‘ಸಾವಿನ ಮನೆಯಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ದರ್ದು ಬಂದಿರುವುದು ರಾಜ್ಯದ ಮುಖ್ಯಮಂತ್ರಿಗೆ ನಾಚಿಕೆಗೇಡು..!’

ಯೋಧರು ದೇಶದ ಹೆಮ್ಮೆ ತಮ್ಮ ಜೀವ ಲೆಕ್ಕಿಸದೆ ನಮ್ಮನ್ನೆಲ್ಲ ರಕ್ಷಿಸಲು ಹಗಲು & ರಾತ್ರಿ ಎನ್ನದೇ ಗಡಿ ಕಾಯುತ್ತಾರೆ. ವೀರ ಯೋಧರು ಗಡಿಯಲ್ಲಿ ದೇಶಕ್ಕಾಗಿ ಹುತಾತ್ಮರಾಗುತ್ತಾರೆ. ಇದೇ ರೀತಿ ಇತ್ತೀಚೆಗೆ ಕ್ಯಾಪ್ಟನ್ ಪ್ರಾಂಜಲ್ ಅವರು ಕೂಡ ಹುತಾತ್ಮರಾಗಿದ್ದರು. ಆದರೆ ಈ ವೀರ ಯೋಧನ ಪರಿಹಾರದ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕರ್ನಾಟಕದಲ್ಲಿ ಈಗ ದೊಡ್ಡ ಕಿಚ್ಚು ಹೊತ್ತಿಕೊಂಡಿದೆ.

ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮರಾದ ಕಾರಣ ಅವರ ಕುಟಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು. ಆದರೆ ಈ ವಿಚಾರದಲ್ಲಿ ಪರಿಹಾರ ನೀಡದೆ ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕ್ತಿದ್ದಾರೆ ಎಂಬ ಆರೋಪವು ಕೇಳಿ ಬಂದಿತ್ತು.

Karnataka BJP & Congress Fight Over Captain Pranjal Compensation

ಇದಾದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಮತ್ತು ಸಂಸದ ತೇಜಸ್ವಿ ಸೂರ್ಯ ನಡುವೆ ವಾಗ್ವಾದ ಜೋರಾಗಿರುವ ಸಮಯದಲ್ಲಿ, ಕರ್ನಾಟಕದ ಬಿಜೆಪಿ ಘಟಕವು ಟ್ವೀಟ್ ಮೂಲಕ ಹೊಸ ಬಾಂಬ್ ಸಿಡಿಸಿದೆ.

ಪರಿಹಾರದ ವಿಚಾರಕ್ಕೆ ಫುಲ್ ಫೈಟ್!

ಹೌದು, ಸಿಎಂ ಸಿದ್ದರಾಮಯ್ಯ ಅವರು ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ಇಂದು, ತಮ್ಮ ಸರ್ಕಾರದಿಂದ ಪರಿಹಾರ ಚೆಕ್ ವಿತರಣೆಯಾದ ವಿಚಾರವನ್ನ ಟ್ಟಿಟ್ ಮಾಡಿ ಅಂದ್ರೆ ಈಗಿ ಎಕ್ಸ್ ಖಾತೆಯ ಮೂಲಕ ತಿಳಿಸಿದ್ದರು. 'ನಮ್ಮ ಸರ್ಕಾರ ಘೋಷಿಸಿದಂತೆ ಹುತಾತ್ಮ ಯೋಧ "ಕ್ಯಾಪ್ಟನ್ ಎಂ.ವಿ.ಪ್ರಾಂಜಲ್" ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ.

ಪ್ರಾಣವನ್ನು ಪಣಕ್ಕೆ ಇಟ್ಟು ದೇಶ ಕಾಯುವ ಯೋಧರ ಬಗ್ಗೆ ನಮಗೆ ಅಪಾರವಾದ ಗೌರವ-ಅಭಿಮಾನ ಇದೆ, ಅಷ್ಟೇ ಗೌರವ ಮತ್ತು ಕಾಳಜಿ ಯೋಧರ ಕುಟುಂಬ ವರ್ಗದ ಬಗ್ಗೆಯೂ ಇದೆ.'

Karnataka BJP & Congress Fight Over Captain Pranjal Compensation

'ಯೋಧರ ಸಾವು - ನೋವು ಮುಂದಿಟ್ಟುಕೊಂಡು ರಾಜಕಾರಣ ಮಾಡುವವರು ನಾವಲ್ಲ.

ಕೆಲವರು ರಾಜಕೀಯ ದುರುದ್ದೇಶದಿಂದ ಸುಳ್ಳು ಸುದ್ದಿ ಸೃಷ್ಟಿಸಿ ಅಪಪ್ರಚಾರ ಮಾಡುವದರಲ್ಲಿಯೇ ವಿಕೃತ ಆನಂದ ಪಡುತ್ತಿದ್ದಾರೆ. ಅಂತಹವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದಷ್ಟೇ ಹಾರೈಸಬಲ್ಲೆ.' ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ಆದರೆ ಈ ಪೋಸ್ಟ್‌ಗೆ ಈಗ ಬಿಜೆಪಿ ಕೌಂಟರ್ ಕೊಟ್ಟಿದೆ.

'ಸಾವಿನ ಮನೆಯಲ್ಲೂ ಪ್ರಚಾರ ಗಿಟ್ಟಿಸಿ..'

ಸಿಎಂ ಸಿದ್ದರಾಮಯ್ಯರ ಟ್ವೀಟ್‌ಗೆ ಕೌಂಟರ್ ಕೊಟ್ಟಿರುವ ಬಿಜೆಪಿ, 'ಯೋಧರು, ರೈತರ ವಿಚಾರದಲ್ಲಿ ಬಿಜೆಪಿ ಸದಾ ಅವರ ಬೆನ್ನಿಗೆ ನಿಂತಿದೆ. ಆದರೆ, ಕಾಂಗ್ರೆಸ್‌ ಯೋಧರಿಗೆ ಎಂದಿಗೂ ಅಪಮಾನಿಸುತ್ತಲೇ ಬಂದಿದೆ. ಹುತಾತ್ಮ ಕ್ಯಾಪ್ಟನ್‌ ಪ್ರಾಂಜಲ್‌ ಪರಿಹಾರ ಧನ ವಿಚಾರದಲ್ಲಿ ಇದೇ ಕೆಲಸವನ್ನು @siddaramaiah ಅವರು ಮಾಡಿದ್ದಾರೆ.

ನಾಲಿಗೆಯನ್ನು ಹರಿಬಿಟ್ಟು ಮುಖಭಂಗವಾದ ಬಳಿಕ, ಈಗ ಹುತಾತ್ಮ ಯೋಧ ಪ್ರಾಂಜಲ್‌ ಅವರ ಮನೆಗೆ ಚೆಕ್‌ ಹಿಡಿದು ಜತೆಗೆ ಹತ್ತು ಫೋಟೋಗ್ರಾಫರ್‌ಗಳನ್ನೂ ಕರೆದುಕೊಂಡು ಮುಖ್ಯಮಂತ್ರಿಗಳು ಅವರ ಮನೆಗೆ ಹೋಗಿದ್ದಾರೆ. ಸಾವಿನ ಮನೆಯಲ್ಲೂ ಪ್ರಚಾರಗಿಟ್ಟಿಸಿಕೊಳ್ಳುವ ದರ್ದು ಬಂದಿರುವುದು ರಾಜ್ಯದ ಮುಖ್ಯಮಂತ್ರಿಗೆ ನಾಚಿಕೆಗೇಡು..!' ಎಂದು ಸಿಎಂ ವಿರುದ್ಧ ಹರಿಹಾಯ್ದಿದೆ ಬಿಜೆಪಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+