BJP VS Congress: ‘ಕಾಂಗ್ರೆಸ್ ಬಂದಿದೆ ಕಲೆಕ್ಷನ್ ಮಾಡಿದೆ, ಕಾಂಗ್ರೆಸ್ ಬಂದಿದೆ ಕಮಿಷನ್ ತಿಂದಿದೆ’
ಐಟಿ ದಾಳಿ ವಿಚಾರ ಹಿಡಿದುಕೊಂಡು ಬಡಿದಾಡುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್‌ಗೆ, ಈಗ ಕ್ಷಣಕ್ಕೊಂದು ವಿಚಾರ ಅಸ್ತ್ರವಾಗಿ ಸಿಗುತ್ತಿದೆ. ಬಿಜೆಪಿ ಆರೋಪ ಮಾಡಿದ್ರೆ ಕಾಂಗ್ರೆಸ್ ಉತ್ತರ ನೀಡುತ್ತದೆ, ಕಾಂಗ್ರೆಸ್ ಆರೋಪ ಮಾಡಿದರೆ ಬಿಜೆಪಿ ಮತ್ತೊಂದು ಆರೋಪ ಮಾಡುತ್ತದೆ. ಹೀಗೆ ಇಬ್ಬರ ನಡುವೆ ಕುಸ್ತಿ ಬಲು ಜೋರಾಗಿದ್ದು, ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಮತ್ತೊಂದು ಗಂಭೀರ ಆರೋಪ ಮಾಡಿದೆ.
ಹೌದು, ರಾಜ್ಯದಲ್ಲಿ ಐಟಿ ದಾಳಿ ನಡೆದಾಗ ಸರಿಯಾಗೇ ಹಣ ಸಿಕ್ಕಿದೆ. ಮಂಚದ ಕೆಳಗಡೆ, ಬಾಕ್ಸ್ ಒಳಗೆ ಹೀಗೆ ಕಂಡ ಕಂಡಲ್ಲಿ ಭಾರಿ ಪ್ರಮಾಣ ಹಣ ಸಿಕ್ಕಿದೆ. ಇದನ್ನು ನೋಡಿರುವ ಇಡೀ ದೇಶ ಶಾಕ್ ಆಗಿದೆ. ಕರ್ನಾಟಕದ ಈ ಘಟನೆ ಫೋಟೋ ಎಲ್ಲೆಲ್ಲು ವೈರಲ್ ಆಗಿವೆ. ಆದರೆ ಹೀಗೆ ಹಣ ಸಿಕ್ಕಿರುವ ವಿಚಾರ ಮುಂದಿಟ್ಟುಕೊಂಡು ಒಬ್ಬರ ಮೇಲೊಬ್ಬರು ಕೆಸರು ಎರಚುವ ಕೆಲಸ ಅದ್ಧೂರಿಯಾಗಿ ನಡೆಸಿದ್ದಾರೆ ಕಾಂಗ್ರೆಸ್ & ಬಿಜೆಪಿ ಲೀಡರ್ಸ್. ಹೀಗೆ ಈಗ ಕಮಲ ಪಾಳಯ ಮತ್ತೆ, ಗಂಭೀರ ಆರೋಪ ಒಂದನ್ನ ಕರ್ನಾಟಕದ ಕಾಂಗ್ರೆಸ್ ನಾಯಕರ ವಿರುದ್ಧ ಹೊರಿಸಿದೆ.

'ಕಾಂಗ್ರೆಸ್ ಬಂದಿದೆ ಕಲೆಕ್ಷನ್ ಮಾಡಿದೆ...'
ಅಂದಹಾಗೆ ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, 'ಕಾಂಗ್ರೆಸ್ ಬಂದಿದೆ ಕಲೆಕ್ಷನ್ ಮಾಡಿದೆ. ಕಾಂಗ್ರೆಸ್ ಬಂದಿದೆ ಕಮಿಷನ್ ತಿಂದಿದೆ. ಕಾಂಗ್ರೆಸ್ ಬಂದಿದೆ ಲೂಟಿ ಜೋರಾಗಿದೆ. ಕಾಂಗ್ರೆಸ್ ಬಂದಿದೆ ಹೈಕಮಾಂಡ್ ಜೇಬು ತುಂಬಿದೆ. ಕಾಂಗ್ರೆಸ್ ಬಂದಿದೆ ಕರ್ನಾಟಕ ದಿವಾಳಿ ಆಗಿದೆ.' ಎಂದು ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರನ್ನು ಕೆಣಕಿದೆ.
ಕಾಂಗ್ರೆಸ್ ಬಂದಿದೆ ಕಲೆಕ್ಷನ್ ಮಾಡಿದೆ.
— BJP Karnataka (@BJP4Karnataka) October 17, 2023
ಕಾಂಗ್ರೆಸ್ ಬಂದಿದೆ ಕಮಿಷನ್ ತಿಂದಿದೆ.
ಕಾಂಗ್ರೆಸ್ ಬಂದಿದೆ ಲೂಟಿ ಜೋರಾಗಿದೆ.
ಕಾಂಗ್ರೆಸ್ ಬಂದಿದೆ ಹೈಕಮಾಂಡ್ ಜೇಬು ತುಂಬಿದೆ.
ಕಾಂಗ್ರೆಸ್ ಬಂದಿದೆ ಕರ್ನಾಟಕ ದಿವಾಳಿ ಆಗಿದೆ. pic.twitter.com/X3X5IoRtBN
ಗ್ಯಾರಂಟಿ ವಿಚಾರದಲ್ಲೂ ಬಿಜೆಪಿ ವಾರ್
ಹಾಗೇ ಮತ್ತೊಂದು ಟ್ವೀಟ್ ಮೂಲಕ, 'ಚುನಾವಣೆಗೂ ಮುನ್ನ ರಾಜ್ಯದ ಜನತೆಯ ಕಿವಿ ಮೇಲೆ ಕಲರ್ ಕಲರ್ ಹೂವಿಟ್ಟು, ನಂಗೂ ಫ್ರೀ, ನಿಂಗೂ ಫ್ರೀ ಎಂದು ಬೊಗಳೆ ಬಿಟ್ಟಿದ್ದ @siddaramaiah ಅವರೇ ಇಲ್ಲಿ ನೋಡಿ, ನಿಮ್ಮ ಸರ್ಕಾರದ ಅಸಲಿ ತಾಕತ್ತು ಏನೆಂಬುದು ತಿಳಿಯುತ್ತದೆ. ನೇಕಾರರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆಯನ್ನು ವಾಪಸ್ ಪಡೆದಿದ್ದೀರಿ, ಈಗ ನೇಕಾರರಿಗೆ ಉಚಿತ ವಿದ್ಯುತ್ ಹಾಗಿರಲಿ, ಕನಿಷ್ಟ ಒಂದು ತಾಸು ವಿದ್ಯುತ್ ನೀಡಲು ನಿಮ್ಮ @INCKarnataka ಸರ್ಕಾರಕ್ಕೆ ಯೋಗ್ಯತೆಯೂ ಇಲ್ಲ, ಸಾಮರ್ಥ್ಯವೂ ಇಲ್ಲ. ಅಂತಹ ಅಸಮರ್ಥ ಸರ್ಕಾರ ನಿಮ್ಮದು.' ಎಂದು ಆರೋಪ ಮಾಡಿದೆ.
ಚುನಾವಣೆಗೂ ಮುನ್ನ ರಾಜ್ಯದ ಜನತೆಯ ಕಿವಿ ಮೇಲೆ ಕಲರ್ ಕಲರ್ ಹೂವಿಟ್ಟು, ನಂಗೂ ಫ್ರೀ, ನಿಂಗೂ ಫ್ರೀ ಎಂದು ಬೊಗಳೆ ಬಿಟ್ಟಿದ್ದ @siddaramaiah ಅವರೇ ಇಲ್ಲಿ ನೋಡಿ, ನಿಮ್ಮ ಸರ್ಕಾರದ ಅಸಲಿ ತಾಕತ್ತು ಏನೆಂಬುದು ತಿಳಿಯುತ್ತದೆ.
— BJP Karnataka (@BJP4Karnataka) October 17, 2023
ನೇಕಾರರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆಯನ್ನು ವಾಪಸ್ ಪಡೆದಿದ್ದೀರಿ, ಈಗ… pic.twitter.com/9rU1jhXYsw
ಒಟ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಕಿರಿಕ್ ದೊಡ್ಡದಾಗುತ್ತಿದೆ. ಈ ನಡುವೆ ಲೋಕಸಭೆ ಚುನಾವಣೆಗೆ ಇದೇ ಅಸ್ತ್ರವನ್ನು ದೊಡ್ಡದಾಗಿ ಬಳಸಿಕೊಳ್ಳಲು ಬಿಜೆಪಿ ರಾಜ್ಯ ನಾಯಕರು ಪ್ಲ್ಯಾನ್ ಮಾಡಿದಂತೆ ತೋರುತ್ತಿದೆ. ಹೀಗೆ ಕಾಂಗ್ರೆಸ್ & ಬಿಜೆಪಿ ನಡುವೆ ನಡೆಯುತ್ತಿರುವ ಐಟಿ ಜಟಾಪಟಿ ಸದ್ಯಕ್ಕೆ ಮುಗಿಯುವ ಯಾವುದೇ ಸಾಧ್ಯತೆ ಇಲ್ಲ. ಅಷ್ಟೇ ಅಲ್ಲ ಗ್ಯಾರಂಟಿ ವಾರ್ ಕೂಡ ಮುಂದುವರಿಯುವುದು ಗ್ಯಾರಂಟಿ.












Click it and Unblock the Notifications