Karnataka Bandh: ಭುಗಿಲೆದ್ದ ಕಾವೇರಿ ಕಿಡಿ: ಆಗಸ್ಟ್ 13ಕ್ಕೆ ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ ಅಧಿಕೃತ ಕರೆ

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯದ ಕಾವೇರಿ ನೀರು ವಿವಾದ ತಾರಕಕ್ಕೇರಿದ್ದು, ಆಗಸ್ಟ್ 13ರಂದು 'ಕರ್ನಾಟಕ ಬಂದ್'ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಇಂದು ಶುಕ್ರವಾರ ಅಧಿಕೃತ ಕರೆ ನೀಡಿದ್ದಾರೆ. ಇಂದು ಬೆಳಗ್ಗೆ 11.30ರಿಂದ ಕರವೇ, ಕನ್ನಡಪರ ವಿವಿಧ ಸಂಘಟನೆಗಳ ಮುಖಂಡರ ಜತೆಗೆ ಅವರು ಚರ್ಚಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಬಂದ್‌ಗೆ ಕರೆ ನೀಡಿದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ವಿರುದ್ಧ ಹಾಗೂ ತಮಿಳುನಾಡಿನ ಪರ CWMA ಆದೇಶ ಖಂಡಿಸಿದ ವಾಟಾಳ್ ನಾಗಾರಾಜ್, ಕನ್ನಡಿಗರು ಕೇಂದ್ರದ ಗುಲಾಮರೇ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು. ಕರ್ನಾಟಕ ದೇಶದ ಭೂಪಟದಲ್ಲಿ ಇಲ್ಲವೇ. ನಮ್ಮ ರಾಜ್ಯದ ಬಗ್ಗೆ ತಾತ್ಸಾರವೇಕೆ? ಪ್ರತಿ ಬಾರಿ ಅನ್ಯಾಯವಾಗುತ್ತಿದೆ ಎಂದು ಸಾ.ರಾ.ಗೋವಿಂದು ಸೇರಿ ಕನ್ನಡಪರ ಚಳವಳಿಗಾರರು ಆಕ್ರೋಶ ಹೊರ ಹಾಕಿದರು.

Karnataka Bandh on August 13

ಕನ್ನಡಪರ ಸಂಘಟನೆಗಳು, ರೈತಪರ ಹೋರಾಟಗಾರರು ಬೇರೆ ಬೇರೆ ಜಿಲ್ಲೆಗಳಲ್ಲಿ ಇಂದು ಪ್ರತಿಭಟನೆ ಮುಂದುವರಿಸಿದ್ದಾರೆ. ಬಿಜೆಪಿ ಸಹ KRS ಬಳಿ ರೈತರೊಂದಿಗೆ ಹೋರಾಟ ನಡೆಸಿದೆ. ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ತಮಿಳುನಾಡು ಸರ್ಕಾರಕ್ಕೆ ಮಣಿಯದಂತೆ ಸಲಹೆ ನೀಡಿದೆ. ಕನ್ನಡಪರ ಸಂಘಟನೆಗಳು ಸುದ್ದಿಗೋಷ್ಠಿ ನಡೆಸಿ ಬಂದ್‌ಗೆ ಕರೆ ನೀಡಿವೆ. ಅನೇಕ ಸಂಘಟನೆಗಳಿಂದ ತಮಿಳುನಾಡು ವಿರುದ್ಧ ಆಕ್ರೋಶ ಹೊರ ಹಾಕಿವೆ.

Mekedatu: ಮೇಕೆದಾಟು ಯೋಜನೆಗೆ ತಿರುವು: ತಿದ್ದುಪಡಿ DPR ಸಲ್ಲಿಸಲು ಕೇಂದ್ರ ಜಲ ಆಯೋಗ ಸೂಚನೆ
ಇತ್ತ ಶುಕ್ರವಾರ ಸಿಎಂ ಡಿಕೆ ಶಿವಕುಮಾರ್, ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಸಂಪುಟ ಸಚಿವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಹೈವೋಲ್ಟೇಜ್ ಸಭೆ ನಡೆಯಿತು. ಸಭೆಯಲ್ಲಿ ಕಾರ್ಯದರ್ಶಿ ಶಾಲಿನಿ ರಜನೀಶ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಗೌರವ್ ಗುಪ್ತಾ, ರಾಜೇಶ್ ಕುಮಾರ್ ಕಠಾರಿಯ, ಡಿಜಿಪಿ ಸಲೀಂ ಅಹ್ಮದ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯ ಬಂದ್..!

ಕಾವೇರಿ ನದಿ ನೀರು ವಿಚಾರದಲ್ಲಿ ಕೇಂದ್ರ ಸರ್ಕಾರದ ಧೋರಣೆ, CWMA ಆದೇಶ ವಿರುದ್ಧ ಆಗಸ್ಟ್ 13ರಂದು ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ. ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದ್ದು, ಸಣ್ಣ ಸಣ್ಣ ವ್ಯಾಪಾರಿಗಳು, ಅಂಗಡಿ ಮುಂಗಟ್ಟು, ಹೋಟೆಲ್, ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಸಾರ್ವಜನಿಕರು ಸಾರಿಗೆ, ಆಟೋ-ಟ್ಯಾಕ್ಸಿ ಸೇರಿದಂತೆ ಖಾಸಗಿ ಸಾರಿಗೆ ಮತ್ತು ನಮ್ಮ ಮೆಟ್ರೋ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಎಲ್ಲ ಸಂಘಟನೆಗಳ ಬೆಂಬಲಕ್ಕೆ ವಾಟಾಳ್ ಮನವಿ

ಕರ್ನಾಟಕ ಬಂದ್‌ಗೆ ಕನ್ನಡಪರ, ರೈತಪರ ಸಂಘಟನೆಗಳು ಮಾತ್ರವಲ್ಲದೇ, ವಿದ್ಯಾರ್ಥಿ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳು, ಚಾಲಕರು, ಹೋಟೆಲ್ ಮಾಲೀಕರು, ಬೀದಿ ವ್ಯಾಪಾರಿಗಳು, ಖಾಸಗಿ ಶಾಲಾ ಸಂಸ್ಥೆಗಳು, ನೌಕರರ ಸಂಘಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಬಂದ್‌ ವೇಳೆ ಎಲ್ಲ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡುವಂತೆ ವಾಟಾಳ್ ನಾಗರಾಜ್ ಅವರು ಕೋರಿದ್ದಾರೆ.

ಈಗಾಗಲೇ ಆದರ್ಶ್ ಆಟೋ ಯೂನಿಯನ್ ಬಂದ್‌ಗೆ ಅಧಿಕೃತ ಬೆಂಬಲ ಘೋಷಿಸಿವೆ. ಇದೇ ರೀತಿ ಇನ್ನಿತರ ಸಂಘನೆಗಳು ಬೆಂಬಲ ಸೂಚಿಸಲಿವೆ. ಇನ್ನೂ ಪದೇ ಪದೇ ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂಥ ಧೋರಣೆ ಸಹಿಸುವುದಿಲ್ಲ. ಅವೈಜ್ಞಾನಿಕ ತೀರ್ಪು, ಕರ್ನಾಟಕದ ಮೇಲಿನ ದಬ್ಬಾಳಿಕೆ ಸಹಿಸುವುದಿಲ್ಲ ಎಂದು ತಿಳಿಸಿದೆ.

ರಾಜ್ಯದಲ್ಲಿ 'ಜನನಾಯಗನ್' ಸಿನಿಮಾ ಪ್ರರ್ಶನಕ್ಕೆ ಬ್ರೇಕ್

ಕರ್ನಾಟಕದಲ್ಲಿ ಬರಗಾಲ ಎದುರಾಗಿದ್ದರೂ ಸಹಿತ ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್‌ನಂತೆ ಹದಿನೈದು ದಿನ ನೀರು ಬಿಡಲು ಆದೇಶಿಸಿದ್ದನ್ನು ರಾಜ್ಯ ಸರ್ಕಾರ ಖಂಡಿಸಿದೆ. ಯಾವುದೇ ಕಾರಣಕ್ಕೂ ನೀರು ಬಿಡದಿರಲು ಕರ್ನಾಟಕ ನಿರ್ಧರಿಸಿದೆ. ಇದರ ವಿರುದ್ಧ ಜಲ್ಲಿ ಕಲ್ಲು, ಎಂ-ಸ್ಯಾಂಡ್ ಪೂರೈಕೆ ನಿಷೇಧಿಸಿ ತಮಿಳುನಾಡು ಸಿಎಂ ವಿಜಯ್ ಆದೇಶಿಸಿದ್ದರು.

ತಮಿಳುನಾಡು ಕಾವೇರಿ ಖ್ಯಾತೆ ತೆಗೆದ ಹಿನ್ನೆಲೆ ಸಿಎಂ ವಿಜಯ್ ಥಳಪತಿ ನಟನೆಯ 'ಜನನಾಯಗನ್' ಚಿತ್ರಪ್ರದರ್ಶನಕ್ಕೆ ರದ್ದುಗೊಳಿಸಬೇಕೆಂಬ ಆಗ್ರಹ ಜೋರಾಗಿದೆ. ಸಿಎಂ ವಿಜಯ್ ಸಿನಿಮಾ ಕರ್ನಾಟಕದಲ್ಲಿ ಪ್ರದರ್ಶನ ಕಾಣುತ್ತಿತ್ತು. ಶುಕ್ರವಾರ ಚಾಮರಾಜಗರದ ಬಸವೇಶ್ವರ ಥೀಯೇಟರ್‍‌ನ ಚಲನಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ. ಚಿತ್ರಮಂದಿರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಶಿವಾನಂದ ಥಿಯೇಟರ್ ಎದುರು ಕನ್ನಡಿಗರು ಪ್ರತಿಭಟಿಸಿ, ಸಿನಿಮಾ ಪ್ರದರ್ಶನ ಮಾಡದಂತೆ ಒತ್ತಾಯಿಸಿದರು. ಸಿಎಂ ವಿಜಯ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಇಂದಿನಿಂದಲೇ ಚಿತ್ರ ಪ್ರದರ್ಶನ ನಿಲ್ಲಬೇಕು, ಎಲ್ಲ ಬ್ಯಾನರ್ ತೆಗೆಯಬೇಕೆಂದು ಥಿಯೇಟರ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದೆಲ್ಲ ನೊಡಿದರೆ ರಾಜ್ಯದಲ್ಲಿ ಇಂದಿನಿಂದಲೇ 'ಜನನಾಯಗನ್' ಸಿನಿಮಾ ಪ್ರದರ್ಶನಕ್ಕೆ ಶಾಶ್ವತ್ ಬ್ರೇಕ್ ಬೀಳಲಿದೆ.

ಆಗಸ್ಟ್ 3ರಂದು ಸಿಎಂ ವಿಜಯ್‌ ಸಭೆ, ರಾಜ್ಯ ಪ್ರವೇಶ ಕಷ್ಟ?

ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಕಾವೇರಿ ವಿವಾದ ಕುರಿತು ಮಾತುಕತೆ ನಡೆಸಲು ತಮಿಳುನಾಡು ರೈತರ ವಿರೋಧದ ನಡುವೆಯು ಸಿಎಂ ವಿಜಯ್ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಕಾವೇರಿ ಕಿಡಿ ಭುಗಿಲೆದ್ದ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರು ಅವರನ್ನು ಬೆಂಗಳೂರಿಗೆ ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ 3ರಂದು ಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ವಿಜಯ್ ಅವರು ಕಾವೇರಿ ಬಗ್ಗೆ ಚರ್ಚಿಸಲು ಮುಹೂರ್ತ ನಿಗದಿಯಾಗಿದೆ. ಸದ್ಯ ರಾಜ್ಯಾದ್ಯಂತ ಸಿಎಂ ವಿಜಯ್ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಅಂದು ಏನಾಗಲಿದೆ? ಎಂಬ ಕುತೂಹಲ ಹೆಚ್ಚಾಗುತ್ತಿದೆ.

ಆಗಸ್ಟ್ 2ರಂದು ಸರ್ವಪಕ್ಷ ಸಭೆ

ಕರ್ನಾಟಕದಲ್ಲಿ ಆಗಸ್ಟ್ 2ರಂದು ಭಾನುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕಾವೇರಿ ನದಿ ನೀರು ಹಂಚಿಕೆ, ವಿವಾದಕ್ಕೆ ಸಂಬಂಧಿಸಿದಂತೆ 'ಸರ್ವ ಪಕ್ಷಗಳ ಸಭೆ' ಕರೆಯಲಾಗಿದೆ. ಕಾವೇರಿ ಜಲಾನಯನ ಪ್ರದೇಶಗಳ ಸಂಸದರು, ಶಾಸಕರು, ಸಚಿವರು, ಎಂಎಲ್‌ಸಿಗಳು ಹಾಗೂ ಹಿರಿಯ ಮುಖಂಡರು ಈ ಸಭೆ ಕರೆದಿದ್ದಾರೆ. ಅಂದು ಸಹ ಕಾನೂನಾತ್ಮಕವಾಗಿ ಏನೆಲ್ಲ ನಿರ್ಧಾರ ಕೈಗೊಳ್ಳಬಹುದು. ಕಾವೇರಿ ನೀರು ಪ್ರಾಧಿಕಾರ, ಸಮಿತಿಗಳ ಮುಂದೆ ಗಂಭೀರ ವಿಷಯಗಳ ಮನವರಿಕೆ ಮಾಡಿಕೊಡುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಕಾವೇರಿ ನೀರಿಗೆ ಮಾತ್ರವಲ್ಲದೇ ಮೇಕೆದಾಟು ಯೋಜನೆ ಜಾರಿಗೆ ಬಿಡಲ್ಲ ಎಂದು ಖ್ಯಾತೆ ತೆಗೆದ ತಮಿಳುನಾಡಿಗೆ ರಾಜ್ಯ ಸಚಿವರು ಪ್ರತ್ಯುತ್ತರ ನೀಡಿದ್ದಾರೆ. ಕಾವೇರಿ ನದಿ ನೀರು ಸಮಸ್ಯೆಗೆ ಮೇಕದಾಟು ಯೋಜನೆಯೊಂದೆ ಪರಿಹಾರ ಎಂದು ತಿಳಿಸಿದ್ದಾರೆ. ವಿನಃ ಎಲ್ಲದಕ್ಕೂ ತೊಂದರೆ ನೀಡುವುದರಿಂದ ಎರಡು ರಾಜ್ಯಗಳಿಗೆ ಸಮಸ್ಯೆ ಆಗುವುದನ್ನು ಅರಿಯುವಂತೆ ತಮಿಳನಾಡಿಗೆ ಎಂಬಿ ಪಾಟೀಲ್, ಡಿಸಿಎಂ, ವಿಪಕ್ಷ ನಾಯಕರು ಕಿವಿ ಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+