ಹೇಳುವುದು ಆಚಾರ, ತಿನ್ನೋದು ಬದನೆಕಾಯಿ: ಬಿಜೆಪಿ ಲೇವಡಿ
ಬೆಂಗಳೂರು, ಜನವರಿ 19: ಇನ್ನಾದರೂ ಕೆಲಸ ಮಾಡಿ ಬನ್ನಿ ಎಂದು ರೆಸಾರ್ಟ್‌ನಲ್ಲಿದ್ದ ಬಿಜೆಪಿ ಶಾಸಕರನ್ನು ವ್ಯಂಗ್ಯವಾಡಿದ್ದ ಕಾಂಗ್ರೆಸ್ಸಿಗರಿಗೆ ಈಗ ಬಿಜೆಪಿ ಅದೇ ಅಸ್ತ್ರವನ್ನು ತಿರುಗುಬಾಣವನ್ನಾಗಿ ಪ್ರಯೋಗಿಸಿದೆ.
ದೆಹಲಿ ಸಮೀಪ ಐಷಾರಾಮಿ ರೆಸಾರ್ಟ್‌ನಲ್ಲಿ ರಜಾದಿನ ಕಳೆದು ಮನೆಗೆ ಮರಳುತ್ತಿರುವ ಬಿಜೆಪಿ ಶಾಸಕರಿಗೆ ನಾವು ಹೃದಯಪೂರ್ವಕ ಸ್ವಾಗತ ಕೋರುತ್ತೇವೆ. ಅವರು ಸಂಪೂರ್ಣವಾಗಿ ಹೊಸ ಉತ್ಸಾಹ ಪಡೆದುಕೊಂಡಿದ್ದಾರೆ. ಸುದೀರ್ಘ ಕಾಲದಿಂದ ನಿರ್ಲಕ್ಷಿಸಿದ್ದ ತಮ್ಮ ಕ್ಷೇತ್ರಗಳಿಗೆ ಇನ್ನಾದರೂ ತೆರಳಿ ಕೆಲಸಗಳಲ್ಲಿ ಭಾಗವಹಿಸುತ್ತಾರೆ ಎಂಬ ಆಶಯವಿದೆ ಎಂದು ಕೆಪಿಸಿಸಿ ಅಧ್ಯಕ್ಷರ ಟ್ವಿಟ್ಟರ್ ಖಾತೆಯಿಂದ ಗುರುವಾರ ಟ್ವೀಟ್ ಮಾಡಲಾಗಿತ್ತು.
ಬಿಜೆಪಿಯವರು ರೆಸಾರ್ಟ್ ಮೋಜು ಮಸ್ತಿ ಬಿಟ್ಟು ಇನ್ನಾದರೂ ಕೆಲಸದ ಕಡೆಗೆ ಗಮನ ಹರಿಸಲಿ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಆದರೆ, ಹಾಗೆ ಟ್ವೀಟ್ ಮಾಡಿದ ಮರುದಿನವೇ ಕಾಂಗ್ರೆಸ್ ತನ್ನ ಶಾಸಕರನ್ನೇ ರೆಸಾರ್ಟ್‌ಗೆ ಕರೆದೊಯ್ದಿದೆ. ಬೆಂಗಳೂರಿನಿಂದ ಹೊರಗಿರುವ ಬಿಡದಿಯ ಎರಡು ರೆಸಾರ್ಟ್‌ಗಳಲ್ಲಿ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ.

ಇತ್ತ ವಿಧಾನಸೌಧ ಜನಪ್ರತಿನಿಧಿಗಳಿಲ್ಲದೆ ಭಣಗುಡುತ್ತಿದೆ. ಕಾಂಗ್ರೆಸ್‌ನ ರೆಸಾರ್ಟ್ ರಾಜಕೀಯವನ್ನು ಬಿಜೆಪಿ ಪ್ರತಿ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷರ ಟ್ವೀಟ್‌ಅನ್ನು ಹಂಚಿಕೊಂಡಿರುವ ಬಿಜೆಪಿ, 'ಹೇಳುವುದು ಆಚಾರ, ತಿನ್ನೋದು ಬದನೆಕಾಯಿ!' ಎಂದು ಲೇವಡಿ ಮಾಡಿದೆ.
ಹೇಳುವುದು ಆಚಾರ ತಿನ್ನೋದು ಬದನೆಕಾಯಿ ! https://t.co/r5fzyFqBPi
— BJP Karnataka (@BJP4Karnataka) 18 January 2019
ಶಾಸಕಾಂಗ ಪಕ್ಷದ ಸಭೆಗೆ ಎಲ್ಲ ಶಾಸಕರೂ ಹಾಜರಾಗದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ನೀವು ನೀಡಿದ್ದ ಎಚ್ಚರಿಕೆ, ನಿಮ್ಮ ಹತಾಶೆಯನ್ನು ತೋರಿಸುತ್ತದೆ ಮತ್ತು ಈ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಈ ಅಪವಿತ್ರ ಮೈತ್ರಿಯು ಜನರನ್ನು ಮೂರ್ಖರನ್ನಾಗಿಸಲು ಮಾಡಿಕೊಂಡ ಹತಾಶೆಯ ನಡೆ ಎಂದು ಬಿಜೆಪಿ ಟೀಕಿಸಿದೆ.
-
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Samarth Shamanur: ದಾವಣಗೆರೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಫೈಟ್ ಅಂತ್ಯ: ಶಾಮನೂರು ಕುಟುಂಬದ ಕುಡಿ ಸಮರ್ಥ್ ಕಣಕ್ಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral












Click it and Unblock the Notifications