Karntaka Budget 2025: ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಅನುದಾನ ಹಂಚಿಕೆ, ಏನೆಲ್ಲ ಘೋಷಣೆ ಆಗಿದೆ!
ಬೆಂಗಳೂರು, ಮಾರ್ಚ್ 07: ಬಹುನಿರೀಕ್ಷೆ ಕರ್ನಾಟಕ ಬಜೆಟ್ ಮಂಡನೆಗೆ ಕ್ಷಣಗಣನೇ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಮಂಡನೆ ಮಾಡಲಿದ್ದಾರೆ. ಅಪಾರ ನಿರೀಕ್ಷೆಗಳು ಇದ್ದು, ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸುವ ಜೊತೆಗೆ ಯಾವುದರ ಮೇಲೂ ಹೆಚ್ಚು ಭಾರ ಹಾಕದೇ ಜನರಪರ ಬಜೆಟ್ ಮಂಡಿಸುವ ಸವಾಲು ಸಿಎಂ ಮೇಲಿದೆ. ಇತ್ತೀಚೆಗೆ ಅವರ ಕಾಲು ನೋವಾಗಿತ್ತು. ಹೀಗಾಗಿ ಅವರು ಕುರ್ಚಿ (ವ್ಹೀಲ್ ಚೇರ್) ಮೇಲೆ ಕೂತೇ ಬಜೆಟ್ ಮಂಡನೆ ಮಾಡುವ ನಿರೀಕ್ಷೆಗಳು ಇವೆ.
ಬಜೆಟ್ ಅಂದಾಜು ವೆಚ್ಚ, ಮಂಡನೆ ಸಮಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಾರ್ಚ್ 07 ರಂದು ಶಕ್ತಿ ಸೌಧ ವಿಧಾನಸೌಧದಲ್ಲಿ ಬೆಳಗ್ಗೆ 10.15ಗಂಟೆಗೆ ಪ್ರಸಕ್ತ ಸಾಲಿನ 2025-26 ರಾಜ್ಯ ಆಯವ್ಯಯ ಮಂಡಿಸಲಿದ್ದಾರೆ. ಈ ಬಜೆಟ್ ಗಾತ್ರ ಅಂದಾಜು ಸುಮಾರು 04 ಲಕ್ಷ ಕೋಟಿ ದಾಟಲಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ 2024-25ರಲ್ಲಿ ರಾಜ್ಯ ಬಜೆಟ್ ಗಾತ್ರ 3.71 ಲಕ್ಷ ಕೋಟಿ ಇತ್ತು.

ಗ್ಯಾರೆಂಟಿ ಯೋಜನೆಗಳ ಹಂಚಿಕೆ ಹಣ ಇಳಿಕೆ ಇಲ್ಲ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಗೆ ವಾರ್ಷಿಕವಾಗಿ ಬೇಕಾಗುವ 52000 ಕೋಟಿ ಹಣ ಹಂಚಿಕೆಯಲ್ಲಿ ಇಳಿಕೆ ಮಾಡುವುದಿಲ್ಲ. ಆದರೆ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು 55000 ಕೋಟಿ ಬಂಡವಾಳ ವೆಚ್ಚ ಹೆಚ್ಚಳಕ್ಕೆ ಸಿಎಂ ನಿರ್ಧರಿಸಿದ್ದಾರೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಕರ್ನಾಟಕ ಬಜೆಟ್ ನೇರ ಪ್ರಸಾರ ಎಲ್ಲಿ ವೀಕ್ಷಣೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಬಜೆಟ್ ಮಂಡನೆಯು ಆನ್‌ಲೈನ್‌ನಲ್ಲಿ ಪ್ರಸಾರವಾಗಲಿದೆ. ಬಜೆಟ್ ಮಂಡಿಸುವ ಲೈವ್ ಅನ್ನು ವಿಧಾನಮಂಡಳ ವೆಬ್‌ಕಾಸ್ಟ್‌ನಲ್ಲಿ ನೋಡಬಹುದು. ಈ ಅಧಿಕೃತ ಜಾಲತಾಣದಲ್ಲಿ https://webcast.gov.in/karassembly ವೀಕ್ಷಿಸಬಹುದು. ಜೊತೆಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್ ಹ್ಯಾಂಡಲ್ @INCKarnataka ಇಲ್ಲಿ ಸಹ ಲೈವ್ ಪ್ರಸಾರ ಬಿಟ್ಟಿರುತ್ತಾರೆ. ಅಲ್ಲಿ ವೀಕ್ಷಿಸಬಹುದು. ಜೊತೆಗೆ 'ಒನ್ ಇಂಡಿಯಾ ಕನ್ನಡ' ಬಜೆಟ್‌ನಲ್ಲಿ ಕ್ಷಣ ಕ್ಷಣದ ಲೈವ್ ಅಪ್ಡೇಟ್ ನೀಡಲಿದೆ ಇಲ್ಲಿ ಸಹ ತಿಳಿಯಬಹುದು. ಇತರ ಸುದ್ದಿ ಮಾಧ್ಯಮಗಳಲ್ಲೂ ವೀಕ್ಷಿಸಬಹುದಾಗಿದೆ.
ಕರ್ನಾಟಕ ಬಜೆಟ್ ನಿರೀಕ್ಷೆಗಳು
* ಪಂಚ ಗ್ಯಾರೆಂಟಿ ಯೋಜನೆಗಳ ಹಿನ್ನೆಲೆ ಬೃಹತ್ ಯೋಜನೆ ಘೋಷಣೆ ಕಷ್ಟಸಾಧ್ಯ
* ರಾಜ್ಯ ಜನರಿಗೆ ಸಣ್ಣ ಪುಟ್ಟ ಯೋಜನೆಗಳ ಘೋಷಣೆ ನಿರೀಕ್ಷೆ
* ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೆಚ್ಚಳಕ್ಕೆ ಕೈ ಹಾಕಲ್ಲ, ಚಿಕ್ಕಪುಟ್ಟ ತೆರಿಗೆ ಏರಿಕೆ ಸಾಧ್ಯತೆ
* ಶಿಕ್ಷಕರು, ಉಪನ್ಯಾಸಕರ ನೇಮಕಕ್ಕೆ ಕ್ರಮ
* ಶಾಸಕರಿಗೆ ವಿಶೇಷ ಅನುದಾನ, ವಿವಿಧ ಜಿಲ್ಲೆಗಳಿಗೆ ವೈದ್ಯಕೀಯ ಕಾಲೇಜು ಘೋಷಣೆ
* ಹೊಸ ಜಿಲ್ಲೆಗಳು, ಇಲ್ಲವೇ ತಾಲೂಕು ಪ್ರಕಟ ನಿರೀಕ್ಷೆ
* ಅಮೃತ ಸ್ವಾಭಿಮಾನಿ ಕುರಿಗಾಯಿ, ಪಶು ಭಾಗ್ಯಕ್ಕೆ ಮರು ಚಾಲನೆ ನಿರೀಕ್ಷೆ.
* ಗ್ಯಾರಂಟಿಗಳಿಗೆ ಅನುದಾನ ಕೊಂಚ ಹೆಚ್ಚಳ ಮಾಡುವ ಸಾಧ್ಯತೆ
* ರೈತರು, ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರಿಗಾಗಿ ಸಣ್ಣ ಪುಟ್ಟ ಯೋಜನೆ ಘೋಷಣೆ.












Click it and Unblock the Notifications