Bajrang Dal; ಬಜರಂಗ ದಳ ಬ್ಯಾನ್‌; ಕಾಂಗ್ರೆಸ್‌ ಕೊಟ್ಟ ಭರವಸೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಬಾಗಲಕೋಟೆ,ಮೇ 3: ಕಾಂಗ್ರೆಸ್‌ 2023 ರ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಮತ್ತು ಪಿ.ಎಫ್.ಐಗಳು ಬ್ಯಾನ ಮಾಡುವುದಾಗಿ ರಾಜ್ಯದ ಜನತೆಗೆ ಭರವಸೆಯನ್ನ ನೀಡಿದ್ದು, ಬಿಜೆಪಿಯ ನಾಯಕರು ಕಾಂಗ್ರೆಸ್‌ ವಿರುದ್ದ ಕೆಂಡಾಮಂಡಲರಾಗಿದ್ದಾರೆ.

ಬಜರಂಗ ದಳ ಬ್ಯಾನ್‌ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಕೋಮುವಾದ ಕೆರಳಿಸಿ, ಜಾತಿ ಸಂಘರ್ಷ ಮಾಡುವಂತಹ ಸಂಘಟನೆ ನಿಷೇಧ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ಬಜರಂಗ ದಳ ಬ್ಯಾನ್‌ ಮಾಡುವ ಕಾಂಗ್ರೆಸ್‌ ಪ್ರಣಾಳಿಕೆ ಭರವಸೆಯನ್ನು ಸಮರ್ಥಿಸಿಕೊಂಡಿದ್ದು, ರಾಜ್ಯದಲ್ಲಿ ಕೋಮುವಾದ ಬೆಳೆಸಿ ಜಾತಿ ವಿಷ ಬೀಜ ಬಿತ್ತುವಂತಹ ಸಂಘಟನೆ ಬಜರಂಗ ದಳ ಮತ್ತು ಪಿಎಫ್ ಐ ಸಂಘಟನೆ ನಿಷೇಧ ಮಾಡುತ್ತೇವೆ ಎಂದು ಹೇಳಿದ್ದಾರೆ.

Karnataka Assembly Poll: Siddaramaiah Defended Congress Promise To Ban Bajrang Dal

ಇನ್ನೂ ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ, ತಾಜ್ ಹೋಟೆಲ್ ದಲ್ಲಿ ಇದ್ದುಕೊಂಡು ಅಧಿಕಾರ ನಡೆಸಿದರು, ಇನ್ನೂ ಕಾಂಗ್ರೆಸ್‌ ಶಾಸಕರನ್ನು ಸರಿಯಾಗಿ ಬೇಜವಾಬ್ದಾರಿ ವರ್ತಸಿಕೊಂಡ ಹಿನ್ನಲೆ ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡರು,ಆಗ ಇದನ್ನ ಕಾಯುತ್ತಾ ಇದ್ದ ಬಿಜೆಪಿ ಪಕ್ಷದವರು ಅನೈತಿಕ ವಾಗಿ ಸರ್ಕಾರ ರಚನೆ ಮಾಡಿ ಒಬ್ಬ ಶಾಸಕರನ್ನು 25 ಕೋಟಿ ಹಣ ನೀಡಿ ಖರೀದಿ ಮಾಡಿ ಅಧಿಕಾರ ಹಿಡಿದರು ಎಂದು ಆರೋಪಿಸಿದರು.

ಒಬ್ಬ ಮುಸ್ಲಿಂಗೂ ಬಿಜೆಪಿ ಟಿಕೆಟ್‌ ನೀಡದ ಕುರಿತು ಮಾತನಾಡಿ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಒಬ್ಬರಿಗಾರೂ ಮುಸ್ಲಿಂ, ಕ್ರೈಸ್ತ ಜನಾಂಗದದವರಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ, ಆ ಸಮುದಾಯದವರು ಕನಸು ಮನಸನಲ್ಲಿಯೂ ಬಿಜೆಪಿ ಪಕ್ಷಕ್ಕೆ ಓಟು ಹಾಕುವ ವಿಚಾರ ಮಾಡಬಾರದು. ಜಾತಿಯ ವಿಷ ಬೀಜ ಬಿತ್ತುವಂತಹ ಬಿಜೆಪಿ ಪಕ್ಷದ ವಿರುದ್ಧ ಮತ ಹಾಕುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿಕಾರಿದರು.

ಇನ್ನೂ ನರೇಂದ್ರ‌ ಮೋದಿ ಮಹಾ ನಾಟಕಕಾರ, ಸುಳ್ಳಗಾರರ, ನಾನು ತಿನ್ನಲ್ಲ, ತಿನ್ನಕ್ಕ ಬಿಡಲ್ಲ ಎಂದ ಹೇಳಿ ಎಲ್ಲಇಲಾಖೆಯ ನೇಮಕಾತಿಗೆ, ಪ್ರಮೋಷನ್ ಲಂಚ ಪಡೆಯುತ್ತಿದ್ದಾರೆ. ಇದು 40% ಸರ್ಕಾರ, ರಾಜ್ಯದಲ್ಲಿ ಇಂತಹ ಭ್ರಷ್ಟ ಸರ್ಕಾರ ಎಂದಿಗೂ ನೋಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ ವಾಗ್ದಾಳಿ ನಡೆಸಿದರು.

ಈ ಬಿಜೆಪಿ ಸರ್ಕಾರ ಎಲ್ಲಾ ಇಲಾಖೆಯಲ್ಲಿ 40 ರಷ್ಟು ಕಮಿಷನ್ ಕೇಳುವುದೇ‌ ಬಿಜೆಪಿ ಪಕ್ಷದ ಆಡಳಿತ ಕಾರ್ಯ ವೈಖರಿಯಾಗಿದೆ. ಬಿಜೆಪಿಯ ಹಲವು ಸಚಿವರು ಹಾಗೂ ಶಾಸಕರ ಮೇಲೆ ಸಾಲು ಸಾಲು ಭ್ರಷ್ಟಚಾರದ ಆರೋಪಗಳು ಕೇಳಿ ಬಂದಿವೆ. ಬಿಜೆಪಿ ಶಾಸಕ ಮಾಡಾಳ ಅವರ ಪುತ್ರ ಅಪ್ಪನ ಪರವಾಗಿ ಲಂಚ ತೆಗೆದುಕೊಂಡಿದ್ದು, ಇವೆಲ್ಲಾದಾಖಲಾತಿ ಅಲ್ಲವೇ ಇಂತಹ ಬಂಡ ಮಹಾ ಬಂಡವಾದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಾ ಎಂದು ಕಿಡಿಕಾರಿದರು.

ಚುನಾವಣೆ ಸಮಯದಲ್ಲಿ ಮಾತ್ರ ಬಿಜೆಪಿ ಕೇಂದ್ರ ನಾಯಕರು ಬರುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರಕ್ಕೆ ಬರಲಿ. ಆದರೆ ಅಭಿವೃದ್ಧಿ ಎನು ಮಾಡಿದ್ದಾರೆ. ರಾಜ್ಯದ ಅಭಿವೃದ್ದಿ ಬಗ್ಗೆ ಮಾತನಾಡಲಿ ಎಂದು ಹೇಳಿದರು.

ಈ ಹಿಂದೆ ನಮ್ಮ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡಿದೆ. ನಾನು ಮುಖ್ಯಮಂತ್ರಿ ಇದ್ದಾಗ ರೈತರ ಸಾಲ‌ಮನ್ನಾ ಮಾಡಿದೆ. 5 ವರ್ಷಗಳು 15 ಲಕ್ಷ ಮನೆಗಳನ್ನು ಕಟ್ಟಿಸಿದೆ. ಇವರ ಮನೆ ಹಾಳಾಗಲಿ ಒಂದು ಮನೆಯು ಕಟ್ಟಿಸಿಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+