆಬ್ರವರಿ 08: ಮೈತ್ರಿ ಸರ್ಕಾರ ಉಳಿಯುತ್ತಾ, ಬೀಳುತ್ತಾ ಎಂಬ ಪ್ರಶ್ನೆಗೆ ಇಂದು ಸ್ಪಷ್ಟ ಉತ್ತರ ಸಿಕ್ಕಲಿದ್ದು, ಬಜೆಟ್ ಮಂಡನೆಯತ್ತ ಇಡೀ ರಾಜ್ಯದ ಚಿತ್ತ ನೆಟ್ಟಿದೆ.

ಕರ್ನಾಟಕ ಬಜೆಟ್ ಅಧಿವೇಶನ, ಎಚ್ಡಿಕೆ ಬಜೆಟ್ ಮಂಡನೆ, ಬಿಜೆಪಿ ಪ್ರತಿಭಟನೆ : ಚಿತ್ರಗಳು

ಬುಧವಾರದಿಂದ ಆರಂಭವಾಗಿದ್ದ ಬಜೆಟ್ ಅಧಿವೇಶನಕ್ಕೆ ಹಲವು ಕಾಂಗ್ರೆಸ್ ಶಾಸಕರು ಗೈರಾಗಿದ್ದ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ಬಹುಮತವಿಲ್ಲ ಎಂಬ ಗಲಾಟೆ ಎಬ್ಬಿಸಿ, ಎರಡೂ ದಿನಗಳ ಕಲಾಪವನ್ನು ಬಿಜೆಪಿ ನಡೆಯುವುದಕ್ಕೆ ಬಿಟ್ಟಿರಲಿಲ್ಲ.

ಆದರೆ ಇಂದು 12:30 ಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡಿಸಲಿರುವ ಬಜೆಟ್ ಸಮಯದಲ್ಲಿ ಎಲ್ಲಾ ಶಾಸಕರೂ ಹಾಜರಿರುತ್ತಾರಾ ಎಂಬುದೇ ಕುತೂಹಲದ ಪ್ರಶ್ನೆಯಾಗಿದ್ದು, ಇಂದು ಬಜೆಟ್ ಮಂಡಿಸಲು ಅವಕಾಶ ನೀಡದೆ ಇರಲು ಬಿಜೆಪಿ ನಿರ್ಧರಿಸಿದ್ದು, ಅದಕ್ಕಾಗಿ ಕೆಲವು ಯೋಜನೆಗಳನ್ನು ಹಾಕಿಕೊಂಡಿದೆ.

Karnataka Budget 2019 LIVE : ಇಂದು ಬಜೆಟ್ ಮಂಡನೆಯಾಗುತ್ತಾ?

ಅತೃಪ್ತ ಶಾಸಕರ ಮನವೊಲಿಸಿ, ವಾಪಸ್ ಕರೆಸಿಕೊಂಡು ಮತ್ತೊಮ್ಮೆ ಅಗ್ನಿಪರೀಕ್ಷೆಯಿಂದ ಮೈತ್ರಿ ಸರ್ಕಾರ ಪಾರಾಗುತ್ತಾ, ಅಥವಾ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯೊಂದು ಇಂದು ಘಟಿಸುತ್ತಾ ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

Karnataka Budget session Live: Crucial day for all parties of Karnataka

ಇಂದಿನ ಅಧಿವೇಶನ ಮತ್ತು ಬಜೆಟ್ ಮಂಡನೆಯ ಕ್ಷಣಕ್ಷಣದ ಮಾಹಿತಿಯನ್ನು ಒನ್ ಇಂದಿಯಾ ಕನ್ನಡ ನೀಡಲಿದೆ.

Feb 08, 2019, 3:42 pm IST

3 ಗಂಟೆಗೂ ಹೆಚ್ಚು ಕಾಲ ಸುದೀರ್ಘ ಭಾಷಣ ಮಾಡಿದ ಎಚ್ ಡಿ ಕುಮಾರಸ್ವಾಮಿ
Feb 08, 2019, 3:21 pm IST

ಬಜೆಟ್ ಬಳಿಕ ಸಂಜೆ ಶೃಂಗೇರಿಗೆ ತೆರಳಲಿರುವ ಎಚ್ ಡಿ ಕುಮಾರಸ್ವಾಮಿ, ಶೃಂಗೇರಿಯಲ್ಲಿ ಶಾರದಾ ದೇವಿಗೆ ವಿಶೇಷ ಪೂಜೆ ಸಾಧ್ಯತೆ
Feb 08, 2019, 3:03 pm IST

ಸಾಲಮನ್ನಾ ಮಾಡಲು ನಾಲ್ಕು ವರ್ಷದ ವರೆಗೆ ಕಾಯೋಲ್ಲ ಎಂದ ಎಚ್ ಡಿ ಕುಮಾರಸ್ವಾಮಿ
Feb 08, 2019, 3:01 pm IST

ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಆರು ತಿಂಗಳ ಕಾಲ ನೀಡುವ ಮಾಸಿಕ 1000 ರೂ.ಗಳನ್ನು 2000 ರೂ.ಗೆ ಹೆಚ್ಚಳ. ಈ ಮೂಲಕ ಮಹಿಳೆಯರಿಗೆ ಬಂಪರ್ ಕೊಡುಗೆ
Feb 08, 2019, 3:00 pm IST

50 ಕೋಟಿ ರೂ. ವೆಚ್ಚದಲ್ಲಿ ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ. ಎಲ್ಲಾ ಟ್ಯಾಕ್ಸಿ, ಆಟೋ ಚಾಲಕರಿಗಾಗಿ ಗುಂಪುವಿಮೆ. ಸಂವಿಧಾನದ ಮಹತ್ವ ತಿಳಿಸಲು ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪನೆ
Feb 08, 2019, 2:20 pm IST

ಮಾನಸ ಸರೋವರ ಯಾತ್ರಿಗಳಿಗೆ ನೀಡುವ ಸಹಾಯ ಧನ 30000 ರೂ ಗೆ ಏರಿಕೆ
Feb 08, 2019, 2:14 pm IST

ಸಂವಿಧಾನದ ಮಹತ್ವ ತಿಳಿಸಲು ರಾಜಧಾನಿ ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪನೆ
Feb 08, 2019, 2:01 pm IST

ವಿಧಾನಸೌಧದ ಗಾಂಧಿ ಪ್ರತಿಮೆ ಎದುರಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಶಾಸಕರು
Feb 08, 2019, 2:01 pm IST

ಮಲೆನಾಡಿಗರ ನಿದ್ದೆ ಕೆಡಿಸಿರುವ ಮಂಗನ ಕಾಯಿಲೆ ನಿವಾರಣೆಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ
Feb 08, 2019, 1:29 pm IST

ಸಣ್ಣ, ಅತೀಸಣ್ಣ ರೈತರಿಗಾಗಿ ಗೃಹಲಕ್ಷ್ಮಿ ಯೋಜನೆ ಜಾರಿ. ರೈತರ ಆಭರಣದ ಮೇಲೆ ಶೇ.3 ರ ಬಡ್ಡಿದರದಲ್ಲಿ ಸಾಲ ಸೌಲಭ್ಯ
Feb 08, 2019, 1:27 pm IST

ರೇಷ್ಮೆ ಬೆಳಗಾರರಿಗೆ ಉತ್ತೇಜನ ನೀಡಲು 2 ಕೋಟಿ ರೂ.ಅನುದಾನ, ಕೋಲಾರದಲ್ಲಿ ಟೊಮ್ಯಾಟೋ ಉತ್ಪಾದಕ ಘಟಕ ಸ್ಥಾಪನೆಗೆ ಯೋಜನೆ. ದಾಳಿಂಬೆ, ದ್ರಾಕ್ಷಿ ಬೆಳೆಗಾರರಿಗಾಗಿ ವಿಶೇಷ ಪ್ಯಾಕೇಜ್ ಮಿಡಿ ಸೌತೆ ಬೆಳೆ ಉತ್ತೇಜನಕ್ಕೆ ರೂ.6 ಕೋಟಿ.
Feb 08, 2019, 1:20 pm IST

ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ
Feb 08, 2019, 1:20 pm IST

ಬಜೆಟ್ ಅಧಿವೇಶನದಿಂದ ಹೊರಗಡೆ ತೆರಳಿದ ಬಿಜೆಪಿ ಶಾಸಕರು
Feb 08, 2019, 1:20 pm IST

ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳು ಚುರುಕುಗೊಂಡಿವೆ
Feb 08, 2019, 1:19 pm IST

ಅಣೆಕಟ್ಟು ನಿರ್ಮಾಣ, ಕಾವೇರಿ ನೀರು ಸದ್ಬಳಕೆಗೆ ಡಿಪಿಆರ್ ಸಲ್ಲಿಕೆ
Feb 08, 2019, 1:19 pm IST

ಮೇಕೆದಾಟು ನೀರಾವರಿ ಯೋಜನೆಗೆ ಕೇಂದ್ರದ ಸಮ್ಮತಿ ಸಿಕ್ಕಿದೆ.
Feb 08, 2019, 1:06 pm IST

ಸಾವಯವ, ಸಿರಿ ಧಾನ್ಯ ಉತ್ಪನ್ನಕ್ಕೆ ಪ್ರಚಾರ ನೀಡಲು ಸಮಾವೇಶ
Feb 08, 2019, 12:44 pm IST

ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನಮ್ಮ ಸರ್ಕಾರದ ಧ್ಯೇಯ. ಅದಕ್ಕೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಿದ್ದೇವೆ- ಎಚ್ ಡಿ ಕುಮಾರಸ್ವಾಮಿ
Feb 08, 2019, 12:39 pm IST

ವಿಧಾನಸಭೆಗೆ ಆಗಮಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸ್ಪೀಕರ್ ರಮೇಶ್ ಕುಮಾರ್
Feb 08, 2019, 12:26 pm IST

ಕೆಲವೇ ಕ್ಷಣಗಳಲ್ಲಿ ಬಹುನಿರೀಕ್ಷಿತ ರಾಜ್ಯ ಬಜೆಟ್ ಮಂಡಿಸಲಿರುವ ಸಿಎಂ ಕುಮಾರಸ್ವಾಮಿ
Feb 08, 2019, 12:17 pm IST

ಅವಶ್ಯಕತೆ ಇದ್ರೆ ಬಿ ಎಸ್ ವೈ ಆಡಿಯೋ ಕುರಿತು ತನಿಖೆ ನಡೆಸುತ್ತೇವೆ- ಎಚ್ ಡಿ ಕುಮಾರಸ್ವಾಮಿ
Feb 08, 2019, 12:13 pm IST

ಸಿದ್ದರಾಮಯ್ಯ ಪತ್ರಿಕಾಗೋಷ್ಠಿ
Feb 08, 2019, 12:12 pm IST

ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ, ಉಮೇಶ್ ಜಾಧವ್ ನಾಲ್ಕು ಜನರೂ ನನಗೆ ಪತ್ರ ಬರೆದಿದ್ದಾರೆ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
Feb 08, 2019, 12:12 pm IST

ಐವರು ಶಾಸಕರು ಸಭೆಗೆ ಬಂದಿಲ್ಲ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ, ಉಮೇಶ್ ಜಾಧವ್, ಗಣೇಶ್ ಈ ಐವರು ಶಾಸಕರು ಸಭೆಗೆ ಬಂದಿಲ್ಲ.
Feb 08, 2019, 12:08 pm IST

ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಬಿ ಎಸ್ ವೈ ರಾಜಕೀಯ ನಿವೃತ್ತಿ ಎಂಬ ಮಾತನ್ನು ದೇವರೇ ಆಡಿಸಿದ್ದಾನೆ. ಆ ಮಾತಿಗೆ ಅವರೇ ಮುಂದೆ ಅನುಭವಿಸುತ್ತಾರೆ- ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
Feb 08, 2019, 11:59 am IST

ಇಂದು ಬಿಡುಗಡೆಯಾದ ಆಡಿಯೋ ಬಿಜೆಪಿಯ 'ನಿಯತ್' ತಿಳಿಯುತ್ತಿದೆ. ಮಾಡೋದೆಲ್ಲಾ ಅನಾಚಾರ, ಮನೆಮುಂದೆ ಬೃಂದಾವನ ಎಂದು ಸಿದ್ದರಾಮಯ್ಯ ಟ್ವೀಟ್
Feb 08, 2019, 11:52 am IST

ಮಿಮಿಕ್ರಿ ಆರ್ಟಿಸ್ಟ್ ಗಳು ಸಿದ್ಧಪಡಿಸಿರುವ ಎಡಿಟೆಡ್ ಆಡಿಯೋ ಅದು- ಆರ್ ಅಶೋಕ್, ಬಿಜೆಪಿ ಶಾಸಕ
Feb 08, 2019, 11:49 am IST

ಕೆಲವೇ ಕ್ಷಣಗಳಲ್ಲಿ ಮತ್ತೆ ಎಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
Feb 08, 2019, 11:46 am IST

ಇವೆಲ್ಲವೂ ಒಂದು ತಂತ್ರ. ಅದು ಫೇಕ್ ಆಡಿಯೋ. ಈ ರೀತಿಯ ಆಡಿಯೋ ಬಿಡುಗಡೆ ಮಾಡುವುದು ಮುಖ್ಯಮಂತ್ರಿ ಹುದ್ದೆಗೆ ತಕ್ಕುದಲ್ಲ-ಬಿ.ಶ್ರೀರಾಮುಲು, ಮೊಳಕಾಲ್ಮೂರು ಬಿಜೆಪಿ ಶಾಸಕ
Feb 08, 2019, 11:44 am IST

"ಸಾಕಷ್ಟು ಕಾಂಗ್ರೆಸ್-ಜೆಡಿಎಸ್ ಶಾಸಕರು ಗೈರಾಗಿದ್ದಾರೆ. ಇವಕ್ಕೆಲ್ಲ ಕಾರಣ ಬಿಜೆಪಿಯ ಆಪರೇಶನ್ ಕಮಲವಲ್ಲ. ಮಿಮಿಕ್ರಿ ಆರ್ಟಿಸ್ಟ್ ಹತ್ತಿರ ಮಾತನಾಡಿಸಿ ಆಡಿಯೋ ಮಾಡಿಸುವ ಅಗತ್ಯ ನಮಗಿಲ್ಲ. ನಮಗೆ ಯಾರಿಗೂ ಆಮಿಷವೊಡ್ಡುವ ಅಗತ್ಯ ಇಲ್ಲ" -ಶ್ರೀರಾಮುಲು, ಮೊಳಕಾಲ್ಮೂರು ಶಾಸಕ
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+