ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಟ್ಟಿ ಅಖೈರು

By Srinath
|
Google Oneindia Kannada News

ಬೆಂಗಳೂರು, ಫೆ.21: ಪ್ರಮುಖ ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಮುಂದಿನ ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಿದೆ. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಎದುರಾಗಿದ್ದ ಕಗ್ಗಂಟುಗಳನ್ನೆಲ್ಲಾ ಬಿಡಿಸಿಕೊಂಡು ಸುಸೂತ್ರವಾಗಿ ಪಟ್ಟಿ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದೆ. ಪಟ್ಟಿ ಶೀಘ್ರವೇ ಕೇಂದ್ರ ಕಾರ್ಯಕಾರಣಿಗೆ ತಲುಪಲಿದ್ದು, ಅಲ್ಲಿಂದ ಅಧಿಕೃತ ಮುದ್ರೆಯೊಂದಿಗೆ ಹೊರಬೀಳಲಿದೆ.

ನಿನ್ನೆ ತಡರಾತ್ರಿ ಬೆಂಗಳೂರಿನ ಜಯನಗರದಲ್ಲಿ ಆರ್ ಅಶೋಕ್ ಅವರ ನಿವಾಸದಲ್ಲಿ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಸಭೆ ಸೇರಿ 'ಲೋಕಸಭಾ ಚುನಾವಣೆಗೆ ನಾವು ಸಿದ್ಧವಾಗಿದ್ದೇವೆ' ಎಂದು ಘೋಷಿಸಿದ್ದಾರೆ. 'ರಾಜಕೀಯ ಕಾರಣಗಳಿಗಾಗಿ ಐದಾರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.

ಅಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ಕ್ಷೇತ್ರಗಳಲ್ಲಿ ಯಾರನ್ನು ನಿಲ್ಲಿಸುತ್ತಾರೆ ಎಂಬುದನ್ನು ನೋಡಿಕೊಂಡು ಖಡಕ್ ಸ್ಪರ್ಧೆಗೆ ತಮ್ಮ ಪಕ್ಷದಿಂದ ಸಮರ್ಥ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ' ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಹೇಳಿದ್ದಾರೆ. ಜತೆಗೆ, ಶ್ರೀರಾಮುಲು ಪಕ್ಷಕ್ಕೆ ಮರಳುವ ವಿಚಾರವೂ ಇಲ್ಲಿ ಸುಪ್ತವಾಗಿ ಬಿಜೆಪಿಗೆ ಕಾಡುತ್ತಿದೆ ಎನ್ನಲಾಗಿದೆ.

ಅಂದಹಾಗೆ ಸ್ವತಃ ಆರ್ ಅಶೋಕ್ ಅವರ ಹೆಸರೂ ಪಟ್ಟಿಯಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯವಾಗಿ ಬೆಂಗಳೂರು ಉತ್ತರ ಕ್ಷೇತ್ರವೇ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ನಾಲ್ಕೈದು ಖಡಕ್ ಅಭ್ಯರ್ಥಿಗಳು ಕ್ಷೇತ್ರವನ್ನು ತಮಗೇ ಬಿಟ್ಟುಕೊಡಬೇಕೆಂದು ವರಿಷ್ಠರಿಗೆ ದುಂಬಾಲು ಬಿದ್ದಿದ್ದರು. ಆದರೆ ಅದೆಲ್ಲಾ ಈಗ ಸುಸೂತ್ರವಾಗಿ ಪರಿಹಾರ ಕಂಡಿದ್ದು, ಆರ್ ಅಶೋಕ್ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಹಾಗಾದರೆ, ಇಲ್ಲಿ ಟವಲ್ ಹಾಕಿದ್ದ ಸದಾನಂದ ಗೌಡರು, ಶೋಭಾ ಕರಂದ್ಲಾಜೆ ಅವರೆಲ್ಲಾ ಎಲ್ಲಿಗೆ ಹೋಗುತ್ತಾರೆ ಎಂಬ ಪ್ರಶ್ನೆ ಹಿರಿಯ ನಾಯಕರೊಬ್ಬರ ಮುಂದಿಟ್ಟಾಗ ಒಬ್ಬರು ಮೈಸೂರು-ಕೊಡಗು ಮತ್ತೊಬ್ಬರು ಉಡುಪಿ-ಚಿಕ್ಕಮಗಳೂರು ಎಂದು ಗೌಪ್ಯವಾಗಿ ಹೇಳಿದ್ದಾರೆ. ಯಾರೆಲ್ಲಾ ಸ್ಪರ್ಧಿಸಲಿದ್ದಾರೆ ವಿವರ ಇಲ್ಲಿದೆ (ಗಮನಿಸಿ- ಪಟ್ಟಿ ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ):

 ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಯಾರು?

ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಯಾರು?

1. ಶಿವಮೊಗ್ಗ - ಬಿಎಸ್ ಯಡಿಯೂರಪ್ಪ

ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಯಾರು?

ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಯಾರು?

ಬೆಂಗಳೂರು ದಕ್ಷಿಣ - ಎಚ್. ಅನಂತಕುಮಾರ್

ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯಾರು?

ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯಾರು?

ಮೈಸೂರು-ಕೊಡಗು ಡಿವಿ ಸದಾನಂದಗೌಡ

ಬೆಂ. ಉತ್ತರ ಬಿಜೆಪಿ ಅಭ್ಯರ್ಥಿ ಯಾರು?

ಬೆಂ. ಉತ್ತರ ಬಿಜೆಪಿ ಅಭ್ಯರ್ಥಿ ಯಾರು?

ಬೆಂಗಳೂರು ಉತ್ತರ ಬಿಜೆಪಿ ಸಂಭವನೀಯ ಅಭ್ಯರ್ಥಿ ಆರ್ ಅಶೋಕ್

ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಯಾರು?

ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಯಾರು?

ಉಡುಪಿ-ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ

ಧಾರವಾಡ ಬಿಜೆಪಿ ಅಭ್ಯರ್ಥಿ ಯಾರು?

ಧಾರವಾಡ ಬಿಜೆಪಿ ಅಭ್ಯರ್ಥಿ ಯಾರು?

ಧಾರವಾಡ - ಪ್ರಹ್ಲಾದ್ ಜೋಶಿ

ಬೆಂಗಳೂರು ಸೆಂಟ್ರಲ್ ಬಿಜೆಪಿ ಅಭ್ಯರ್ಥಿ ಯಾರು?

ಬೆಂಗಳೂರು ಸೆಂಟ್ರಲ್ ಬಿಜೆಪಿ ಅಭ್ಯರ್ಥಿ ಯಾರು?

ಬೆಂಗಳೂರು ಸೆಂಟ್ರಲ್ - ಪಿಸಿ ಮೋಹನ್

ಬೆಂಗಳೂರು ಗ್ರಾ. ಬಿಜೆಪಿ ಅಭ್ಯರ್ಥಿ ಯಾರು?

ಬೆಂಗಳೂರು ಗ್ರಾ. ಬಿಜೆಪಿ ಅಭ್ಯರ್ಥಿ ಯಾರು?

ಬೆಂಗಳೂರು ಗ್ರಾ - ವಿ. ಮುನಿರಾಜು

ಹಾಸನ ಬಿಜೆಪಿ ಅಭ್ಯರ್ಥಿ ಯಾರು?

ಹಾಸನ ಬಿಜೆಪಿ ಅಭ್ಯರ್ಥಿ ಯಾರು?

ಹಾಸನ - ಬಿಬಿ ಶಿವಪ್ಪ

ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಯಾರು?

ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಯಾರು?

ಚಿತ್ರದುರ್ಗ - ಜನಾರ್ದನ ಸ್ವಾಮಿ

ದಾವಣಗೆರೆ ಬಿಜೆಪಿ ಅಭ್ಯರ್ಥಿ ಯಾರು?

ದಾವಣಗೆರೆ ಬಿಜೆಪಿ ಅಭ್ಯರ್ಥಿ ಯಾರು?

ದಾವಣಗೆರೆ - ಜಿಎಂ ಸಿದ್ದೇಶ್ವರ

ಹಾವೇರಿ ಬಿಜೆಪಿ ಅಭ್ಯರ್ಥಿ ಯಾರು?

ಹಾವೇರಿ ಬಿಜೆಪಿ ಅಭ್ಯರ್ಥಿ ಯಾರು?

ಹಾವೇರಿ - ಶಿವಕುಮಾರ ಉದಾಸಿ

ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಯಾರು?

ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಯಾರು?

ದಕ್ಷಿಣ ಕನ್ನಡ - ನಳೀನ್ ಕುಮಾರ್ ಕಟೀಲು

ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಯಾರು?

ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಯಾರು?

ಉತ್ತರ ಕನ್ನಡ - ಅನಂತಕುಮಾರ ಹೆಗಡೆ

ಬೆಳಗಾವಿ ಬಿಜೆಪಿ ಅಭ್ಯರ್ಥಿ ಯಾರು?

ಬೆಳಗಾವಿ ಬಿಜೆಪಿ ಅಭ್ಯರ್ಥಿ ಯಾರು?

ಬೆಳಗಾವಿ - ಸುರೇಶ್ ಅಂಗಡಿ
(ಚಿತ್ರ: http://ka22.in/)

ಬಿಜಾಪುರ ಬಿಜೆಪಿ ಅಭ್ಯರ್ಥಿ ಯಾರು?

ಬಿಜಾಪುರ ಬಿಜೆಪಿ ಅಭ್ಯರ್ಥಿ ಯಾರು?

ಬಿಜಾಪುರ - ರಮೇಶ್ ಜಿಗಜಿಣಗಿ

ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಯಾರು?

ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಯಾರು?

ಬಾಗಲಕೋಟೆ - ಪಿಸಿ ಗದ್ದಿಗೌಡರ್

ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಯಾರು?

ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಯಾರು?

ಚಿಕ್ಕೋಡಿ - ರಮೇಶ್ ವಿ. ಕತ್ತಿ

ಗುಲ್ಬರ್ಗಾ ಬಿಜೆಪಿ ಅಭ್ಯರ್ಥಿ ಯಾರು?

ಗುಲ್ಬರ್ಗಾ ಬಿಜೆಪಿ ಅಭ್ಯರ್ಥಿ ಯಾರು?

ಗುಲ್ಬರ್ಗಾ - ರೇವುನಾಯಕ ಬೆಳಮಗಿ

ಕೊಪ್ಪಳ ಬಿಜೆಪಿ ಅಭ್ಯರ್ಥಿ ಯಾರು?

ಕೊಪ್ಪಳ ಬಿಜೆಪಿ ಅಭ್ಯರ್ಥಿ ಯಾರು?

ಕೊಪ್ಪಳ - ಕರಡಿ ಸಂಗಣ್ಣ

ಇನ್ನೂ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳದ 8 ಕ್ಷೇತ್ರಗಳು:

ಇನ್ನೂ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳದ 8 ಕ್ಷೇತ್ರಗಳು:

1. ಚಿಕ್ಕಬಳ್ಳಾಪುರ (ಬಿಎನ್ ಬಚ್ಚೇಗೌಡ ), 2. ಚಾಮರಾಜನಗರ,
3. ರಾಯಚೂರು, 4. ಬಳ್ಳಾರಿ, 5. ಮಂಡ್ಯ,
6. ತುಮಕೂರು, 7. ಬೀದರ್, ಮತ್ತು
8. ಕೋಲಾರ (ಬಂಗಾರಪೇಟೆ ನಾರಾಯಣ ಸ್ವಾಮಿ).

English summary
Lok Sabha elections 2014 - Karnataka BJP is almost ready with probable candidates for 19 constituencies and R Ashok is to contest from Bangalore North say party sources. But for remaining 9 constituencies candidates list is not finalised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X