ಕಾಂಗ್ರೆಸ್ ವಿರುದ್ಧ ಬಿಜೆಪಿ ಸಹಿ ಸಂಗ್ರಹ ಅಭಿಯಾನ
ನವದೆಹಲಿ, ಸೆಪ್ಟೆಂಬರ್, 06: ಬಿಬಿಎಂಪಿ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಂತಿಮ ಹಂತಕ್ಕೆ ಬಂದಿದ್ದರೆ ಇತ್ತ ಬಿಜೆಪಿ ನಾಯಕರು ಕೋರ್ ಕಮಿಟಿ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ರೂಪು ರೇಷೆಗಳನ್ನು ಸಿದ್ಧಪಡಿಸಿದ್ದಾರೆ.
ಭಾನುವಾರ ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಮುಖ ನಾಯಕರು ಹಾಜರಿದ್ದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಸದಾನಂದ ಗೌಡ, ಆರ್ ಅಶೋಕ್ ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಿದ್ದರು.

ಕಾಂಗ್ರೆಸ್ ಸರ್ಕಾರ ರೈತರ ಹಿತ ಬಲಿ ನೀಡಿದ್ದು ರಾಜ್ಯವನ್ನು ಕತ್ತಲೆಯಲ್ಲಿ ಇಟ್ಟಿದೆ. ಅಧಿಕಾರದ ಆಸೆಗೆ ಬಿದ್ದು ಸಾಮಾನ್ಯ ಜನರನ್ನು ಮರೆತಿದೆ ಎಂದು ಬಿಎಸ್ ಯಡಿಯೂರಪ್ಪ ವಾಗ್ದಾಳಿ ಮಾಡಿದರು. [ಬಿಬಿಎಂಪಿ ಮೇಯರ್ ಚುನಾವಣೆ: ಗುಪ್ತಚರ ವರದಿಗೆ ಕಾಂಗ್ರೆಸ್ ಬೇಸ್ತು!]
ಬಿಜೆಪಿ ಕೋರ್ ಕಮಿಟಿ ಸಭೆಯ ಪ್ರಮುಖ ತೀರ್ಮಾನಗಳು
* ಬಿಬಿಎಂಪಿ ಮೇಯರ್ ಆಯ್ಕೆ ಮತದಾರರ ಪಟ್ಟಿ ಕಾನೂನು ಬಾಹಿರವಾಗಿದ್ದು, ಸಂಬಂಧವಿಲ್ಲದವರ ಹೆಸರನ್ನು ಸೇರ್ಪಡೆ ಮಾಡಲಾಗಿದೆ. ಇದನ್ನು ಪಕ್ಷ ವಿರೋಧಿಸಲಿದ್ದು ಹೋರಾಟ ನಡೆಸಲಿದೆ.

* ಬಿಎಸ್ ವೈ ನೇತೃತ್ವದಲ್ಲಿ ನಡೆಯುವ ರೈತ ಚೈತನ್ಯ ಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ರಾಜ್ಯಾದ್ಯಂತ ಎರಡನೇ ಹಂತದಲ್ಲಿ ಮುಂದುವರಿಸಲಾಗುವುದು.
* ಮೈಸೂರಿನಲ್ಲಿಯೇ ರೈತ ಚೈತನ್ಯ ಯಾತ್ರೆ ಅಂತಿಮವಾಗಲಿದ್ದು ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಲಾಗುವುದು.[ಕೋಡಿಶ್ರೀಗಳ ಬಿಬಿಎಂಪಿ ಭವಿಷ್ಯ : ಅರ್ಧ ನಿಜ, ಅರ್ಧ ಸುಳ್ಳು]
* ಸೆಪ್ಟೆಂಬರ್ 13 ರಂದು ಮೈಸೂರಿನಲ್ಲಿ ನಡೆಯಲಿರುವ ರೈತ ಚೈತನ್ಯ ಯಾತ್ರೆ ಸಮಾರೋಪಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕರೆಸುವ ಬಗ್ಗೆಯೂ ಚರ್ಚೆ ಮಾಡಲಾಯಿತು.
* ಕಾಂಗ್ರೆಸ್ ಸರ್ಕಾರದ ವಿರುದ್ಧ ಸಹಿ ಸಂಗ್ರಹ ಚಳವಳಿ ಆರಂಭಿಸಲಾಯಿತು.












Click it and Unblock the Notifications