ಅಬಕಾರಿ ತೆರಿಗೆ ಶೇ 4ರಷ್ಟು ಹೆಚ್ಚಳ: ಮತ್ತೆ ದುಬಾರಿಯಾಗಲಿದೆ ಮದ್ಯ

Recommended Video

      Karnataka Budget 2018 : ಈ ಬಾರಿಯ ಬಜೆಟ್ ನಿಂದ ಮದ್ಯ ಇನ್ನಷ್ಟು ದುಬಾರಿ

      ಬೆಂಗಳೂರು, ಜುಲೈ 5: ರಾಜ್ಯ ಸರ್ಕಾರದ ನೂತನ ಬಜೆಟ್ ಪಾನಪ್ರಿಯರ ಕಿಕ್ಕಿಳಿಸಿದೆ. ಕೆಲವು ತಿಂಗಳ ಹಿಂದಷ್ಟೇ ದುಬಾರಿಯಾಗಿದ್ದ ಮದ್ಯ ಬೆಲೆಯಿಂದ ಸಂಕಟಕ್ಕೆ ಸಿಲುಕಿದ್ದ ಮದ್ಯಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

      ಆದಾಯದಲ್ಲಿ ಹೆಚ್ಚಳ ಮಾಡುವ ಸಲುವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮದ್ಯದ ಮೇಲಿನ ತೆರಿಗೆಯನ್ನು ಶೇ 4ರಷ್ಟು ಹೆಚ್ಚಿಸಿದ್ದಾರೆ. ಇದರಿಂದ ಮದ್ಯದ ಬೆಲೆಯಲ್ಲಿ ಮತ್ತೆ ಏರಿಕೆಯಾಗಲಿದೆ.

      ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ 2018-19ನೇ ಸಾಲಿನ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಅಬಕಾರಿ ತೆರಿಗೆಯನ್ನು ಶೇ 8ರಷ್ಟು ಹೆಚ್ಚಿಸಿದ್ದರು.

      karnataka budget 2018 tax on excise hiked for 4%

      ಆಗ ಸಿದ್ದರಾಮಯ್ಯ ಅವರು ಮೊದಲ ಸ್ಲ್ಯಾಬ್‌ನ ಮದ್ಯಗಳ ಬೆಲೆಯನ್ನು ಹೆಚ್ಚಳ ಮಾಡಿರಲಿಲ್ಲ. ಎರಡರಿಂದ 18ನೇ ಘೋಷಿತ ಬೆಲೆಯ ಸ್ಲ್ಯಾಬ್‌ವರೆಗಿನ ಮದ್ಯದ ಬೆಲೆಯನ್ನು ಶೇ 8ರಷ್ಟು ಹೆಚ್ಚಿಸಿದ್ದರು.

      ಈಗ ಶೇ 4ರಷ್ಟು ತೆರಿಗೆ ಹೆಚ್ಚಳ ಮಾಡಿರುವುದರಿಂದ ಮದ್ಯ ಬೆಲೆ ತುಟ್ಟಿಯಾಗಲಿದೆ. ದೇಶಿ ಹಾಗೂ ವಿದೇಶಿ ಮದ್ಯಗಳ ಆಧಾರದಲ್ಲಿ ಮದ್ಯ ಬೆಲೆ ಹೆಚ್ಚಳವಾಗಲಿದೆ.0-449 ದರದ ಪ್ರತಿ ರಟ್ಟಿನ ಪೆಟ್ಟಿಗೆಗೆ ಪ್ರಸ್ತುತ ಹೆಚ್ಚುವರಿ ಅಬಕಾರಿ ಸುಂಕ ಪ್ರತಿ ಬಲ್ಕ್ ಲೀಟರ್‌ಗೆ 138 ರೂ. ಇದ್ದು, ಹೊಸ ತೆರಿಗೆ ಅನ್ವಯ 144 ರೂ ಆಗಲಿದೆ.

      ಅದೇ ರೀತಿ, 189 ದರವು 197ಕ್ಕೆ, 249ರ ತೆರಿಗೆಯು 259ಕ್ಕೆ, 321ರಿಂದ 334ಕ್ಕೆ ಏರಿಕೆಯಾಗಿವೆ.

      15001 ಮತ್ತು ಅದಕ್ಕಿಂತ ಹೆಚ್ಚು ಮೌಲ್ಯದ ಮದ್ಯಗಳಿಗೆ ಈಗ ವಿಧಿಸಲಾಗುತ್ತಿದ್ದ 3240 ಅಬಕಾರಿ ಸುಂಕವು 3370ಕ್ಕೆ ಹೆಚ್ಚಳವಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+