ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟರ್, ಫೇಸ್ಬುಕ್ಕಿನಲ್ಲಿ ಸಕ್ರಿಯವಾಗುವಂತೆ ಕಾರ್ಯಕರ್ತರಿಗೆ ಸೂಚನೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19 : ಕಾಂಗ್ರೆಸ್ ನಾಯಕರು ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಲಿದ್ದಾರೆಯೇ?. ಸರ್ಕಾರದ ಸಾಧನೆಗಳನ್ನು ಸುಲಭವಾಗಿ ಜನರಿಗೆ ತಲುಪಿಸಲು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸೂಚನೆ ನೀಡಿದ್ದಾರೆ.

ಶಾಸಕರು, ಸಂಸದರು, ಸೋತ ಅಭ್ಯರ್ಥಿಗಳು, ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಪರಮೇಶ್ವರ ಅವರು ಈ ಕುರಿತು ಪತ್ರ ಬರೆದಿದ್ದಾರೆ. ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯಬೇಕು, ಖಾತೆ ಹೊಂದಿದವರು ಸಕ್ರಿಯರಾಗಬೇಕು ಎಂದು ಪರಮೇಶ್ವರ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮೋದಿ ವಿರುದ್ಧ ಅನಾಗರಿಕ ಪದ ಬಳಕೆ, ವಿವಾದದಲ್ಲಿ ಮನೀಷ್ ತಿವಾರಿಮೋದಿ ವಿರುದ್ಧ ಅನಾಗರಿಕ ಪದ ಬಳಕೆ, ವಿವಾದದಲ್ಲಿ ಮನೀಷ್ ತಿವಾರಿ

Karnataka assembly elections 2018 : Congress to use social media effectively

ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದಾಗ, ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದಾಗ ಜಾಲತಾಣಗಳ ಮೂಲಕವೇ ಉತ್ತರ ನೀಡಬೇಕು. ಜಾಲತಾಣಗಳ ಮೂಲಕ ಜನರನ್ನು ಬೇಗ ತಲುಪಬಹುದಾಗಿದೆ. ಆದ್ದರಿಂದ, ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಬೇಕು ಎಂದು ಪರಮೇಶ್ವರ ನಿರ್ದೇಶನ ನೀಡಿದ್ದಾರೆ.

ಸೆ.13ರಿಂದ ಮನೆ-ಮನೆಗೆ ಕಾಂಗ್ರೆಸ್ ಕಾರ್ಯಕ್ರಮಸೆ.13ರಿಂದ ಮನೆ-ಮನೆಗೆ ಕಾಂಗ್ರೆಸ್ ಕಾರ್ಯಕ್ರಮ

ಬೂತ್ ಮಟ್ಟದಿಂದ ಪ್ರದೇಶ ಕಾಂಗ್ರೆಸ್ ಸಮಿತಿಯ ತನಕ, ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಅಂಗ ಸಂಸ್ಥೆಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಬೇಕು ಎಂದು ಪರಮೇಶ್ವರ ಸೂಚಿಸಿದ್ದಾರೆ.

ಕಳೆದ ವಾರ ಕರ್ನಾಟಕಕ್ಕೆ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸಾಮಾಜಿಕ ಜಾಲತಾಣಗಳನ್ನು ಸಕ್ರಿಯವಾಗಿ ಉಪಯೋಗಿಸಬೇಕು ಎಂದು ಸೂಚನೆ ನೀಡಿದ್ದರು. ವೇಣುಗೋಪಾಲ್ ಅವರ ಜೊತೆಗಿನ ಸಭೆಯ ಬಳಿಕ ಪರಮೇಶ್ವರ ಅವರು ಈ ಪತ್ರ ಬರೆದಿದ್ದಾರೆ.

'ಸಿದ್ದು ಸಾಕು': ಸರ್ಕಾರದ ವೈಫಲ್ಯಕ್ಕೆ ಟ್ವಿಟ್ಟಿಗರಿಂದ ಕೂಗು

5 ಸಾವಿರ ವಾಟ್ಸಪ್ ಗುಂಪು : ಸರ್ಕಾರ ಮತ್ತು ಪಕ್ಷ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು 5 ಸಾವಿರ ವಾಟ್ಸಪ್ ಗುಂಪುಗಳನ್ನು ಆರಂಭಿಸಲು ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ಘಟಕ ತೀರ್ಮಾನಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು ಎಂದು ನಾಲ್ಕು ವಿಭಾಗಗಳನ್ನು ಮಾಡಿ ವಾಟ್ಸಪ್ ಗ್ರೂಪ್ ರಚನೆ ಮಾಡಲಾಗುತ್ತದೆ.

English summary
Karnataka Pradesh Congress Committee (KPCC) president Dr.G.Parameshwara directed all party leaders to active on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X