ಸಿಎಂ ಸಿದ್ದರಾಮಯ್ಯ ವಿರುದ್ಧ ‘ಬೀಜ’ ಅಸ್ತ್ರ ಪ್ರಯೋಗ!
ಕರ್ನಾಟಕದಲ್ಲಿ ಮಳೆ ಇಲ್ಲದೆ ಕಳೆದ ವರ್ಷ ರೈತರು ಪರದಾಡಿ ಹೋಗಿದ್ದರು. ಹೀಗೆ ಬರದಿಂದ ನರಳಿದ್ದ ರೈತರಿಗೆ ಕೇಂದ್ರ ಸರ್ಕಾರ ಬರ ಪರಿಹಾರ ಕೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಸಮಸ್ಯೆಗಳ ನಡುವೆ ಇದೀಗ ಉತ್ತಮವಾಗಿ ಮಳೆ ಬರುತ್ತಿರುವ ಈ ಸಮಯದಲ್ಲೇ ರಾಜ್ಯದಲ್ಲಿ ಕೃಷಿಕರಿಗೆ ದೊಡ್ಡ ಆಘಾತ ಎದುರಾಗಿದೆ. ಬಿತ್ತನೆ ಬೀಜ ಬೆಲೆ ಏರಿಕೆ ಮಾಡಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಈಗ ರೊಚ್ಚಿಗೆದ್ದಿವೆ.
ಕಾಂಗ್ರೆಸ್ & ಬಿಜೆಪಿ ನಡುವೆ ತಿಕ್ಕಾಟಕ್ಕೆ ಈಗ 'ಬಿತ್ತನೆ ಬೀಜ' ಕೂಡ ಎಂಟ್ರಿಯಾಗಿದೆ. ತಿಕ್ಕಾಟಕ್ಕೆ ಕಾರಣ ಆಗಿರುವುದು ಬಿತ್ತನೆ ಬೀಜದ ಬೆಲೆ ಏರಿಕೆ. ಅಷ್ಟಕ್ಕೂ ಕಳೆದ ವರ್ಷ ಬರಗಾಲದ ಕಾರಣ ನರಳಿದ್ದ ರಾಜ್ಯದ ಕೃಷಿಕರಿಗೆ ಈ ಬಾರಿ ಬಿತ್ತನೆ ಬೀಜದ ಭಾರಿ ಏರಿಕೆ ಕೂಡ ಆಘಾತ ನೀಡಿದ್ದು, ವಿರೋಧ ಪಕ್ಷಗಳ ನಾಯಕರು ರೊಚ್ಚಿಗೆದ್ದಿದ್ದಾರೆ. ಈ ಕುರಿತು ಇದೀಗ, ಬಿಜೆಪಿ ನಾಯಕ ಆರ್. ಅಶೋಕ್ ಅವರು ಟ್ವೀಟ್ ಮಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ 'ಬೀಜ' ಅಸ್ತ್ರ ಪ್ರಯೋಗಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೇ...
ಈ ಬಗ್ಗೆ ಟ್ವೀಟ್ ಮಾಡಿರುವ ಆರ್. ಅಶೋಕ್ ಅವರು, 'ಕಳೆದ ವರ್ಷ ಬರಗಾಲದಿಂದ ಮಳೆ ಬೆಳೆ ಇಲ್ಲದೆ, ಕೈಯಲ್ಲಿ ಕಾಸಿಲ್ಲದೆ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಬಿತ್ತನೆ ಬೀಜದ ದರವನ್ನು 60% ಹೆಚ್ಚಿಸಿದೆ ಈ ರೈತ ವಿರೋಧಿ @INCKarnataka ಸರ್ಕಾರ. ಸಿಎಂ @siddaramaiah ನವರೇ, ತಮಗೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ 3,454 ಕೋಟಿ ರೂಪಾಯಿ ಬರ ಪರಿಹಾರ ಕೂಡಲೇ ರೈತರ ಕೈಸೇರುವಂತೆ ಕ್ರಮ ಕೈಗೊಳ್ಳಿ.' ಎಂದು ಆಗ್ರಹಿಸಿದ್ದಾರೆ.
ಹಾಗೇ 'ಕೇಂದ್ರ ಸರ್ಕಾರದ 3,454 ಕೋಟಿ ರೂಪಾಯಿಗೆ ರಾಜ್ಯ ಸರ್ಕಾರದ ವತಿಯಿಂದ ಅಷ್ಟೇ ಮೊತ್ತ ಸೇರಿಸಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಮಾಡಲು, ಉಳುಮೆ ಮಾಡಲು ಪ್ರತಿ ಎಕರೆಗೆ 5,000 ರೂಪಾಯಿಯಂತೆ ರೈತರಿಗೆ ವಿಶೇಷ ಪ್ರೋತ್ಸಾಹ ಧನ ನೀಡಿ ಅನ್ನದಾತರ ಕಷ್ಟಕ್ಕೆ ಸ್ಪಂದಿಸಿ.' ಎಂದು ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಕಳೆದ ವರ್ಷ ಬರಗಾಲದಿಂದ ಮಳೆ ಬೆಳೆ ಇಲ್ಲದೆ, ಕೈಯಲ್ಲಿ ಕಾಸಿಲ್ಲದೆ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಬಿತ್ತನೆ ಬೀಜದ ದರವನ್ನು 60% ಹೆಚ್ಚಿಸಿದೆ ಈ ರೈತ ವಿರೋಧಿ @INCKarnataka ಸರ್ಕಾರ.
— R. Ashoka (ಮೋದಿ ಅವರ ಕುಟುಂಬ) (@RAshokaBJP) May 28, 2024
ಸಿಎಂ @siddaramaiah ನವರೇ, ತಮಗೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಪ್ರಧಾನಿ ಶ್ರೀ @narendramodi ಅವರ ನೇತೃತ್ವದ… pic.twitter.com/WXm4l7lQxP
ರೈತರಿಗೆ ನೆರವು ನೀಡಬೇಕು
ಒಟ್ನಲ್ಲಿ ರಾಜ್ಯ ಸರ್ಕಾರ ರೈತರಿಗೆ ಸಂಕಷ್ಟದ ಸಮಯದಲ್ಲಿ ಹೊರೆ ಹಾಕಬಾರದು. ಬಿತ್ತನೆ ಬೀಜ ಬೆಲೆ ಏರಿಕೆಗೆ ಕಡಿವಾಣ ಹಾಕಿ ಬೆಲೆ ಇಳಿಕೆ ಮಾಡಬೇಕು. ಇಲ್ಲವಾದರೆ ರಾಜ್ಯದ ರೈತರಿಗೆ ಮತ್ತಷ್ಟು ಸಮಸ್ಯೆ ಎದುರಾಗುವುದು ಗ್ಯಾರಂಟಿ. ಹೀಗಾಗಿ ರೈತರಿಗೆ ಸಂಕಷ್ಟದ ಸಮಯದಲ್ಲಿ ಸಹಾಯವನ್ನ ಮಾಡಲು ಸಿದ್ದರಾಮಯ್ಯ ಅವರ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ & ಜೆಡಿಎಸ್ ನಾಯಕರು ಒತ್ತಾಯ ಮಾಡುತ್ತಿದ್ದಾರೆ.












Click it and Unblock the Notifications