ಕೊಪ್ಪಳ ಸಿಇಒ ರಾಮಚಂದ್ರನ್ ರಿಂದ ಕನ್ನಡ ವಿರೋಧಿ ಆದೇಶ!

Posted By:
Subscribe to Oneindia Kannada

ಕೊಪ್ಪಳ, ಸೆ. 09: ಕರ್ನಾಟಕದ ಸರ್ಕಾರಿ ಆಡಳಿತ ಯಂತ್ರವೇ ಸ್ತಬ್ಧವಾಗಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿರುವ ಸಂದರ್ಭದಲ್ಲಿ ತಮಿಳುನಾಡು ಮೂಲದ ಅಧಿಕಾರಿಯೊಬ್ಬರ ಆದೇಶ ವಿವಾದಕ್ಕೆ ಕಾರಣವಾಗಿದೆ. ಕೊಪ್ಪಳ ಸಿಇಒ ರಾಮಚಂದ್ರನ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಚಂದ್ರನ್ ನೀಡಿದ ಆದೇಶ ಏನು ಮುಂದೆ ಓದಿ...

ಒಂದು ಕಡೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ರೈತ ವಿರೋಧಿ ಟ್ವೀಟ್ ಮಾಡಿ ಬೈಗುಳ ತಿಂದು ಬದಲಾದರೆ, ಇನ್ನೊಂದೆಡೆ ಕೊಪ್ಪಳದ ಸರ್ಕಾರಿ ಅಧಿಕಾರಿ ರಾಮಚಂದ್ರನ್(2012ನೇ ಬ್ಯಾಚಿನ ಐಎಎಸ್ ಅಧಿಕಾರಿ) ಅವರು ಕನ್ನಡ ವಿರೋಧಿ ಅದೇಶ ಹೊರಡಿಸಿ ನಂತರ ಬದಲಾಯಿಸಿದ್ದಾರೆ

Karnataka Bandh : Koppal ZP CEO R Ramachandran order irks Kannadigas

ಕೊಪ್ಪಳದಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ನೀಡದ ತಮಿಳುನಾಡು ಮೂಲದ ಅಧಿಕಾರಿ ವಿರುದ್ಧ ಕನ್ನಡ ಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಂತರ ಸಚಿವ ಎಚ್ಕೆ ಪಾಟೀಲ್ ಕಿವಿಮಾತು ಕೇಳಿ, ಆದೇಶ ರದ್ದುಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯದ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ರೂ, ಕೊಪ್ಪಳ ಜಿಲ್ಲಾಧಿಕಾರಿ ಪ್ರಭಾರ ಅಧಿಕಾರದಲ್ಲಿರುವ ಜಿಲ್ಲಾ ಪಂಚಾಯತಿ ಸಿಇಒ ರಾಮಚಂದ್ರನ್ ಅವರು ರಜೆ ಇಲ್ಲ ಎಂದು ಆದೇಶ ಹೊರಡಿಸಿ ಪರೋಕ್ಷವಾಗಿ ತಮಿಳುನಾಡಿಗೆ ಬೆಂಬಲ ಸೂಚಿಸಿದ್ದರು.

ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳಿ, ಒಂದು ವೇಳೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಕಂಡು ಬಂದರೆ ಆಯಾ ಶಾಲಾ ಮುಖ್ಯಸ್ಥರನ್ನು ಹೊಣೆ ಮಾಡಲಾಗುವುದು ಎಂದು ಆದೇಶ ಹೊರಡಿಸಿದ್ದರು.
ಟಿವಿ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಸಾರದ ಬಳಿಕ ಕೊಪ್ಪಳ ಸಿಇಒ ರಾಮಚಂದ್ರನ್ ಜೊತೆ ಸಚಿವ ಎಚ್ಕೆ ಪಾಟೀಲ್ ಮಾತುಕತೆ ನಡೆಸಿದ್ದಾರೆ. ಕೊನೆಗೂ ಎಚ್ಚೆತ್ತುಕೊಂಡ ಸಿಇಒ ರಾಮಚಂದ್ರನ್ ರಜೆ ರದ್ದು ಆದೇಶವನ್ನ ಹಿಂಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Bandh : Koppal ZP CEO R Ramachandran ordered School and College students should not participate in Karnataka Bandh called by various pro Kannada organisations and he also said no holiday declared to schools. Reportedly Minister HK Patil advised Ramachandran to take back the anti Kannada order.
Please Wait while comments are loading...