ಕರ್ನಾಟಕ ವಿಧಾನಸಭಾ ಚುನಾವಣೆ 2023: ಸಿಎಂ ಆಗುವುದು ಹಣೆಯಲ್ಲಿ ಬರೆದಿರಬೇಕು-ಆರ್ ಅಶೋಕ್
ಕರ್ನಾಟಕ ವಿಧಾನಸಭಾ ಚುನಾವಣೆ 2023: ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಕಂದಾಯ ಸಚಿವ ಆರ್ ಅಶೋಕ್ ಉತ್ತರಿಸಿದ್ದಾರೆ.
ಬೆಂಗಳೂರು ಮಾರ್ಚ್ 2: ರಾಜ್ಯದಲ್ಲಿ ಮುಖ್ಯಮಂತ್ರಿ ಆಗುವುದು ಹಣೆಯಲ್ಲಿ ಬರೆದಿರಬೇಕು. ನಾನು ಮುಖ್ಯಮಂತ್ರಿ ಆಗುವುದು ಹಣೆಯಲ್ಲಿ ಇದ್ದರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಯಾವುದೇ ಸ್ಥಾನಮಾನ ಸಿಗಬೇಕು ಅಂದರೆ, ಅದು ಹಣೆಯಲ್ಲಿ ಬರೆದಿರಬೇಕು. ನಾನು ಡಿಕೆ ಶಿವಕುಮಾರ್ ಅವರ ರೀತಿಯಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ಹಪಹಪಿಸುವುದಿಲ್ಲ. ಹಣೆಯಲ್ಲಿ ಬರೆದಿದ್ದರೆ ಆಗುತ್ತೇನೆ ಎಂದು ಆರ್ ಅಶೋಕ್ ಹೇಳಿದ್ದಾರೆ.
ರಾಜ್ಯ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡುವೆ ಮುಂದಿನ ಮುಖ್ಯಮಂತ್ರಿ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಹೆಸರುಗಳು ಕೇಳಿ ಬಂದರೆ ಇತ್ತ ಬಿಜೆಪಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೆಸರು ಕೇಳಿ ಬರುತ್ತಿದೆ. ಈ ಬಗ್ಗೆ ಆರ್ ಅಶೋಕ್ ಅವರನ್ನು ಪ್ರಶ್ನಿಸಿದಾಗ ಅವರು 'ರಾಜ್ಯದಲ್ಲಿ ಮುಖ್ಯಮಂತ್ರಿ ಆಗುವುದು ಹಣೆಯಲ್ಲಿ ಬರೆದಿರಬೇಕು. ನಾನು ಮುಖ್ಯಮಂತ್ರಿ ಆಗುವುದು ಹಣೆಯಲ್ಲಿ ಇದ್ದರೆ ಮುಖ್ಯಮಂತ್ರಿ ಆಗುತ್ತೇನೆ' ಎಂದಿದ್ದಾರೆ.

ನಮ್ಮ ಪಕ್ಷ ಯಾವುದೋ ಕುಟುಂಬದ ಪಕ್ಷ ಅಲ್ಲ. ಆದರೆ ಎಚ್ ಡಿ ಕುಮಾರಸ್ವಾಮಿ ಅವರದ್ದು ಕುಟುಂಬದ ಪಕ್ಷ. ನಮ್ಮದು ರಾಷ್ಟ್ರೀಯ ಪಕ್ಷ.ದೇಶದಲ್ಲಿ ಇರುವ 130 ಕೋಟಿ ಜನರ ಪೈಕಿ ಯಾರು ಬೇಕಾದರೂ ಸಿಎಂ ಆಗಬಹುದು ಯಾರು ಬೇಕಾದರೂ ಪ್ರಧಾನಿ ಆಗಬಹುದು. ಆದರೆ ಜೆಡಿಎಸ್ ದು ಏನು ತೀರ್ಮಾನ ಆಗಬೇಕಾದರೂ ಅವರ ಮನೆಯಲ್ಲೇ ಆಗಬೇಕು ಎಂದು ಈ ಹಿಂದೆ ಜೆಡಿಎಸ್ ಗೆ ತಿರುಗೇಟು ನೀಡಿದರು.
ಬ್ರಾಹ್ಮಣರ ಮೇಲೆ ಬೇರೆ ಜಾತಿ ಎತ್ತಿಕಟ್ಟಿ ಒಡಕು ಮೂಡಿಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಮಾಧ್ಯಮ ಸಮೀಕ್ಷೆಗಳು ಜೆಡಿಎಸ್ 20 ಸ್ಥಾನಕ್ಕೆ ಸೀಮಿತ ಎನ್ನುತ್ತಿವೆ.ಆದರೆ ಅವರು ಮಾತ್ರ 130 ಎನ್ನುತ್ತಾರೆ.ಅದು ಯಾವ ಪರಮಾತ್ಮನ ಸಮೀಕ್ಷೆ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಬಂದರೆ ಅಧಿಕಾರ ಹಿಡಿಯಬಹುದು ಎಂಬ ಭ್ರಮೆಯಲ್ಲಿದ್ದರು.

ಇದುವರೆಗೆ ಯಾವ ಸಿಎಂ ಕೂಡಾ ಜಾತಿ ಬಗ್ಗೆ ಮಾತಾಡಿರಲಿಲ್ಲ. ಕರ್ನಾಟಕ ಬ್ರಾಹ್ಮಣರು ಒಳ್ಳೆಯವರು, ಮಹಾರಾಷ್ಟ್ರದವರು ಕೆಟ್ಟವರು ಎಂದಿದ್ದಾರೆ. ಚುನಾವಣಾ ಓಟ್ ದೃಷ್ಟಿಯಿಂದ ಈ ಮಾತನ್ನು ಆಡಿದ್ದಾರೆ.ಬಿಜೆಪಿಯಲ್ಲಿ ಸಿಎಂ, ಪಿಎಂ ಆಗಬೇಕಂದ್ರೆ ಟ್ಯಾಲೆಂಟ್ ಇರಬೇಕು. ಆದ್ರೆ ಜೆಡಿಎಸ್ ನಲ್ಲಿ ಟ್ಯಾಲೆಂಟ್ ಬೇಡ, ಕುಟುಂಬ ರಾಜಕಾರಣ ಸಾಕು ಎಂದು ಅಶೋಕ್ ತಿರುಗೇಟು ನೀಡಿದರು.












Click it and Unblock the Notifications