Karnataka Budget 2023: ಕನ್ನಡಪರ ಕಾರ್ಯಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಳಿದ ಅನುದಾನವೆಷ್ಟು?

ಕನ್ನಡದ ಅಸ್ಮಿತೆ ಕಾಪಾಡಿಕೊಂಡು ಬರುತ್ತಿರುವ ಹಾಗೂ ಭಾಷೆ ಪರ ಕಾರ್ಯ ಚಟುವಟಿಕೆ ನಡೆಸಿಕೊಂಡು ಬರುತ್ತಿರುವ 'ಕನ್ನಡ ಸಾಹಿತ್ಯ ಪರಿಷತ್ತು' ಈ ಭಾರಿ ರಾಜ್ಯ ಸರ್ಕಾರದಿಂದ ದುಪ್ಪಟ್ಟು ಅನುದಾನ ನಿರೀಕ್ಷಿಸುತ್ತಿದೆ.

ಬೆಂಗಳೂರು, ಫೆಬ್ರುವರಿ 03: ಕನ್ನಡದ ಅಸ್ಮಿತೆ ಕಾಪಾಡಿಕೊಂಡು ಬರುತ್ತಿರುವ ಹಾಗೂ ಭಾಷೆ ಪರ ಕಾರ್ಯ ಚಟುವಟಿಕೆ ನಡೆಸಿಕೊಂಡು ಬರುತ್ತಿರುವ 'ಕನ್ನಡ ಸಾಹಿತ್ಯ ಪರಿಷತ್ತು' ಈ ಭಾರಿ ರಾಜ್ಯ ಸರ್ಕಾರದಿಂದ ದುಪ್ಪಟ್ಟು ಅನುದಾನ ನಿರೀಕ್ಷಿಸುತ್ತಿದೆ.

ಹೌದು, ಈ ಸಾಲಿನ ಕರ್ನಾಟಕ ಆಯವ್ಯಯ (Karnataka Budget 2023) ವು ಇದೇ ಫೆಬ್ರುವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿದ್ದಾರೆ. ಇದರ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಈ ಮೊದಲು ನೀಡುತ್ತಿದ್ದ ಅನುದಾನಕ್ಕಿಂತಲೂ ದುಪಟ್ಟು ಅಂದರೆ 25ಕೋಟಿ ರೂ.ಘೋಷಿಸಬೇಕು ಎಂದು ಮನವಿ ಮಾಡಿದೆ. ಈ ಸಂಬಂಧ ಕಸಾಪ ಡಾ.ಮಹೇಶ್ ಜೋಶಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಸಲ್ಲಿಸಿ ಮನವಿ ಮಾಡಿದರು.

ಕಸಾಪ ಕಾರ್ಯ ಚಟುವಟಿಕೆಗಳು ಸೇರಿದಂತೆ ಕಟ್ಟಡಗಳ ನವೀಕರಣ ಹಾಗೂ ಇನ್ನಿತರ ಅನೇಕ ಅಭಿವೃದ್ಧಿ ಕೆಲಸಗಳಿಗಾಗಿ ವಿಶೇಷ ಅನುದಾನದ ಅವಶ್ಯಕತೆ ಇದು ಎಂದು ಮಹೇಶ್ ಜೋಶಿ ಸರ್ಕಾರಕ್ಕೆ ತಿಳಿಸಿದ್ದಾರೆ. ಆದ್ದರಿಂದ ಈ ವರ್ಷ ಆಯವ್ಯಯದಲ್ಲಿ 25ಕೋಟಿ ಪರಿಷತ್ತಿಗಾಗಿ ಕಾಯ್ದಿರಿಸುವಂತೆ ಕೋರಿದ್ದಾರೆ.

 Karnataka Budget: Kannada Sahitya Parishad Requested Government To Announce Grant Rs 25 cr

ಅಭಿವೃದ್ಧಿ ಪಟ್ಟಿ: ಪ್ರತಿ ವರ್ಷ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗಾಗಿ 10ಕೋಟಿ ರೂಪಾಯಿ ಅನುದಾನ ನೀಡುತ್ತಿದೆ. ಆದರೆ ಈ ಬಾರಿ ಸಾಕಷ್ಟು ಕೆಲಸಗಳು ಆಗಬೇಕಿದೆ. ಕಸಾಪ ವಜ್ರಮಹೋತ್ಸವ ಅಂಗವಾಗಿ ಕಟ್ಟಡ ಮತ್ತು ಆಡಳಿತ ಕಟ್ಟಡಕ್ಕೆ ಬಣ್ಣ ಲೇಪನ, ಪಂಪ ಸಭಾಂಗಣ ನವೀಕರಣ, ಅಕ್ಕಮಹಾದೇವಿ ಸಭಾಂಗಣದ ಧ್ವನಿ ತಂತ್ರಜ್ಞಾನ ವ್ಯವಸ್ಥೆ ಸರಿಪಡಿಸುವುದು, ಶತಮಾನೋತ್ಸವ ಭವನದಲ್ಲಿ ಸಾಹಿತಿ ಹಾಗೂ ಕಲಾವಿದರಿಗೆ ಅತಿಥಿಗೃಹ ವ್ಯವಸ್ಥೆ ಕಲ್ಪಿಸುವುದು.

ಬಿ.ಎಂ. ಶ್ರೀ ಅಚ್ಚುಕೂಟ, ಸರಸ್ವತಿ ಗ್ರಂಥ ಭಂಡಾರ, ಪುಸ್ತಕ ಮಾರಾಟ ಕೇಂದ್ರ ಇವುಗಳ ಕಟ್ಟಡಗಳ ನವೀಕರಣ ಮತ್ತು ಅಭಿವೃದ್ಧಿಗೆ, ಗ್ರಂಥಗಳ ಡಿಜಿಟಲೀಕರಣ, ತಂತ್ರಾಂಶ ಅಳವಡಿಕೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಅನುದಾನದ ಅಗತ್ಯವಿದೆ.

 Karnataka Budget: Kannada Sahitya Parishad Requested Government To Announce Grant Rs 25 cr

ಕನ್ನಡ ಸಾಹಿತ್ಯ ಪರಿಷತ್ತಿನ ಮಹಾಪೋಷಕರು ಈ ಬಗ್ಗೆ ಸರ್ಕಾರದ ಜೊತೆಗೆ ಚರ್ಚೆ ಮಾಡಿದ್ದರೆ. ಈ ವರ್ಷ ನಡೆದ ಪರಿಷತ್ತಿನ ಕೆಲಸಗಳಿಗೆ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೆ ಹೆಚ್ಚು ಅನುದಾನ ನೀಡುವುದಾಗಿ ಈ ಹಿಂದೆ ಭರವಸೆ ನೀಡಲಾಗಿತ್ತು. ಅದರಂತೆ ಸರ್ಕಾರ ಪರಿಷತ್ತಿಗೆ ನಿರೀಕ್ಷಿತ ಅನುದಾನ ಘೋಷಿಸುವಂತೆ ಕಸಾಪ ಅಧ್ಯಕ್ಷರು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತನ್ನು 'ಜನಸಾಮಾನ್ಯರ ಪರಿಷತ್ತನ್ನಾಗಿಸಲು' ವಿವಿಧ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ರಮಗಳ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಪರಿಷತ್ತಿನ ಜೊತೆಗೆ ಸರ್ಕಾರ ಇದೆ. ಬಜೆಟ್‌ನಲ್ಲಿ ಅನುದಾನ ಬೇಡಿಕೆ ಈಡೇರಿಸುವ ಮೂಲಕ ಸರ್ಕಾರ ನಮ್ಮೊಂದಿಗೆ ಕೈ ಜೋಡಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+