Karnataka Bandh: ಕಮಲ್ ಹಾಸನ್ ಬಹಿಷ್ಕರಿಸಿ: ಕರ್ನಾಟಕ ಬಂದ್ ಬಗ್ಗೆ ವಾಟಾಳ್ ನಾಗಾರಾಜ್ ಮಹತ್ವದ ಅಪ್ಡೇಟ್
ಬೆಂಗಳೂರು, ಜೂನ್ 04: ರಾಜ್ಯದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿರುವ ಕಮಲ್ ಹಾಸನ್ ಹೇಳಿಕೆಯ ಕಿಚ್ಚು ಸದ್ಯಕ್ಕೆ ಅಂತ್ಯ ಕಾಣುವಂತೆ ಕಾಣುತ್ತಿಲ್ಲ. ಸ್ವತಃ ಹೈಕೋರ್ಟ್ ಛೀಮಾರಿ ಹಾಕಿದರೂ ಸಹಿತ ಕನ್ನಡಿಗರ ಕ್ಷಮೆ ಕೇಳಲು ಮುಂದಾಗದೇ ಮೊಂಡತನ ತೋರುತ್ತಿರುವ ಕಮಲ್ ಹಾನಸ್ ವಿರುದ್ಧ 'ಕನ್ನಡ ಚಳವಳಿ ವಾಟಾಳ್ ಪಕ್ಷ'ದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಕಿಡಿ ಕಾರಿದ್ದಾರೆ. ಕರ್ನಾಟಕ ಬಂದ್ (Karnataka Bandh) ಹಾಗೂ 'ಥಗ್ ಲೈಫ್' (Thug Life) ಸಿನಿಮಾ ಬಿಡುಗಡೆ, ನಟನ ಬಹಿಷ್ಕಾರ ಕುರಿತು ಅಪ್ಡೇಟ್ ನೀಡಿದ್ದಾರೆ.
'ತಮಿಳಿನಿಂದ ಕನ್ನಡ ಹುಟ್ಟಿದೆ' ಎಂದು ಹೇಳಿದ ಕಮಲ್ ಹಾಸನ್ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ. ಈ ಮಧ್ಯೆ ಕರ್ನಾಟಕ ಬಂದ್‌ಗೆ ಕರೆ ನೀಡುವಂತೆ ವಾಟಾಳ್ ನಾಗರಾಜ್ ಅವರಿಗೆ ಪತ್ರ ಬರೆಯಲಾಗಿದೆ. ಈ ಸಂಬಂಧ ವಾಟಾಳ್ ನಾಗಾರಾಜ್ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಕಮಲ್ ಹಾಸನ್ ಸಿನಿಮಾ ಬಿಡುಗಡೆ ಮಾಡಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಕನ್ನಡದ ಬಗ್ಗೆ ಅಪಮಾನ ಮಾಡಿದ, ತಮಿಳಿನಿಂದ ಕನ್ನಡದ ಹುಟ್ಟಿದೆ ಎಂದು ಹೇಳಿ ಕನ್ನಡಿಗರನ್ನು ಅವಮಾನಿಸಿದ ಕಮಲ್ ಹಾಸನ್ ಇದುವರೆಗೂ ಕ್ಷಮೆ ಕೇಳಿಲ್ಲ. ಹೀಗಾಗ ಅವರ ಸಿನಿಮಾ 'ಥಗ್ ಲೈಫ್' ಕರ್ನಾಟಕದಲ್ಲಿ ಬಿಡುಗಡೆ ಆಗಕೂಡದು. ಯಾವುದೇ ಕಾರಣಕ್ಕೆ ಅದಕ್ಕೆ ಅವಕಾಶ ಕೊಡಬಾರದು. ಆತನನ್ನು ಬಹಿಷ್ಕರಿಸಬೇಕು ಎಂದು ಕಮಲ್ ಹಾಸನ್ ವಿರುದ್ಧ ಏಕವಚನದಲ್ಲಿ ವಾಗ್ದಾಲಿ ನಡೆಸಿದರು.
'ಕರ್ನಾಟಕ ಬಂದ್'ಗೆ ಕರೆ ನೀಡುತ್ತೇನೆ!
ಕಮಲ್ ಹಾಸನ್ ಕನ್ನಡ ಕಡೆಗಣಿಸಿ ಮಾತನಾಡಿರುವುದು ಗಂಭೀರ ಪರಿಸ್ಥಿತಿ ಸೃಷ್ಟಿಸಿದೆ. ಕನ್ನಡದ ಹಿರಿಮೆ, ಕನ್ನಡ ಪ್ರೌಢಿಮೆ ಯಾವದೂ ಅರ್ಥವಾಗದೇ ಏಕಾಎಕಿ ತಮಿಳುನಾಡಿನ ಸಮಾರಂಭವೊಂದರಲ್ಲಿ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿದರುವುದು ಅಪರಾಧ. ಇದರ ಬಗ್ಗೆ ಎಚ್ಚರಿಕೆ ನೀಡಿದರೂ ಕಮಲ್ ಹಾಸನ್ ಆತ ಕ್ಷಮೆ ಕೋರಿಲ್ಲ. ಅವರ ಸಿನಿಮಾ ಬಿಡುಗಡೆ ಮಾಡಿದರೆ 'ಕರ್ನಾಟಕ ಬಂದ್' ಮಾಡಲಾಗುವುದು ಎಂದು ಎಚ್ಚರಿಸಿದರು.

ಕನ್ನಡ, ಕನ್ನಡಿಗರ ಬಗ್ಗೆ ಅಪಮಾನ ತೋರಿದ ವ್ಯಕ್ತಿಯನ್ನು ಕರ್ನಾಟಕದಿಂದ ಬ್ಯಾನ್ ಮಾಡಬೇಕು. ಕನ್ನಡಿಗರು ಕರ್ನಾಟಕದಿಂದ ಬಹಿಷ್ಕರಿಸಬೇಕು ಎಂದು ಕರೆ ನೀಡಿದರು. ಈಗಾಗಲೇ 'ಕರ್ನಾಟಕ ಬಂದ್' ಮಾಡುವಂತೆ ಅವರ ಮೇಲಿರುವ ಒತ್ತಡ ಕುರಿತು ಅವರು ಮಾಹಿತಿ ನೀಡಿದರು.
ಕರ್ನಾಟಕ ಬಂದ್ ಮಾಡಿ: ಜಿಲ್ಲಾ ಸಮಿತಿಗಳ ಒತ್ತಾಯ
ತಮಿಳು ನಟ ಕಮಲಹಾಸನ್ ಕನ್ನಡ ಭಾಷೆಗೆ ಅವಮಾನ ಮಾಡಿ. ಇದುವರೆಗೂ ಕನ್ನಡಿಗರ ಕ್ಷಮೆ ಕೇಳದೆ. ಇರುವುದರಿಂದ ದಯಮಾಡಿ ತಾವು ಕರ್ನಾಟಕ ಬಂದ್ ಗೆ ಕರೆಕೊಡಬೇಕು ಎಂದು ವಾಟಾಳ್ ನಾಗರಾಜ್ ಅವರಿಗೆ ಕೊಪ್ಪಳ ಜಿಲ್ಲಾ ಸಮಿತಿಯ ಬಿ.ಪೀರಮ್ಮದ್ ಹಾಗೂ ಕನ್ನಡ ಪರ ಸಂಘಟನೆಯ ಅಧ್ಯಕ್ಷರು ಒತ್ತಾಯ ಮಾಡಿದ್ದಾರೆ.
ಕಮಲ ಹಾಸನ್ ತಮ್ಮ ಕಾರ್ಯಕ್ರಮ ಮಾಡುವಾಗ ತಮಿಳಿನಿಂದಲೇ ಕನ್ನಡ ಹುಟ್ಟಿದೆ ಎಂದು ಹೇಳಿಕೆ ನೀಡಿ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ. ಜೊತೆಗೆ ಕನ್ನಡಪರ ಸಂಘಟನೆಯ ರಾಜ್ಯದ್ಯಕ್ಷರು ಮುಖಂಡರು ಈ ಹೇಳಿಕೆಯನ್ನು ಖಂಡಿಸುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ತಮಿಳು ನಟ ಕಮಲಹಾಸನ್ ಕನ್ನಡಿಗರನ್ನು ಕ್ಷಮೆ ಕೇಳದೆ. ತಾವು ಮಾಡಿದ ಭಾಷಣವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇಂಥ ನಟರನ್ನು ಕನ್ನಡಿಗರು ಸಹಿಸುವುದಿಲ್ಲ. ಹಾಗಾಗಿ ತಾವು ಕನ್ನಡ ಚಳುವಳಿ ವಾಟಾಳ್ ಪಕ್ಷದ ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ತಾವು ಎಲ್ಲಾ ಕನ್ನಡಪರ ಸಂಘಟನೆಯ ಮುಖಂಡರು ಮತ್ತು ರಾಜ್ಯ ಅಧ್ಯಕ್ಷರನ್ನು ಸಭೆ ಕರೆದು. ತಾವು ಒಂದು ತೀರ್ಮಾನವನ್ನು ತೆಗೆದುಕೊಂಡು. ಕರ್ನಾಟಕ ಬಂದ್ ಗೆ ಕರೆ ಕೊಡಬೇಕೆಂದು ಅವರು ಕೋರಿದರು.












Click it and Unblock the Notifications