• search

ಬಿಜೆಪಿ ಬತ್ತಳಿಕೆಯಲ್ಲಿರುವ ಶಕ್ತಿಶಾಲಿ ಬಾಣ 'ಮಹದಾಯಿ!'

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  2018 ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಭಾವಶಾಲಿ ಅಸ್ತ್ರಗಳಲ್ಲಿ 'ನೀರು' ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರ ನೀರಿನ ಸಮಸ್ಯೆಯನ್ನು ನೀಗಿಸುವ ಮಹದಾಯಿ ಯೋಜನೆ ಇದೀಗ ರಾಜಕೀಯ ಪಕ್ಷಗಳಿಗೆ ಮತಗಳಿಸುವ ಸಾಧನವೂ ಆಗಿದೆ.

  ಏನಿದು ಕಳಸಾ-ಬಂಡೂರಿ ಯೋಜನೆ?

  ಕಳೆದ ಎರಡೂವರೆ ವರ್ಷಗಳಿಂದ ಕಳಸಾ ಬಂಡೂರಿ ನಾಲೆ ಜೋಡಣೆ ಕುರಿತು ಹೋರಾಟ ನಡೆಯುತ್ತಲೇ ಇದ್ದರೂ ತಲೆಕೆಡಿಸಿಕೊಳ್ಳದವರೆಲ್ಲ ಈಗ ಏಕಾಏಕಿ ಮಹದಾಯಿಯನ್ನು ಅಪ್ಪಿಕೊಳ್ಳುತ್ತಿರುವುದೇಕೆ ಎಂಬುದು ಗುಟ್ಟಾಗಿ ಉಳಿದಿಲ್ಲ.

  ಯೋಗಿ ಆದಿತ್ಯನಾಥ ಮಾತಿನ ಓಘಕ್ಕೆ ಉಘೇ ಎಂದ ಹುಬ್ಬಳ್ಳಿ ಮಂದಿ

  ಇದೀಗ ಗೋವಾ ಸರ್ಕಾರದೊಂದಿಗೆ ಮಾತನಾಡಿ ಮಹದಾಯಿ ಕುರಿತ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಮುಂದಾಗಿರುವ ಬಿಜೆಪಿ, ಈ ಬಾರಿಯ ಚುನಾವಣೆಗೆ ನೀರನ್ನೇ ತನ್ನ ಬತ್ತಳಿಕೆಯ ಪ್ರಮುಖ ಬಾಣವನ್ನಾಗಿಸಿಕೊಂಡರೆ ಅಚ್ಚರಿಯೇನಿಲ್ಲ.

  ಗೋವಾದಿಂದಲೂ ಧನಾತ್ಮಕ ಪ್ರತಿಸ್ಪಂದನೆ

  ಗೋವಾದಿಂದಲೂ ಧನಾತ್ಮಕ ಪ್ರತಿಸ್ಪಂದನೆ

  ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರೂ, ಈ ಸಮಸ್ಯೆಯನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧವಿರುವುದಾಗಿ ಹೇಳಿರುವುದು ಬಿಜೆಪಿಗೆ ಮತ್ತಷ್ಟು ಬಲ ನೀಡಿದೆ.ನದಿ ನೀರಿನ ಹಂಚಿಕೆ ವಿವಾದ ಮಹಾದಾಯಿ ನದಿ ನ್ಯಾಯಾಧಿಕರಣದ ಮುಂದಿದ್ದು, ನ್ಯಾಯಾಧಿಕರಣದ ತೀರ್ಮಾನಕ್ಕೆ ಗೋವಾ ಬದ್ಧವಾಗಿದೆ ಎಂದು ಸಹ ಪರಿಕ್ಕರ್ ಹೇಳಿದ್ದರು. ಕಳಸಾ ಬಂಡೂರಿ ಯೋಜನೆಯ ಅನುಷ್ಠಾನದ ಕ್ರೆಡಿಟ್ ಅನ್ನು ಬಿಜೆಪಿ ತೆಗೆದುಕೊಂಡರೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ ಬಹುದೊಡ್ಡ ಹೊಡೆತ ಬೀಳುವುದು ಖಂಡಿತ. ಪ್ರಾಣ ಉಳಿಸುವ ಜೀವನದಿ ಇದೀಗ ರಾಜಕೀಯದ ದಾಳವಾಗಿ ಬದಲಾಗಿರುವುದು ಸುಳ್ಳಲ್ಲ!

  ಮಹಾದಾಯಿ ಬಿಜೆಪಿಗೇಕೆ ಮಹತ್ವ?

  ಮಹಾದಾಯಿ ಬಿಜೆಪಿಗೇಕೆ ಮಹತ್ವ?

  ಕರ್ನಾಟಕದ ಜನರಿಗೆ, ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ 'ನೀರು' ಎಂಬುದು ಒಂದು ಭಾವನಾತ್ಮಕ ವಿಷಯ. ನೀರಿನ ಕುರಿತು ಎದ್ದ ವಿವಾದಗಳಿಗೆಲ್ಲ ಕರ್ನಾಟಕದ ಜನರು ನೀಡಿರುವ ಪ್ರತಿಕ್ರಿಯೆ ಹಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಲ್ಲಂತೂ ಕುಡಿಯುವ ನೀರಿನ ಸಮಸ್ಯೆಯನ್ನು ಈಡೇರಿಸುವ ಭಗೀರಥನಿಗೆ ಮಾತ್ರವೇ ಜನ ಮತ ನೀಡುವುದು ಪಕ್ಕಾ ಎಂಬಂತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಯಾವ ಪ್ರಚಾರ ಕಾರ್ಯಗಳೂ ಹೆಚ್ಚೇನೂ ಜನರನ್ನು ಸೆಳೆಯುತ್ತಿಲ್ಲವಾದ್ದರಿಂದ ಈ ವಿಷಯವನ್ನೇ ಸೂಕ್ತವಾಗಿ ಬಳಸಿಕೊಳ್ಳುವುದು ಅದಕ್ಕೆ ಮಹತ್ವದ್ದಾಗಿದೆ.

  ಉತ್ತರ ಕರ್ನಾಟಕದ ಆಧಿಪತ್ಯ ಸ್ಥಾಪನೆಗೆ...

  ಉತ್ತರ ಕರ್ನಾಟಕದ ಆಧಿಪತ್ಯ ಸ್ಥಾಪನೆಗೆ...

  ಉತ್ತರ ಕರ್ನಾಟಕ ಭಾಗದಲ್ಲಿರುವ ಒಟ್ಟು 50 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಪಾಲನ್ನು ಬಿಜೆಪಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರೂ, ಅವನ್ನೆಲ್ಲ ಉಳಿಸಿಕೊಳ್ಳುವುದಕ್ಕೆ ಬಿಜೆಪಿಗೆ ಈ ವಿಷಯವನ್ನು ಬಳಸಿಕೊಳ್ಳುವುದು ಅನಿವಾರ್ಯ. ಉತ್ತರ ಕರ್ನಾಟಕದ ಜನರನ್ನು ಸೆಳೆಯುವುದಕ್ಕೆ ಎಲ್ಲಾ ಪಕ್ಷಗಳಿಗೂ ಸಿಕ್ಕ ಅತ್ಯುತ್ತಮ ಅಸ್ತ್ರ ನೀರೇ ಆಗಿದ್ದರೂ, ಗೋವಾದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಇದರ ಕ್ರೆಡಿಟ್ ಅನ್ನು ಬಿಜೆಪಿ ತೆಗೆದುಕೊಳ್ಳುವಂತೆ ಮಾಡುವುದು ಕಷ್ಟವಾಗಲಾರದು!

  ಏನಿದು ಮಹಾದಾಯಿ ಪ್ರಕರಣ?

  ಏನಿದು ಮಹಾದಾಯಿ ಪ್ರಕರಣ?

  ಮಹಾದಾಯಿ ನದಿ ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿನಲ್ಲಿ ಹರಿಯುತ್ತದೆ. ಕರ್ನಾಟಕದ ಬೆಳಗಾವಿಯಲ್ಲಿ ಹುಟ್ಟುವ ಈ ನದಿ, ಕರ್ನಾಟಕದಲ್ಲಿ 29 ಕಿ.ಮೀ. ಮತ್ತು ಗೋವಾದಲ್ಲಿ 52ಕಿ.ಮೀ. ಹರಿಯುತ್ತದೆ. ಈ ನದಿಯು ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಮಹದಾಯಿ ನೀರನ್ನು ನೀರನ್ನು ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ಹರಿಸಿ, ಉತ್ತರ ಕರ್ನಾಟಕ ಭಾಗದ ಜನರ ನೀರಿನ ಸಮಸ್ಯೆಯನ್ನು ನೀಗಿಸಲು ಯೋಜನೆ ರೂಪಿಸಲಾಗಿದೆ. ಆದರೆ ಗೋವಾ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಯೋಜನೆ ಇನ್ನೂ ಅನುಷ್ಠಾನವಾಗಿಲ್ಲ. ಆದರೆ ಇದೀಗ ಗೋವಾ ಸರ್ಕಾರವೂ ಈ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿರುವುದು ಉತ್ತರ ಕರ್ನಾಟಕ ಭಾಗದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Water has become a key word for the BJP in Karnataka. As the party prepares to face the electorate ahead of the Karnataka Assembly Elections 2018, raising the water issue becomes exceptionally necessary at least in Northern Karnataka region.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more