Priyanka Gandhi: ಕಳ್ಳದಾರಿಯಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ; ಈ ಬಾರಿ 150 ಗ್ಯಾರಂಟಿ: ಪ್ರಿಯಾಂಕಾ ಗಾಂಧಿ

ಕೊಪ್ಪಳ,ಮೇ 5: ಕಳ್ಳದಾರಿಯಿಂದ ಹಿಡಿದು ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದು. ಈ ಸಲ ಬಹುಮತದಿಂದ 150 ಸೀಟನ್ನು ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಈ ಕುರಿತು ಗುರುವಾರ ಮಾತನಾಡಿದ ಅವರು, ನೀವು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಖರ್ಚು ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸುತ್ತೀರಿ. ಆದರೆ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಗರಣದಂತೆ, ಯಾರೋ ಶಾಸಕರು ಹಣ ಲೂಟಿ ಮಾಡುವುದು ಮತ್ತು ಅಭ್ಯರ್ಥಿಗಳ ನೇಮಕಾತಿ ಸ್ಥಗಿತಗೊಳಿಸಿರುವುದು ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Karnataka BJP Government Is Corrupt In The Country Says Priyanka Gandhi

ಸರ್ಕಾರಿ ಹುದ್ದೆಗಳನ್ನು 40% ಮಾರಾಟಕ್ಕೆ ಇಡಲಾಗಿದೆ. ಇಲ್ಲಿರುವ ನಿಮ್ಮ ಕ್ಷೇತ್ರದ ಬಿಜೆಪಿ ಶಾಸಕನೇ ಇಂತಹ ಒಂದು ಹಗರಣದಲ್ಲಿ ಭಾಗಿಯಾಗಿದ್ದೇನೆ. ಕರ್ನಾಟಕದ ಮತ್ತೊಬ್ಬ ಬಿಜೆಪಿ ಶಾಸಕನ ಮನೆಯಲ್ಲಿ 8 ಕೋಟಿ ಲಂಚದೊಂದಿಗೆ ಸಿಕ್ಕಿಬಿದ್ದಿದ್ದಾನೆ. ದೇಶದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾ ಬಿಜೆಪಿ ಸರ್ಕಾರ ಎಂದು ಕಿಡಿಕಾರಿದರು.

ಭ್ರಷ್ಠಚಾರದಿಂದ ಲೂಟಿ ಮಾಡಿದ ಹಣ, ಅದೆಲ್ಲ ನಿಮ್ಮ ದುಡ್ಡು. ಗ್ಯಾಸ್‌, ಪೆಟ್ರೋಲ್‌, ಇನ್ನಿತರ ದಿನಬಳಕೆಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ರೈತರಿಗೂ ಇಂದು ರಸಗೊಬ್ಬರಕ್ಕೂ ಜಿಎಸ್‌ ಟಿ ಹಾಕ್ತ ಇದ್ದಾರೆ. ಇಂದು ಲೂಟಿ ಮಾಡಿದವರು ಆರಾಮವಾಗಿ ಇದ್ದಾರೆ, ಜನರ ಸಂಕಷ್ಟ ದಿನೇದೀನೆ ಹೆಚ್ಚಳವಾಗುತ್ತ ಇದೆ.

ದೇಶದಲ್ಲಿ ಇಂದು ಛತ್ತೀಸ್‌ ಗಡ, ಹಿಮಚಲ ಪ್ರದೇಶದಲ್ಲಿ ಮತ್ತು ರಾಜಸ್ಥಾನದಲ್ಲಿದೆ ಇಂದು ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದೆ. ಮತ್ತು ಅಲ್ಲಿ ನಮ್ಮ ಪಕ್ಷ ರೈತರ ಸಾಲಮನ್ನ ಮಾಡಿದ್ದಾರೆ. ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯಲಾಗುತ್ತದೆ. ಗುತ್ತಿಗೆದಾರರ ಸಂಘವೇ ಸರ್ಕಾರಕ್ಕೆ ಈ ಹೆಸರು ನೀಡಿದೆಯೇ ಹೊರತು ಬೇರೆ ಯಾರು ಅಲ್ಲ ಎಂದರು.

Karnataka BJP Government Is Corrupt In The Country Says Priyanka Gandhi

ಬೆಲೆಯೇರಿಕೆಯಿಂದಾಗಿ ಸಂಕಷ್ಷಕ್ಕೊಳಗಾದ ಜನತಗೆ ಸರ್ಕಾರ ಒಂದು ಉತ್ತಮ ಯೋಜನೆಯನ್ನ ತರಬೇಕಾಗಿತ್ತು ಆದರೆ ಈ ಸರ್ಕಾರ ವಿಫಲವಾಗಿದೆ. ಈ ಬಿಜೆಪಿ ಸರ್ಕಾರ 1.50 ಲಕ್ಷ ರೂ. ಲೂಟಿ ಹೊಡೆದಿದೆ ಇಷ್ಟೊಂದು ಹಣದಲ್ಲಿ 100 ಏಮ್ಸ್‌ ಆಸ್ಪತ್ರೆಗಳನ್ನು ಕಟ್ಟಬಹುದಿತ್ತು, 187 ಇಎಸೈ ಆಸ್ಪತ್ರೆಗಳನ್ನು, 30 ಸಾವಿರ ಸ್ಮಾರ್ಟ್‌ ಕ್ಲಾಸ್‌ ರೂಮನ್ನು ಹಾಗೂ 30 ಸಾವಿರ ಬಡಜನರಿಗೆ ಮನೆ ಕಟ್ಟಿಸಿಕೊಡಬಹುದಿತ್ತು.

ನಿಮ್ಮಗಳ ವಿಕಾಸಕ್ಕೆ ನಾವು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಸರ್ಕಾರಿ ನೌಕರಿಗಳನ್ನು ಭರ್ತಿ ಮಾಡುತ್ತೇವೆ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿ ಮನೆಗೂ ಗ್ಯಾರಂಟಿ ಕಾರ್ಡ್ ನೀಡಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಮನೆಯ ಯಜಮಾನಿಗೆ 2,000 ರೂ. ಕೊಡುತ್ತೇವೆ. ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಯನ್ನು ಮತ್ತೆ ಜಾರಿ ಮಾಡುತ್ತೇವೆ. ಮಹಿಳೆಯರಿಗೆ ಉಚಿತವಾಗಿ ಬಸ್ ಪಾಸ್ ನೀಡುತ್ತೇವೆ. ನಾವು ಕೊಟ್ಟ ಮಾತನ್ನು ಈಡೇರಿಸುತ್ತೇವೆ.

ವಿದ್ಯಾವಂತ ಯುವಕರಿಗೆ ಇಂದು ಕೆಲಸವಿಲ್ಲ, ಸರ್ಕಾರಿ ನೌಕರಿಗಳನ್ನು ಇಂದು ಮಾರಾಟಕ್ಕೆ ಇಡಲಾಗಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡಿಲ್ಲ, ನಮ್ಮ ಪ್ರದಾನಿಯ ಮಿತ್ರ ಗೌತಮ್ ಅದಾನಿ ಒಂದು ದಿನಕ್ಕೆ 16000 ಕೋಟಿ ರೂ ಗಳಿಸುತ್ತಾರೆ. ಆದರೆ ಇಂದು ನಮ್ಮ ರೈತರು ಮಾತ್ರ ದಿನನಿತ್ಯ 27 ರೂ ಮಾತ್ರ ಗಳಿಸುತ್ತಾರೆ. ಸಣ್ಣ ಮತ್ತು ಮಧ್ಯಮ ವ್ಯಾಪರಸ್ಥರನ್ನು ಜಿಎಸ್‌ ಟಿ ತೆರಿಗೆಯ ಮೂಲಕ ಅವರ ಜೀವನವನ್ನು ಸಂಕಷ್ಟಕ್ಕೆ ತಂದೊಡಿದ್ದಾರೆ ಎಂದರು.

ನಮ್ಮ ತಾಯ್ನಾಡಿಗೆ ನಾವು ಗೌರವಿಸಿದ್ದೇವೆ. ನೀವು ಬೆಳಗ್ಗೆಯಿಂದ ರಾತ್ರಿ ತನಕ ಕಷ್ಟಪಟ್ಟು ದುಡಿಯುತ್ತೀರಾ. ಇಲ್ಲಿ ರೈತರು ಇದ್ದೀರಾ ಇಲ್ಲಿ ನೀರಿನ ಅಭಾವವಿದೆ ಆದರೂ, ರೈತರ ಕಷ್ಟ ಪಟ್ಟು ದುಡಿದು ಇವತ್ತು ಇಲ್ಲಿ ನಿಂತಿದ್ದಾನೆ. ಇಲ್ಲಿ ಮಹಿಳೆಯರು ಇದ್ದೀರಾ ಮನೆಯಲ್ಲೂ ದುಡಿಯುತ್ತಾಲೇ, ಮಕ್ಕಳನ್ನು ಸಾಕುತ್ತಾಳೆ. ಹೊರಗಡೆ ಹೋಗಿ ಹೊಲದಲ್ಲೂ ಗಂಡಂದಿರ ಜತೆಗೆ ಸಾತ್‌ ನೀಡುತ್ತಾರೆ. ಮತ್ತೇ ರಾತ್ರಿ ಮನೆಗೆ ಬಂದರೆ ಮಕ್ಕಳು ಮಲಗಿದ ಮೇಲೆಯೂ ದಿನವೊತ್ತು ಕೆಲಸ ಮಾಡುತ್ತಲೇ ಇರುತ್ತಾರೆ. ನಮ್ಮ ತಾಯ್ನಾಡನ್ನು ಮತ್ತೆ ಯಾರು ಕಷ್ಟಪಟ್ಟು ಕಟ್ಟಿದ್ದು. ಈ ಕ್ಷೇತ್ರವನು ಈ ನಾಡನ್ನು ಕಟ್ಟಿದವರು ನೀವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+