ಬಜೆಟ್ : ತೇಲುವ ಉಪಹಾರಗೃಹ ಸೇರಿ ಪ್ರವಾಸಿಗರಿಗೆ ಸಿಕ್ಕಿದ್ದೇನು?

ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 13ನೇ ಬಾರಿಗೆ ರಾಜ್ಯದ ಆಯವ್ಯಯ ಮುಂಗಡ ಪತ್ರವನ್ನು ಶುಕ್ರವಾರದಂದು ಮಂಡಿಸಿದರು.

ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ನಿಯಮಗಳನ್ನು ಸಡಿಲಿಸಿ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆಗಳನ್ನು ಘೋಷಿಸಿದರು.

Karnataka Budget 2018-19: What is the share of Tourism Department

ಪ್ರವಾಸೋದ್ಯಮ ಇಲಾಖೆಗೆ ಸಿಕ್ಕಿದ್ದೇನು?:
* ಮೊಟ್ಟ ಮೊದಲ ಬಾರಿಗೆ ಚಲನಚಿತ್ರ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು.
* ಕಲಬುರಗಿಯಲ್ಲಿ ಉತ್ತರ ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ 'ಕಲಬುರಗಿ ಕಲಾವನ' ನಿರ್ಮಾಣ.
* ಪಾರಂಪರಿಕ ಪ್ರವಾಸಿ ತಾಣಗಳಾದ ಹಂಪಿ, ಬೇಲೂರು- ಹಳೇಬೀಡು, ಶ್ರವಣ ಬೆಳಗೊಳ, ನಂದಿಬೆಟ್ಟ, ಸನ್ನತಿ ಹಾಗೂ ಕಲಬುರಗಿ ಕೋಟೆಗಲ ಸಮಗ್ರ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ.
* ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಸೇರಿದ ಜಮೀನಿನಲ್ಲಿ 'ಮೈಸೂರು ಹಾಟ್' ಅಭಿವೃದ್ಧಿ.
* ವಿದೇಶಿ ಹಾಗೂ ದೇಶಿ ಪ್ರವಾಸಿಗರ ಅಂಕಿ ಅಂಶಗಳ ಸಮೀಕ್ಷೆ ನಡೆಸಿ, ಅದರ ಆಧಾರದ ಮೇಲೆ ಪ್ರವಾಸಿ ತಾಣಗಳ ಅಭಿವೃದ್ಧಿ.
* ಕರಾವಳಿ ಪ್ರದೇಶಗಳಲ್ಲಿನ ಆಯ್ದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಹೌಸ್ ಬೋಟ್ ಗಳು ಹಾಗೂ ತೇಲುವ ಉಪಾಹಾರ ಗೃಹಗಳ ಸೌಲಭ್ಯ.
* ಪ್ರಾಚ್ಯವಸ್ತು ಸಂಗ್ರಹಾಲಯಗಳು ಹಾಗೂ ಪರಂಪರಾ ಇಲಾಖೆಯನ್ನು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ಸೇರ್ಪಡೆಗೆ ಕ್ರಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+