ಬಿಜೆಪಿಯಿಂದ ನೇಪಾಳಕ್ಕೆ ವೈದ್ಯರ ತಂಡ
ಬೆಂಗಳೂರು, ಏ. 30 : ಭೂಕಂಪ ಪೀಡಿತ ನೇಪಾಳದಲ್ಲಿ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಕರ್ನಾಟಕ ಬಿಜೆಪಿ ವತಿಯಿಂದ 20 ತಜ್ಞ ವೈದ್ಯರ ತಂಡ ತೆರಳಲಿದೆ. ಕಠ್ಮಂಡುವಿನ ಚಿರಾಯು ಆಸ್ಪತ್ರೆಯ ವೈದ್ಯರ ಕೋರಿಕೆ ಮೇರೆಗೆ ತಜ್ಞ ವೈದ್ಯರನ್ನು ಕಳುಹಿಸಿಕೊಡಲಾಗುತ್ತಿದೆ.
ರಾಜ್ಯ ಬಿಜೆಪಿ ವೈದ್ಯಕೀಯ ಘಟಕದ ಸಂಚಾಲಕ ಡಾ.ಮಂಜುನಾಥ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಬುಧವಾರ ಮೂವರು ವೈದ್ಯರನ್ನು ಒಳಗೊಂಡ ತಂಡ ತೆರಳಿದ್ದು, ಗುರುವಾರ 10 ವೈದ್ಯರ ತಂಡ ಪ್ರಯಾಣ ಬೆಳೆಸಲಿದೆ. [ಮೂತ್ರ ಕುಡಿದು ಮೂರು ದಿನ ಕಳೆದವನಿಗೆ ಮರುಜೀವ]

ನರರೋಗ, ಮೂಳೆ ಹಾಗೂ ಅನಸ್ತೇಷಿಯಾ ತಜ್ಞರು ಈ ತಂಡದಲ್ಲಿದ್ದಾರೆ. ಕಠ್ಮಂಡುವಿನ ಚಿರಾಯು ಆಸ್ಪತ್ರೆಯ ವೈದ್ಯರ ಕೋರಿಕೆ ಮೇರೆಗೆ ತಜ್ಞ ವೈದ್ಯರನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಡಾ.ಮಂಜುನಾಥ್ ಹೇಳಿದ್ದಾರೆ. [ಮನೆಮನಸುಗಳನ್ನು ಛಿದ್ರ ಮಾಡಿದ ಭೂಕಂಪದ ಮನಕಲಕುವ ಚಿತ್ರಗಳು]
ಗುರುವಾರ ಡಾ.ಅಶೋಕ್, ಡಾ.ಮುರಳೀಧರ್, ಡಾ.ಸಂದೀಪ್, ಡಾ.ಮಂಜುನಾಥ್, ಡಾ.ನಾಗರಾಜ್, ಡಾ.ಶರಣ್, ಡಾ.ದಿನೇಶ್, ಡಾ.ಅನಂತ್ ಕುಮಾರ್ ಮುಂತಾದ ತಜ್ಞ ವೈದ್ಯರ ತಂಡ ನೇಪಾಳಕ್ಕೆ ಪ್ರಯಾಣ ಬೆಳಸಲಿದೆ.
20 Doctors from Our Doctor's Cell will travel to Nepal to provide medical assistance to the Earthquake affected.. pic.twitter.com/n22BJhWQeO
— BJP Karnataka (@bjpkarnataka) April 29, 2015 

Click it and Unblock the Notifications
