ಕರ್ನಾಟಕ ಚುನಾವಣೆ; ಒಟ್ಟು ಮತದಾರರು 5,31,33,054
ಬೆಂಗಳೂರು, ಏಪ್ರಿಲ್ 26; ಕರ್ನಾಟಕ ವಿಧಾನಸಭೆ 2023ರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ 5,31,33,054 ಮತದಾರರು ಹಕ್ಕು ಚಲಾಯಿಸಲು ಅರ್ಹರು. ಒಟ್ಟು 11,71,558 ಯುವ ಮತದಾರರು ಈ ಬಾರಿ ಸೇರ್ಪಡೆಯಾಗಿದ್ದಾರೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಮತದಾನ ನಡೆಯಲಿದೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮತದಾರರ ಪಟ್ಟಿ, ಅಂತಿಮ ಅಭ್ಯರ್ಥಿಗಳ ಮಾಹಿತಿಯನ್ನು ನೀಡಿದರು. ಚುನಾವಣೆಯಲ್ಲಿ 2,427 ಪುರುಷರು, 185 ಮಹಿಳೆಯರು, ಇತರೆ ಒಬ್ಬರು ಸೇರಿದಂತೆ 2,613 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು.

ರಾಜ್ಯದಲ್ಲಿ ಅತಿ ಹೆಚ್ಚು ಎಂದರೆ 24 ಅಭ್ಯರ್ಥಿಗಳು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಅತಿ ಕಡಿಮೆ ಎಂದರೆ 5 ಜನ ಅಭ್ಯರ್ಥಿಗಳು ಯಮಕನಮರಡಿ, ದೇವದುರ್ಗ, ತೀರ್ಥಹಳ್ಳಿ,ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿದ್ದಾರೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ.
ಮತದಾರರ ವಿವರಗಳು; ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ನೀಡಿದ ಮಾಹಿತಿಯಂತೆ ರಾಜ್ಯದ ಸಾಮಾನ್ಯ ಮತದಾರರು 5,30,85,566. ಸೇವಾ ಮತದಾರರು 47,488 ಒಟ್ಟು ಮತದಾರರು 5,31,33,054.

ಪುರುಷ ಮತದಾರರು ಸಾಮಾನ್ಯ ಮತದಾರರು 2,66,82,156, ಸೇವಾ ಮತದಾರರು 45,897 ಒಟ್ಟು ಮತದಾರರು 2,67,28,053. ಮಹಿಳಾ ಮತದಾರರು ಸಾಮಾನ್ಯ ಮತದಾರರು 2,63,98,483, ಸೇವಾ ಮತದಾರರು 1,591 ಒಟ್ಟು ಮತದಾರರು 2,64,00,074. ಇತರೆ ಮತದಾರರು 4,927, ಸೇವಾ ಮತದಾರರು ಇಲ್ಲ. ಒಟ್ಟು ಮತದಾರರು 4,927.
ಈ ಬಾರಿಯ ಚುನಾವಣೆಯಲ್ಲಿ 11,71,558 ಯುವ ಮತದಾರರು ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ. ಇವರಲ್ಲಿ 6,45,140, ಮಹಿಳೆಯರು 5,26,237, ಇತರೆ 181.
ಕರ್ನಾಟಕ ವಿಧಾನಸಭೆ 2023ರ ಅಂತಿಮ ಮತದಾರರ ಪಟ್ಟಿ#karnataka #karnatakaassemblyelections2023 #voterslist #manojkumarmeena #electioncommissionofindia pic.twitter.com/tlqNBkI4Q6
— oneindiakannada (@OneindiaKannada) April 26, 2023
ವಿಶೇಷ ಚೇತನ ಮತದಾರರು. ಪುರುಷರು 3,35,387. ಮಹಿಳೆ 2,35,833. ಇತರೆ 61. ಒಟ್ಟು ಮತದಾರರು 5,71,281. 80 ವರ್ಷ ಮೇಲ್ಪಟ್ಟ ಮತದಾರರು ಪುರುಷ 5,46,487. ಮಹಿಳೆ 6,69,417. ಇತರೆ 16. ಒಟ್ಟು1,215,920. ಅನಿವಾಸಿ ಭಾರತೀಯ ಮತದಾರರು. ಪುರುಷ 2,172. ಮಹಿಳೆ 875. ಇತರೆ 1. ಒಟ್ಟು 3048.
ಮತದಾರರ ಪಟ್ಟಿ: ಚುನಾವಣೆಗೆ ಮತದಾರರ ಭಾವಚಿತ್ರ ಪಟ್ಟಿಯನ್ನು ಬಳಸಲಾಗುತ್ತದೆ. ಮತ್ತು ಮತದಾರರ ಭಾವಚಿತ್ರ ಪಟ್ಟಿಯ ಕಾರ್ಯವು ಶೇ 100ರಷ್ಟು ಪೂರ್ಣಗೊಂಡಿದೆ. ಮತಗಟ್ಟೆಯಲ್ಲಿ ಮತದಾನದ ವೇಳೆ ಮತದಾರರನ್ನು ಗುರುತಿಸುವುದು ಕಡ್ಡಾಯವಾಗಿದ್ದು, ಇಪಿಕ್ ಚೀಟಿ ಒದಗಿಸಿದ ಮತದಾರರನ್ನು ಇಪಿಕ್ ಮೂಲಕ ಗುರುತಿಸಲಾಗುತ್ತದೆ. ಪ್ರಸ್ತುತ ಕರ್ನಾಟಕದಲ್ಲಿ ಇಪಿಕ್ ವಿತರಣೆ ಕಾರ್ಯ ಶೇ 100ರಷ್ಟು ಆಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದೆ.
ನಿರ್ದಿಷ್ಟ ಮತಗಟ್ಟೆಯಲ್ಲಿ ಅವನು/ ಅವಳು ಎಲ್ಲಾ ಮತದಾರರಾಗಿ ದಾಖಲಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಅವನ/ ಅವಳ ಕ್ರಮ ಸಂಖ್ಯೆ ಯಾವುದು ಎಂದು ತಿಳಿಯಲು ಮತದಾರರಿಗೆ ಅನುಕೂಲವಾಗುತ್ತದೆ. ಮತದಾರರ ಚೀಟಿಯನ್ನು ಮತದಾನದ ದಿನಾಂಕದ ಕನಿಷ್ಠ 10 ದಿನಗಳ ಮುಂಚಿತವಾಗಿ ಎಲ್ಲಾ ಅರ್ಹ ಮತದಾರರಿಗೆ ಜಿಲ್ಲಾ ಚುನಾವಣಾ ಅಧಿಕಾರಿಯಿಂದ ವಿತರಿಸಲಾಗುವುದು ಮತ್ತು ವಿತರಣಾ ಪ್ರಕ್ರಿಯೆಯನ್ನು ಅತ್ಯಂತ ಕಠಿಣವಾಗಿ ಡಿಇಒ ಮತ್ತು ಸಾಮಾನ್ಯ ವೀಕ್ಷಕರು ಮಾಡಲಿದ್ದಾರೆ.
ಮತದಾರರ ಚೀಟಿಯ ಗಾತ್ರ, ವಿನ್ಯಾಸ ಮತ್ತು ಸ್ವರೂಪವನ್ನು ಗಣನೀಯವಾಗಿ ಸುಧಾರಿಸಲಾಗಿದ್ದು, ಮತದಾರರ ಗುರುತಿಸುವಿಕೆಗೆ ಅನುಕೂಲವಾಗುವಂತೆ ಚಿತ್ರದ ಗಾತ್ರವನ್ನು ಹೆಚ್ಚಿಸಲಾಗಿದೆ. ಚೀಟಿಯ ಪರಿಣಾಮ ಹೆಚ್ಚಿಸಲು ಚೀಟಿಯ ಹಿಂಭಾಗದಲ್ಲಿ ಮತದಾನ ಕೇಂದ್ರದ ನಕಾಶೆ ಮತ್ತು ಹೆಚ್ಚುವರಿ ಮಾಹಿತಿಯನ್ನು ಒದಗಿಸಲಾಗಿದೆ. ಚೀಟಿ ಉತ್ತಮ ಮುದ್ರಣ ಗುಣಮಟ್ಟವನ್ನು ಹೊಂದಿದೆ.
ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಯಾವ ಭಾಷೆಗಳಲ್ಲಿ ಪ್ರಕಟಿಸಲಾಗಿದೆಯೋ ಆ ಭಾಷೆಗಳಲ್ಲಿ ಮತದಾರರ ಚೀಟಿ ಇರಬೇಕೆಂದು ಎಂದು ನಿರ್ದೇಶಿಸಲಾಗಿದೆ. ಮತದಾರರ ಭಾವಚಿತ್ರದ ಚೀಟಿಯನ್ನು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೂಲಕ ವ್ಯವಸ್ಥಿತವಾಗಿ, ಪರಿಣಾಮಕಾರಿ ವಿತರಣೆ ಮಾಡಲು ಆಯೋಗ ವಿಶೇಷ ಒತ್ತು ನೀಡಿದೆ.












Click it and Unblock the Notifications