ಸ್ಟಾಲಿನ್‌ ಗುಲಾಮರಂತೆ ಇರುವ ಕಾಂಗ್ರೆಸ್‌ ನಾಯಕರು ಹೆದರಿ ಹೇಡಿಗಳಂತೆ ಇರುವುದಕ್ಕೆ ಕಾರಣಗಳು: ಬಿಜೆಪಿ ಹೇಳಿದ್ದೇನು?

ಬೆಂಗಳೂರು, ಸೆಪ್ಟೆಂಬರ್‌ 30: ಕಾವೇರಿಗಾಗಿ ರಾಜ್ಯಾದಂತ್ಯ ಹೋರಾಟದ ಕಿಚ್ಚು ಜೋರಾಗಿದ್ದು, ರಾಜ್ಯ ಸರ್ಕಾರದ ವಿರುದ್ದ ಶುಕ್ರವಾರ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ವಿರುದ್ದ ಹಲವು ಸಂಘಟನಾಕಾರರು ಕಿಡಿಕಾರಿದ್ದಾರೆ.

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆಗೆ ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಕಾಂಗ್ರೆಸ್‌ ನಾಯಕರ ವಿರುದ್ದ ಕಿಡಿಕಾರಿದೆ. ಸ್ಟಾಲಿನ್ ಗುಲಾಮರಂತೆ‌ ಇರುವ ಕಾಂಗ್ರೆಸ್‌
ನಾಯಕರು ಅವರ ಬಳಿ ಮಾತಾಡುವುದಕ್ಕೂ ಹೆದರಿ ಹೇಡಿಗಳಂತೆ ಇರುವುದಕ್ಕೆ ಕಾರಣಗಳನ್ನ ರಾಜ್ಯ ಬಿಜೆಪಿ ನೀಡಿದೆ.

Karnataka BJP Lashed Out At Congress Leaders Over The Cauvery Issue

ಸ್ಟಾಲಿನ್‌ ಪರ ಪ್ರಚಾರ ಮಾಡಿದ್ದ ಸಿದ್ದರಾಮಯ್ಯರವರಿಗೆ ಹೈಕಮಾಂಡ್ ತಮ್ಮ ಬುಡ ಅಲುಗಾಡಿಸಬಹುದೆಂಬ ಭಯ..! ತಮಿಳುನಾಡಿನಲ್ಲಿ ಡಿಎಂಕೆ ಪರ ಪ್ರಚಾರ ಮಾಡಿದ್ದ ಡಿ.ಕೆ. ಶಿವಕುಮಾರ್ ತಮ್ಮ ಸ್ವಾರ್ಥ ಮಹತ್ವಾಕಾಂಕ್ಷೆಗಾಗಿ ಹೈಕಮಾಂಡ್‌ಗೆ ನಿಯತ್ತು ತೋರಿಸಲೇಬೇಕಿದೆ..! ರಾಹುಲ್ ಗಾಂಧಿ ಸ್ನೇಹಿತ ಸ್ಟಾಲಿನ್‌ ಎದುರು ನಿಂತರೆ ಸಂಪುಟದಲ್ಲಿ ತಮ್ಮ ತಮ್ಮ ಕುರ್ಚಿಗಳು ಉಳಿಯವುದಿಲ್ಲವೆಂದು ನಮ್ಮ ಸಚಿವರುಗಳಿಗೆ ಭಯ..! ಎಂದು ಬಿಜೆಪಿ ಹೇಳಿದೆ.

I.N.D.I. ಮೈತ್ರಿಕೂಟದಲ್ಲಿ ಬಿರುಕು ಬಂದರೆ ತಮಿಳುನಾಡಿನಲ್ಲಿ ಎಂಪಿ ಸೀಟು ಸಿಗುವುದಿಲ್ಲವೆಂಬ ಆತಂಕ..! ಕರ್ನಾಟಕದ ಚುನಾವಣೆಗೆ ಕಾಂಗ್ರೆಸ್ ಸ್ಟಾಲಿನ್‌ ಸರ್ಕಾರದಿಂದ ದೊಡ್ಡ ಮಟ್ಟದ ಸಹಾಯಹಸ್ತ‌ ಪಡೆದಿರುವುದು ಹಾಗೂ ಸ್ಟಾಲಿನ್‌ರಿಗೆ ನೀರು ಬಿಡದಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಒಂದೇ ಒಂದು ಎಂಪಿ ಸ್ಥಾನ ಗೆಲ್ಲುವುದಿಲ್ಲವೆಂಬ ಗ್ಯಾರಂಟಿ. ಅಧಿಕಾರ ಸಿಕ್ಕಿದೆ ನಮ್ಮನ್ನು ಯಾವ ಕನ್ನಡಿಗರು, ಕರ್ನಾಟಕ ಇನ್ನೈದು ವರ್ಷ ಏನು ಮಾಡಿಕೊಳ್ಳಲು ಸಾಧ್ಯವಿಲ್ಲವೆಂಬ ಅಹಂ, ಭ್ರಮೆ..! ಎಂದು ಕಾಂಗ್ರೆಸ್‌ ವಿರುದ್ದ ಸ್ಟಾಲಿನ್ ಗುಲಾಮರು ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

Karnataka BJP Lashed Out At Congress Leaders Over The Cauvery Issue

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಉಪಕಾರ ಮಾಡಿದ ಕೇಂದ್ರ ಸರ್ಕಾರವನ್ನೇ ದೂಷಿಸುವ ಸಿದ್ದರಾಮಯ್ಯ ಅವರು ಮೇಕೆದಾಟು ಯೋಜನೆಗೆ ತಮ್ಮ ಆಪ್ತರಾದ ಸ್ಟಾಲಿನ್ ಜತೆ ಮಾತನಾಡಿ ಅವರಿಂದ ಅನುಮತಿ ಪಡೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ಅತಿಥಿ ಉಪನ್ಯಾಸಕರಿಗೆ ವೇತನವನ್ನೇ ನೀಡಿಲ್ಲ. ಕಳೆದು ಐದು ತಿಂಗಳಿನಿಂದ ವೇತನ ಸಿಗದೆ ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಿದರೂ ಸಿದ್ದರಾಮಯ್ಯ ಅವರ ಸರ್ಕಾರ ಸಂಬಳ ಬಿಡುಗಡೆ ಮಾಡದೆ ಸತಾಯಿಸುತ್ತಿದೆ.

ಇನ್ನು ಅತಿಥಿ ಉಪನ್ಯಾಸಕರದ್ದಷ್ಟೇ ಈ ಪರಿಸ್ಥಿತಿ ‌ಅಲ್ಲ. ಅಂಗನವಾಡಿ, ಸರ್ಕಾರಿ ಸಾರಿಗೆ ನೌಕರರು, ಸರ್ಕಾರಿ ಗುತ್ತಿಗೆ ನೌಕರರು ಸೇರಿದಂತೆ ಹಲವರು ಸಂಬಳವಿಲ್ಲದೆ ಜೀವನ ನಡೆಸುವುದಕ್ಕೂ ಸಾಧ್ಯವಿಲ್ಲದೆ ಬೀದಿಗೆ ಬಂದಿದ್ದಾರೆ.

ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡದೆ ಅದರ ಹೆಸರಲ್ಲಿ ರಾಜ್ಯದ ಬೊಕ್ಕಸವನ್ನು ಗುಡಿಸಿ ಗುಂಡಾಂತರ ಮಾಡಿ, ಜನರ ಬದುಕನ್ನು ದುಸ್ತರವಾಗಿಸಿದೆ ಈ ಅಸಮರ್ಥ ATMSarkara ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+