Chincholi Constituency : ರಾಜ್ಯ ಆಡಳಿತ ಚುಕ್ಕಾಣೆಗೆ ಸಂಕೇತವಾದ 'ಚಿಂಚೋಳಿ':3 ಪಕ್ಷಗಳು ಮುಖಾ-ಮುಖಿ, ವರದಿ,ವಿಶ್ಲೇಷಣೆ
ಕಲಬುರಗಿ, ಮಾರ್ಚ್ 17: ಕಲ್ಯಾಣ ಕರ್ನಾಟಕ ಭಾಗದ ಕಲುಬರಗಿ ಜಿಲ್ಲೆಯಲ್ಲಿರುವ ಚಿಂಚೋಳಿಯು ತಾಲೂಕು ಕೇಂದ್ರ ಮತ್ತು ವಿಧಾನಸಭಾ ಕ್ಷೇತ್ರವು ಆಗಿದೆ. ತಾಲೂಕು ಕೇಂದ್ರವು ಆಗಿರುವ ಚಿಂಚೋಳಿಯು ಚಿತ್ತಾಪುರ್, ಬೀದರ್, ಸೇಡಮ್, ಹಮ್ನಾಬಾದ್ ಮತ್ತು ತೆಲಂಗಾಣ ರಾಜ್ಯದ ಜಿಹೀರಬಾದ್ ಹಾಗೂ ಇನ್ನಿತರ ಪ್ರದೇಶಗಳನ್ನು ಹಂಚಿಕೊಂಡ ಪಟ್ಟಣವಾಗಿದೆ.
ಈ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರದಲ್ಲಿದೆ. ಕರ್ನಾಟಕದ ಮತ್ತು ತೆಲಂಗಾಣ ಗಡಿ ಭಾಗದಲ್ಲಿರುವ ಕರ್ನಾಟಕದ ಈ ಚಿಂಚೋಳಿಯಲ್ಲಿ ಕನ್ನಡ ಜೊತೆಗೆ ತೆಲುಗು ಭಾಷೆ ಸೇರಿದಂತೆ ಬಹುಭಾಷೆಗಳನ್ನು ಮಾತನಾಡುವವರು ಇಲ್ಲಿ ಹೆಚ್ಚಿದ್ದಾರೆ. ಅರಣ್ಯ ಪ್ರದೇಶವು ಇಲ್ಲಿ ವ್ಯಾಪಿಸಿದ್ದು, ಕೆಲವು ಪ್ರೇಕ್ಷಣೀಯ ಸ್ಥಳ, ಪ್ರಮುಖ ದೇವಸ್ಥಾನಗಳು ಇಲ್ಲಿವೆ.

ಚಿಂಚೋಳಿಯ ರಾಜಕೀಯ ಇತಿಹಾಸ ನೋಡುವುದಾರೆ ಈ ಚಿಂಚೋಳಿ ಕ್ಷೇತ್ರವು ಇದುವರೆಗೆ ಒಟ್ಟು 14 ಬಾರಿ ವಿಧಾನಸಭಾ ಚುನಾವಣೆ ಕಂಡಿದೆ. ಅದರಲ್ಲಿ ಬಹುತೇಕ ಬಾರಿ ಗೆಲ್ಲುವ ಮೂಲಕ ಕಾಂಗ್ರೆಸ್ ಚಿಂಚೋಳಿಯನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿತ್ತು. 2008ರಲ್ಲಿ ಬಿಜೆಪಿ ಇಲ್ಲಿ ಗೆದ್ದಿತಾದರು, ನಿರಂತರವಾಗಿ ಹಿಡಿತ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಇದಾದ ಬಳಿಕ ಮತ್ತೆ ಎರಡು ಭಾರಿ ಕಾಂಗ್ರೆಸ್ ಗೆಲ್ಲವು ಮೂಲಕ ತನ್ನ ಆಳ್ವಿಕೆ ಮುಂದುವರಿಸಿತು. ಆದರೆ ಅದು ಸಹ ಹೆಚ್ಚಿ ದಿನ ನಿಲ್ಲಲಿಲ್ಲ. 2018ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಬಳಿಕ ನಡೆದ ಉಪಚುನಾವಣೆಯಲ್ಲೂ ಅವಿನಾಶ್ ಜಾಧವ್ ಗೆದ್ದು ಬೀಗಿದರು.
2 ಬಾರಿ ಮುಖ್ಯಯಾಗಿದ್ದವರ ಕ್ಷೇತ್ರ ಚಿಂಚೋಳಿ
ಚಿಂಚೋಳಿ ಕ್ಷೇತ್ರದಿಂದ ನಾಲ್ಕು ಬಾರಿ ಚುನಾಯಿತರಾಗಿದ್ದ ವೀರೇಂದ್ರ ಪಾಟೀಲ್ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ನೀಡಿದ್ದರು. ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ, ಸಂವಿಧಾನದ ತಿದ್ದುಪಡಿಗಾಗಿ ತಮ್ಮ ಸಚಿವ ಸ್ಥಾನವನ್ನೇ ಬಿಟ್ಟಿದ್ದ ವೈಜನಾಥ ಪಾಟೀಲ ಅವರೂ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇದುವರೆಗೆ ಈ ಕ್ಷೇತ್ರ 2019 ರಲ್ಲಿ ಒಂದು ಬಾರಿ ಮಾತ್ರ ಉಪಚುನಾವಣೆ ಎದುರಿಸಿದೆ.
ಕಾಂಗ್ರೆಸ್ನಿಂದ ಸತತ ಎರಡು ಬಾರಿ ಆಯ್ಕೆಯಾಗಿದ್ದ ಡಾ.ಉಮೇಶ್ ಜಾಧವ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಚಿಂಚೋಳಿಯಲ್ಲಿ ಒಟ್ಟು ಸುಮಾರು 2 ಲಕ್ಷದಷ್ಟು ಮತದಾರರಿದ್ದಾರೆ. ಈ ಪೈಕಿ ಲಿಂಗಾಯತ ಸಮುದಾಯದ ಮತದಾರರೇ ಹೆಚ್ಚಿದ್ದಾರೆ. ಅವರೇ ಗೆಲುವಿನ ಅಂತಿಮ ಎನ್ನಬಹುದು. ಇಲ್ಲಿ ಸಹ ಜಾತಿವಾರು ಲೆಕ್ಕಾಚಾರ ನಡೆಯುತ್ತದೆ.

ಚಿಂಚೋಳಿ ಗೆದ್ದ ಪಕ್ಷಕ್ಕೆ ರಾಜ್ಯದ ಅಧಿಕಾರವೆಂಬ ನಂಬಿಕೆ
ಚಿಂಚೋಳಿ ಪ್ರತಿನಿಧಿಸಿ ಗೆದ್ದಿದ್ದ ವೀರೇಂದ್ರ ಪಾಟೀಲ ಅವರು ಎರಡು ಬಾರಿ ಮುಖ್ಯಮಂತ್ರಿಯಾದವರು. ಹೀಗಾಗಿ ಕ್ಷೇತ್ರದಿಂದ ಯಾವ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆಯೇ ಆ ಪಕ್ಷ ರಾಜ್ಯದ ಆಡಳಿತ ಚುಕ್ಕಾಣೆ ಹಿಡಿಯಲಿದೆ ಎಂಬ ನಂಬಿಕೆ ರಾಜಕೀಯ ನಾಯಕರಲ್ಲಿದೆ. ಈ ನಂಬಿಕೆ ಹಿಂದಿನಿಂದಲೇ ಬಂದಿರುವಂತಹದ್ದು. ಹೀಗಾಗಿ ರಾಜಕೀಯ ಪಕ್ಷಗಳು ಇಲ್ಲಿ ಗೆಲ್ಲಲ್ಲು ಹೆಚ್ಚು ಶ್ರಮಿಸುತ್ತವೆ. ಜೊತೆಗೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸುತ್ತವೆ. ಹಿಂದೆ ವೀರೇಂದ್ರ ಪಾಟೀಲ, ದೇವಿಂದ್ರಪ್ಪ ಗಾಳಪ್ಪ, ವೀರಯ್ಯ ಸ್ವಾಮಿ, ವೈಜನಾಥ ಪಾಟೀಲ, ಸುನೀಲ್ ವಲ್ಲ್ಯಾಪುರ, ಡಾ.ಅವಿನಾಶ ಜಾಧವ್ ಅವರು ಗೆದ್ದ ಬಳಿಕ ಅವರ ಪಕ್ಷಗಳೇ ಅಧಿಕಾರಕ್ಕೆ ಬಂದಿವೆ ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.
ಮೂರು ಪಕ್ಷಗಳ ನೇರಾ ಹಣಾಹಣಿ
ಈ ಪ್ರತಿಷ್ಠೆಯ ಕಣದಿಂದಲೇ ಗೆಲ್ಲಬೇಕೆಂಬ ಹಠ ಪ್ರತಿ ಚುನಾವಣೆಯಂತೆ ಈ ಚುನಾವಣೆಯಲ್ಲೂ ಎಲ್ಲ ಪಕ್ಷಗಳಲ್ಲು ಕಂಡು ಬಂದಂತಿದೆ. ಹೀಗಾಗಿಯೇ ಈ ಭಾರಿ ಪ್ರಮುಖ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನೇರ ಮುಖಾ ಮುಖಿ ಆಗಲಿವೆ. ಈ ಸಲ ಜೆಡಿಎಸ್ ಸಹ ಪಂಚರತ್ನ ಯಾತ್ರೆ ಮೂಲಕ ಈ ಭಾಗದ ಜನರನ್ನು ಸೆಳೆದಿದ್ದಾರೆ. ಗೆಲುವಿಗಾಗಿ ಶಕ್ತಿ ಪ್ರದರ್ಶನಕ್ಕೆ ಜೆಡಿಎಸ್ ಸಜ್ಜಾಗಿದೆ.
ಚುನಾವಣೆ ಮತ್ತು ಉಪಚುನಾವಣೆ ಎರಡರಲ್ಲೂ ವಿಜಯ ಸಾಧಿಸಿದ್ದ ಬಿಜೆಪಿಯ ಅವಿನಾಶ್ ಜಾಧವ್ ಅವರಿಗೆ ಈ ಬಾರಿ ಪಕ್ಷದಿಂದ ಟಿಕೆಟ್ ಬಹುತೇಕ ಖಚಿತ ಎನ್ನಲಾಗಿದೆ. ಅದಕ್ಕೆ ಉಮೇಶ್ ಜಾಧವ ಅವರ ಪ್ರಭಾವವು ಇರಲಿದೆ. ಇತ್ತ ಜೆಡಿಎಸ್ ಕಲಬುರಗಿ ಭಾಗದ ಜನರನ್ನು ತಲುಪಿತ್ತು. ಈ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಂಜೀವನ ಯಾಕಾಪುರ ಅವರಿಗೆ ಈ ಸಲ ಟಿಕೆಟ್ ನೀಡುವುದನ್ನು ಖಚಿತಪಡಿಸಿದೆ. ಇನ್ನೂ ಪಂಜಾರ ಸಮುದಾಯದ ಮತಗಳನ್ನು ಕಸಿಯುವ ಮೂಲಕ ಬಿಜೆಪಿ ವಿರುದ್ಧ ಸೆಟೆದು ನಿಲ್ಲಲು ಕಾಂಗ್ರೆಸ್‌ನಲ್ಲಿ ಕಾತರ ಹೆಚ್ಚಾಗಿದೆ. ಹೀಗಾಗಿ ಇಲ್ಲಿ ಆ ಸಮುದಾಯದ ಸುಬಾಷ ರಾಠೋಡ ಅವರನ್ನು ಕಣಕ್ಕಿಳಿಸಲು ಸಜ್ಜಾಗಿದೆ.

ಸದ್ಯದ ಬೆಳವಣಿಗೆ ನೋಡಿದರೆ ಚಿಂಚೋಳಿಯಲ್ಲಿ ಮೂರು ಪಕ್ಷಗಳು ಮುಖಾ ಮುಖಿಯಾಗಲಿವೆ. ನೇರ ಜಿದ್ದಾ ಜಿದ್ದಿ ನಡೆಯಲಿದೆ. ಇಲ್ಲಿ ಬಂಜಾರ ಸಮುದಾಯವೇ ಎಲ್ಲ ಪಕ್ಷಗಳ ಗುರಿ. ಬಂಜಾರ ಸೇರಿದಂತೆ ಪ್ರಮುಖ ಸಮುದಾಯದ ಮತಗಳು ಯಾರ ಪರವಾಗಿರಲಿವೆ ಎಂದು ಕಾದು ನೋಡಬೇಕಿದೆ.
-
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ -
Jowar Price: ಕರ್ನಾಟಕದ ಮಾರುಕಟ್ಟೆಗಳಲ್ಲಿ ಜೋಳದ ದರ ಏರಿಳಿತ; ಇಲ್ಲಿದೆ ಜಿಲ್ಲಾವಾರು ಬೆಲೆ ಪಟ್ಟಿ -
Karnataka Rain: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ: ಐಎಂಡಿ ವರದಿ -
Zomato: ಬೆಂಗಳೂರು Vs ಚೆನ್ನೈ ಸಾಂಬಾರ್ ಎಂದ ಝೊಮ್ಯಾಟೊ; ನಮಗೆ ಸ್ವಿಗ್ಗಿ ಸಾಕು ಎಂದ ನೆಟ್ಟಿಗರು -
ವಾರ ಭವಿಷ್ಯ: ಈ ರಾಶಿಯ ಪ್ರೇಮಿಗಳು ಮತ್ತೆ ಒಂದಾಗುತ್ತಾರೆ! ಸೂರ್ಯನಿಗೆ ಅರ್ಘ್ಯದಿಂದ ಭಾಗ್ಯ ಬದಲಾವಣೆ -
SSLC ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್: ಸರ್ಕಾರದ ದಿಢೀರ್ ನಿರ್ಧಾರಕ್ಕೆ ಖಾಸಗಿ ಶಾಲೆಗಳ ತೀವ್ರ ವಿರೋಧ -
ರಾಜ್ಯದಲ್ಲಿ ತೃತೀಯ ಭಾಷೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ', ಆದರೆ ಕೇಂದ್ರದಿಂದ ಕಡ್ಡಾಯದ ಹೊಸ ಆದೇಶ : ರಾಜೀವ ಹೆಗಡೆ ಬರಹ -
RCB Vs CSK ಮ್ಯಾಚ್ ನೋಡಲು ಬರೋಬ್ಬರಿ 1.46 ಲಕ್ಷ ಕಳೆದುಕೊಂಡ ಕಳೆದುಕೊಂಡ ಟೆಕ್ಕಿ, ಐಪಿಎಲ್ ಅಭಿಮಾನಿಗಳೇ ಹುಷಾರ್ -
April 6 Horoscope: ಈ ರಾಶಿಗಳಿಗೆ ಲಾಭ, ಕೆಲವರಿಗೆ ಎಚ್ಚರಿಕೆ ಸೂಚನೆ -
ಏಪ್ರಿಲ್ 8ಕ್ಕೆ ದ್ವಿತೀಯ PUC ಫಲಿತಾಂಶ? ಶಿಕ್ಷಣ ಇಲಾಖೆಯ ಮಹತ್ವದ ಅಪ್ಡೇಟ್ ಇಲ್ಲಿದೆ












Click it and Unblock the Notifications