ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬ್ಯಾಂಕ್‌ ಸ್ಕೇಲ್ 1 ಹುದ್ದೆಗೆ ಪರೀಕ್ಷೆ ಡಿ. 27ರಂದು

By Kiran B Hegde
|
Google Oneindia Kannada News

ಬೆಂಗಳೂರು, ಡಿ. 12: ಕರ್ನಾಟಕ ಬ್ಯಾಂಕ್‌ನ ಸ್ಕೇಲ್ 1 ಅಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸಿದ್ದೀರಾ? ಹಾಗಿದ್ದರೆ ಇದೇ ತಿಂಗಳು ಪರೀಕ್ಷೆ ಬರೆಯಲು ತಯಾರಾಗಿ.

ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ಬ್ಯಾಂಕ್, ಡಿ. 27ರಂದು ಪರೀಕ್ಷೆ ನಡೆಸುವುದಾಗಿ ತಿಳಿಸಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯುವ ದಿನಾಂಕಕ್ಕಿಂತ ಒಂದು ವಾರ ಮೊದಲು ಕರೆ ಪತ್ರ ಕಳುಹಿಸುವುದಾಗಿ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. [ದಕ್ಷಿಣ ಆಫ್ರಿಕಾಕ್ಕೆ ಅಮ್ಮೆಂಬಳ ಪೈಗಳ ಬ್ಯಾಂಕ್]

bank

ಈ ಪರೀಕ್ಷೆಗಾಗಿ ಅಕ್ಟೋಬರ್ 21ರಿಂದ ನವೆಂಬರ್ 7ರ ವರೆಗೆ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಪರೀಕ್ಷೆಯೂ ಆನ್ ಲೈನ್‌ನಲ್ಲಿಯೇ ನಡೆಯಲಿದೆ. ಉತ್ತಮ ಫಲಿತಾಂಶ ಗಳಿಸಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಗಳಿಸಿದ ಫಲಿತಾಂಶದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. [ಕರ್ನಾಟಕ ಬ್ಯಾಂಕ್ ವೆಬ್ ಸೈಟ್]

2 ಗಂಟೆ, 200 ಅಂಕ: ಆನ್ ಲೈನ್ ಪರೀಕ್ಷೆಯು ಎರಡು ಗಂಟೆಗಳ ಅವಧಿಯದ್ದಾಗಿದ್ದು, 200 ಅಂಕಗಳಿರುತ್ತವೆ. ಋಣಾತ್ಮಕ ಅಂಕ ಪದ್ಧತಿ ಅನುಸರಿಸಲಾಗುವುದು. ಪ್ರತಿ ತಪ್ಪು ಉತ್ತರಕ್ಕೆ 1/4 ನೇ ಅಂಕ ಕಡಿತ ಮಾಡಲಾಗುವುದು. [ಪೇಸ್ ಬುಕ್, ಟ್ವಿಟ್ಟರ್ ಈಗ ಮಿನಿ ಬ್ಯಾಂಕ್]

ಪರೀಕ್ಷೆಯಲ್ಲಿ ಅಭ್ಯರ್ಥಿಗಳ ತಾರ್ಕಿಕ ಸಾಮರ್ಥ್ಯ, ಇಂಗ್ಲಿಷ್, ಪರಿಮಾಣಾತ್ಮಕ ಯೋಗ್ಯತೆ, ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ್ ಜ್ಞಾನವನ್ನು ಪರೀಕ್ಷಿಸಲಾಗುವುದು ಎಂದು ತಿಳಿಸಲಾಗಿದೆ. [ಕೆನರಾ ಜೊತೆ ಅಮಾನತ್ ಬ್ಯಾಂಕ್ ವಿಲೀನ]

ಸಿಲಬಸ್ ಗೊಂದಲ: ಕೆಲವು ಅಭ್ಯರ್ಥಿಗಳು ಪರೀಕ್ಷೆಯು ಯಾವ ಸಿಲಬಸ್ ಆಧಾರದಲ್ಲಿ ನಡೆಯಲಿದೆ ಎಂದು ಗೊಂದಲಗೊಂಡಿದ್ದಾರೆ. ಬೇರೆ ಬ್ಯಾಂಕ್‌ಗಳ ಪರೀಕ್ಷೆಯ ಮಾದರಿಯಲ್ಲಿಯೇ ಈ ಪರೀಕ್ಷೆಯೂ ನಡೆಯಲಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

English summary
Karnataka Bank has held its Officers Scale I examination on December 27. Bank had called on the application on October 21st to November 7th of this year. Bank told that the call letter will be issued to the candidates were short listed before one week of the examination date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X