ಕರ್ನಾಟಕ ಬಜೆಟ್ 2018 : ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಕೊಟ್ಟಿದ್ದೇನು?

ಬೆಂಗಳೂರು, ಜುಲೈ 05 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಚೊಚ್ಚಲ ಬಜೆಟ್ ಮಂಡನೆ ಮಾಡಿದರು. ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ಮೀಸಲಾಗಿಡಲಾಗಿದೆ.

ಗುರುವಾರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2018-19ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ರೈತರ ಸಾಲ ಮನ್ನಾ ಸೇರಿದಂತೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.

 Karnataka Budget 2018 : What for Agriculture sector

ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ...

* ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗದಲ್ಲಿ ಮೊದಲ ಹಂತದಲ್ಲಿ ತಲಾ 500 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ

* ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಚಿವರನ್ನು ಒಳಗೊಂಡ ಕೃಷಿ ಸಮನ್ವಯ ಉನ್ನತ ಸಮಿತಿ ರಚನೆ. ಮೂರು ತಿಂಗಳಿಗೊಮ್ಮೆ ಸಭೆ

* ರೈತರಿಗೆ ತಂತ್ರಜ್ಞಾನ ಪರಿಚಯ ಪಡಿಸಲು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ 3 ಕೋಟಿ ಅನುದಾನ

* ಡ್ರೋಣ್ ಕ್ಯಾಮರಾಗಳನ್ನು ಬಳಸಿ ಬೆಳ ಪರಿಸ್ಥಿತಿ ಮಾಹಿತಿ, ನೀರಾವರಿಯಲ್ಲಿ ಸೆನ್ಸರ್ ಸೇರಿದಂತೆ ಹಲವು ನವೋದ್ಯಮ ಹೊಸ ಆವಿಷ್ಕಾರ ಉತ್ತೇಜನ

* ರೈತರ ಸಂಘಟನೆ ಹಾಗೂ ಸಾಮರ್ಥ್ಯ ಬಲವೃರ್ಧನೆ ಮಾಡಲು ರಾಜ್ಯದ ರೈತ ಉತ್ಪಾದಕ ಸಂಸ್ಥೆ ನೀತಿ ಜಾರಿ

* ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮಾರ್ಗಸೂಚಿಯಂತೆ ಸೂಕ್ತ ಯೋಜನೆಗಳಿಗೆ ಮಂಜೂರಾತಿ, ಸಿರಿಧಾನ್ಯ, ಬೇಳೆಕಾಳು, ಎಣ್ಣೆ ಕಾಳುಗಳು, ಮುಸುಕಿನ ಜೋಳ ಇತ್ಯಾದಿ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ

* ಆಂಧ್ರಪ್ರದೇಶ ಸರ್ಕಾರವು ಜಾರಿಗೊಳಿಸುತ್ತಿರುವ ಶೂನ್ಯ ಬಂಡವಾಳ ಸಹಜ ಕೃಷಿ ಪದ್ಧತಿಯನ್ನು ರಾಜ್ಯದ ರೈತರು ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ. 50 ಕೋಟಿ ರೂ. ಮೀಸಲು.

* ರೈತರು ಅಂಟುವಾಳ ಕಾಯಿ ಮರವನ್ನು ವ್ಯಾಪಕವಾಗಿ ಬೆಳೆಯಲು ರೂಪಿಸುವ ಕಾರ್ಯಕ್ರಮಕ್ಕೆ 10 ಕೋಟಿ ರೂ. ಮೀಸಲು.

* ರೈತರ ಹಂತದಲ್ಲಿಯೇ ಸಣ್ಣ ಸಣ್ಣ ಯಂತ್ರಚಾಲಿತ ಎಣ್ಣೆ ಗಾಣಗಳನ್ನು ನೀಡಿ ಶುದ್ಧ ಎಣ್ಣೆ ಪೂರೈಕೆಗೆ ಪ್ರೋತ್ಸಾಹ. ಈ ಯೋಜನೆಗೆ 5 ಕೋಟಿ ರೂ. ಅನುದಾನ.

* ಕೃಷಿಗೆ ಪೂರಕ ತಂತ್ರಜ್ಞಾನ ಆವಿಷ್ಕಾರ ಮಾಡುವ ನವೋದ್ಯಮಗಳಿಗೆ ಉತ್ತೇಜನ. 5 ಕೋಟಿ ರೂ. ಅನುದಾನ.

* ಕರ್ನಾಟಕ ಅಂತರಗಂಗ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಸಂಸ್ಥೆಯ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ.

* ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆಗೆ ಬೀಜ ಪ್ರಮಾಣೀಕರಣ ಮತ್ತು ದೃಢೀಕರಣ ಕೇಂದ್ರವನ್ನು ಸ್ಥಾಪಿಸಲು 5 ಕೋಟಿ ರೂ. ಅನುದಾನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+