ಕರ್ನಾಟಕ ಬಜೆಟ್: ನಿಮ್ಮ ಜಿಲ್ಲೆಗೆ ಯಾವ ಭಾಗ್ಯ ಸಿಕ್ತು?

Subscribe to Oneindia Kannada

ಬೆಂಗಳೂರು, ಮಾರ್ಚ್, 19: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಣಕಾಸು ಪತ್ರವನ್ನು ಮಂಡನೆ ಮಾಡಿದ್ದಾರೆ. ರಾಜ್ಯದ 30 ಜಿಲ್ಲೆಗಳ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಒಂದೆಲ್ಲಾ ಒಂದು ಕೊಡುಗೆ ನೀಡಿದ್ದಾರೆ.

ರಾಜಧಾನಿ ಬೆಂಗಳೂರಿನಿಂದ ಹಿಡಿದು ಯಾದಗಿರಿವರೆಗೆ ಸಿದ್ದರಾಮಯ್ಯ ಬಜೆಟ್ ನಲ್ಲಿ ವಿವಿಧ ಯೋಜನೆಗಳನ್ನು ನೀಡಿದ್ದಾರೆ. ಕೆಲ ಜಿಲ್ಲೆಗಳಿಗೆ ಬಂಪರ್ ಸಿಕ್ಕಿದರೆ ಇನ್ನು ಕೆಲವಕ್ಕೆ ಏನೂ ಇಲ್ಲ ಎಂಬ ಸ್ಥಿತಿ ಇದೆ. ಯಾವ ಯಾವ ಜಿಲ್ಲೆಗಳಿಗೆ ಸಿದ್ದರಾಮಯ್ಯ ಯಾವ ಯಾವ ಭಾಗ್ಯ ನೀಡಿದ್ದಾರೆ ಎಂಬುದನ್ನು ನೋಡಿಕೊಂಡು ಬರೋಣ...

karnataka

1. ಬೆಂಗಳೂರು ನಗರ : 5,018 ಕೋಟಿ ರು. ವೆಚ್ಚದಲ್ಲಿ ಬಿಬಿಎಂಪಿ ವ್ಯಾಪ್ತಿಯ ಹೊಸ 110 ಹಳ್ಳಿಗಳಿಗೆ ನೀರು ಮತ್ತು ಒಳಚರಂಡಿ, ಎತ್ತರಿಸಿದ ರಸ್ತೆ, ಕಾರಿಡಾರ್. ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.

2 ಮೈಸೂರು: ಹೂಣಸೂರು ಬಳಿ ಬಿದಿರುವನ, 60ಕೋಟಿ ವೆಚ್ಚದ ಜಿಲ್ಲಾಸ್ಪತ್ರೆ, ಟಿ ನರಸೀಪುರದಲ್ಲಿ ಆಯುಷ್ ಆಸ್ಪತ್ರೆ, ಮಹಿಳಾ ಉದ್ಯಮಶೀಲ ಪಾರ್ಕ್, ಹಾರಂಗಿ ಬಲದಂಡೆ, ಕಬಿನಿ ನಾಲೆ ಅಭಿವೃದ್ಧಿ, ಪಿರಿಯಾಪಟ್ಟಣ ಮುತ್ತಿನಮುಳಿ ಸೋಗೆ ಏತ ನೀರಾವರಿ.

3. ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುದಲ್ಲಿ ಟೆಕ್ಸಾಸ್ ಸಹಯೋಗದಲ್ಲಿ ಟೆಕ್ನಾಲಜಿ ಇನ್ಯೂಬೆಷನ್ ಸೆಂಟರ್, ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ[ ಯಾವುದು ಏರಿಕೆ? ಯಾವುದು ಇಳಿಕೆ?]

4. ರಾಮನಗರ: ಕೆಂಪಾಪುರದ ಕೆಂಪೆಗೌಡ ಸ್ಮಾರಕ ಅಭಿವೃದ್ಧಿಗೆ 5 ಕೋಟಿ, ರಾಜೀವ್ ಗಾಂಧಿ ವೈದ್ಯಕೀಯ ಕಾಲೇಜು ಕ್ಯಾಂಪಸ್, ರಾಮನಗರ-ಚೆನ್ನಪಟ್ಟಣಕ್ಕೆ ಹೊಸ ನೀರು ಸರಬರಾಜು ಯೋಜನೆ

5.ಮಂಡ್ಯ: ಮಂಡ್ಯದ ಮಾರೇಹಳ್ಳಿ ಕೆರೆ ಕಾಲುವೆ, ಶಿಂಷಾಬಲದಂಡೆ ನಾಲೆಗಳ ಆಧುನೀಕರಣ, ಮಳವಳ್ಳಿಯಲ್ಲಿ ತುಂತುರು ನೀರಾವರಿ ಯೋಜನೆ

6. ಚಾಮರಾಜನಗರ: ಚಾಮರಾಜನಗರ ಪಟ್ಟಣ ಸಮಗ್ರ ಅಭಿವೃದ್ಧಿಗೆ 5 ಕೋಟಿ. ಕೊಳ್ಳೆಗಾಲದಿಂದ ಕೇರಳ ಗಡಿವರೆಗೆ ರಸ್ತೆ ಅಭಿವೃದ್ಧಿ 585 ಕೋಟಿ

7. ಕೊಡಗು: ಮೆಡಿಕಲ್ ಕಾಲೇಜು, ರಸ್ತೆ ಅಭಿವೃದ್ಧಿಗೆ 50 ಕೋಟಿ[ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಸಿದ್ದು ಭರ್ಜರಿ ಬಳುವಳಿ]

8. ಹಾಸನ: ಅರಕಲಗೂಡಿನಲ್ಲಿ ಪಶು ಆಹಾರ ಘಟಕ ಸ್ಥಾಪನೆ, ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಹಳಿ ಅಭಿವೃದ್ಧಿಗೆ ನೆರವು. ಹೇಮಾವತಿ ಬಲದಂಡೆ ನಾಲೆ ಅಭಿವೃದ್ಧಿ

9. ದಕ್ಷಿಣ ಕನ್ನಡ: ಬಂಟ್ವಾಳದಲ್ಲಿ ಕಾರಾಗೃಹ, ಮಂಗಳೂರಿನಲ್ಲಿ 2.5 ಕೋಟಿ ವೆಚ್ಚದಲ್ಲಿ ಕೊಂಕಣಿ ಸಂಸ್ಕೃತಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ

10. ಉಡುಪಿ: ಹೆಂಗಾರಕಟ್ಟೆ-ಕೋಡಿ ಬೆಂಗ್ರೆಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ, ಅರಣ್ಯ ಪ್ರದೇಶದ ಜನರಿಗೆ ಎಲ್ ಪಿಜಿ ಭಾಗ್ಯ

11. ಉತ್ತರ ಕನ್ನಡ: ಮೆಡಿಕಲ್ ಕಾಲೇಜು, ಕಾರವಾರದಲ್ಲಿ ಹೊಸ ಕಾರಾಗೃಹ, ತದಡಿಯಲ್ಲಿ ಮೀನಿಗಾರಿಕಾ ಬಂದರು, ದಾಂಡೇಲಿಯಲ್ಲಿ ಆಯುಷ್ ಆಸ್ಪತ್ರೆ, ಕುಮಟಾದಲ್ಲಿ ಗೋಡಂಬಿ ತಂತ್ರಜ್ಞಾನ ತರಬೇತಿ ಕೇಂದ್ರ, 125 ಕೋಟಿ ವೆಚ್ಚದಲ್ಲಿ ಕಡಲ ಕೊರತ ತಡೆ ಗೋಡೆ. ಪ್ರವಾಸಿ ತಾಣಗಳ ಅಭಿವೃದ್ಧಿ

12. ಕೋಲಾರ: 1280 ಕೋಟಿ ರು. ವೆಚ್ಚದಲ್ಲಿ ಕೆ-ಸಿ ವ್ಯಾಲಿ ಯೋಜನೆ ಮುಖಾಂತರ ಕೋಲಾರದ ಕೆರೆಗಳಿಗೆ ನೀರು. ಶ್ರೀನಿವಾಸಪುರಕ್ಕೆ ಹೊಸ ಕುಡಿವ ನೀರಿನ ಯೋಜನೆ

13. ಚಿಕ್ಕಬಳ್ಳಾಪುರ: 50 ಹಾಸಿಗೆಯ ಆಯುಷ್ ಆಸ್ಪತ್ರೆ, ಚಿಕ್ಕಬಳ್ಳಾಪುರ ಪಟ್ಟಣ ಅಭಿವೃದ್ಧಿಗೆ 50 ಕೋಟಿ,

14. ದಾವಣಗೆರೆ: ಐಟಿ ಪಾರ್ಕ್ ಸ್ಥಾಪನೆ, 50 ಹಾಸಿಗೆಯ ಆಯುಷ್ ಆಸ್ಪತ್ರೆ, ಸವಳಂಗ-ಹೊನ್ನಾಳಿ 48 ಕಿಮೀ ರಸ್ತೆ ಅಭಿವೃದ್ಧಿಗೆ 130 ಕೋಟಿ.

15. ಶಿವಮೊಗ್ಗ: ನಿಗೂಢ ರೋಗಗಳ ಸಂಶೋಧನಾ ಘಟಕ, ವಿಮಾಣ ನಿಲ್ದಾಣ ಅಭಿವೃದ್ಧಿ,

16. ತುಮಕೂರು: ವಸಂತಾನರಸಾಪುರದಲ್ಲಿ ಜಪಾನ್ ಇಂಡಸ್ಟ್ರಿಯಲ್ ಟೌನ್ ಶಿಪ್, ಕೊರಟಗೆರೆಯಲ್ಲಿ ಅಗ್ನಿ ಶಾಮಕ ಠಾಣೆ, ಪಾವಗಡದಲ್ಲಿ ಬೃಹತ್ ಸೋಲಾರ್ ಪಾರ್ಕ್

17. ವಿಜಯಪುರ: ಹಿಪ್ಪರಿಗೆ ಅಭಿವೃದ್ಧಿಗೆ 3 ಕೋಟಿ, ಐಟಿ ಪಾರ್ಕ್,ಇಂಡಿ ಏತ ನೀರಾವರಿ ಯೋಜನೆ, ನೀರಾವರಿ ಅಭಿವೃದ್ಧಿ

18. ಬಾಗಲಕೋಟೆ: ಐಟಿ ಪಾರ್ಕ್, ಐಹೊಳೆ, ಪಟ್ಟದಕಲ್ಲು ಕೆರೆಗಳನ್ನು ಪ್ರವಾಸಿತಾಣಗಳನ್ನಾಸುವುದು, ಕೂಡಲ ಸಂಗಮ-ಅಡವಿಹಾಳ ಸೇತುವೆ ನಿರ್ಮಾಣ

19. ಬೆಳಗಾವಿ: ಐಟಿ ಪಾರ್ಕ್,ವಿಟಿಯುನಲ್ಲಿ ಶ್ರೇಷ್ಠತಾ ಕೇಂದ್ರ, 3 ಕೋಟಿ ವೆಚ್ಚದಲ್ಲಿ ಬೆಳಗಾವಿ ಕೋಟೆ ಸಂರಕ್ಷಣೆ ಮತ್ತು ಅಭಿವೃದ್ಧಿ

20. ಧಾರವಾಡ: ಕರ್ನಾಟಕ ವಿವಿಯಲ್ಲಿ ಎಂಎಂ ಕಲಬುರ್ಗಿ ಸಂಶೋಧನಾ ಕೇಂದ್ರ, 40 ಕೋಟಿ ವೆಚ್ಚದ ಮಾನಸಿಕ ಆರೋಗ್ಯ ಕೇಂದ್ರ, ತ್ಯಾಜ್ಯ ನೀರು ಸಂಸ್ಕರಣಾ ಘಟಕ. ಮಹಿಳಾ ಪಾರ್ಕ್

21. ಬಳ್ಳಾರಿ: ಜಾನುವಾರು ರೋಗ ಪತ್ತೆ ಕೇಂದ್ರ, ಕನ್ನಡ ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ, ಕೂಡ್ಲಗಿ-ತೋರಣಗಲ್ಲು ರಸ್ತೆ ಅಭಿವೃದ್ಧಿ

22. ಯಾದಗಿರಿ: ಶಿರವಾಳ ಚಾಲುಕ್ಯರ ಸ್ಮಾರಕ ಅಭಿವೃದ್ಧಿಗೆ 3 ಕೋಟಿ

23. ಕಲಬುರಗಿ: 1320 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ, ಆಯುಷ್ ಆಸ್ಪತ್ರೆ, ಐಟಿ ಪಾರ್ಕ್, ಕಾರಂಜಿ ಯೋಜನೆ ಪೂರ್ಣ.

24. ಗದಗ: 962 ಕೋಟಿ ವೆಚ್ಚದಲ್ಲಿ ಮಲಪ್ರಭಾ ನಾಲಾ ಅಭಿವೃದ್ಧಿ

25. ಹಾವೇರಿ: ಜಾನಪದ ವಿವಿಯಲ್ಲಿ ಅಧ್ಯಯನ ಕೇಂದ್ರ, ಹಾವೇರಿ ಪಟ್ಟಣ ಅಭಿವೃದ್ಧಿಗೆ 50 ಕೋಟಿ

26. ಬೀದರ್: ಐಟಿ ಪಾರ್ಕ್, ಮಹಮದ್ ಗವಾನ್ ಗ್ರಂಥಾಲಯದಲ್ಲಿ ಸಂಶೋಧನಾ ಕೇಂದ್ರ

27, ಕೊಪ್ಪಳ: 155 ಕೋಟಿ ವೆಚ್ಚದಲ್ಲಿ ಕುಷ್ಟಗಿ-ಸಿಂಧನೂರು ರಸ್ತೆ ಅಭಿವೃದ್ಧಿ

28. ರಾಯಚೂರು: 35 ಕೋಟಿ ವೆಚ್ಚದಲ್ಲಿ ರಾಜೀವ್‌ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮೇಲ್ದರ್ಜೆಗೆ, 48 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 167 ಚತುಷ್ಪಥ ನಿರ್ಮಾಣ, ಗೃಹರಕ್ಷಕರ ತರಬೇತಿ ಕೇಂದ್ರ ನಿರ್ಮಾಣ

29. ಚಿತ್ರದುರ್ಗ: ಹಿರಿಯೂರು-ಚಳ್ಳಕೆರೆ ನೀರು ಸರಬರಾಜು ಯೋಜನೆ.

30. ಚಿಕ್ಕಮಗಳೂರು: ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಹಳಿಗೆ ಹೆಚ್ಚುವರಿ ಅನುದಾನ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister and Finance Minister Siddaramaiah has tabled Karnataka Budget 2016-17 on Friday, March 18, 2016. Here is full list of District Wise Allocation.
Please Wait while comments are loading...