Karnataka Election Results 2023: ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ, ಹೇಗಿರಲಿದೆ ಪಕ್ರಿಯೆ?
ಬೆಂಗಳೂರು, ಮೇ 12: ಕರ್ನಾಟಕ ಚುನಾವಣಾ 2023 ಫಲಿತಾಂಶ ಹೋರ ಬೀಳಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ. ನಾಳೆ ಮೇ 13ರಂದು ಶನಿವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಹಾಗಾದರೆ ಈ ಮತ ಎಣಿಕೆ ಹೇಗೆ ನಡೆಯಲಿದೆ ಎಂಬ ಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ರಾಜ್ಯ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆ ಮೇ 10ರಂದು ಸಂಜೆಗೆ ಪೂರ್ಣಗೊಂಡಿದೆ. ಮತದಾನ ಮುಗಿದ ನಂತರ ವಿವಿಪ್ಯಾಟ್, ಇವಿಎಂ ಸೇರಿದಂತೆ ಮತಯಂತ್ರಗಳನ್ನು ಸ್ಟ್ರಾಂಗ್ ರೂಮಿನಲ್ಲಿ ಭದ್ರವಾಗಿ ಇಡಲಾಗಿದೆ. ಕಳೆದ ಮೂರು ದಿನದಿಂದ ಸೂಕ್ತ ಭದ್ರತೆ ಒದಗಿಸಲಾಗಿದೆ.

ಮತ ಎಣಿಕೆಗೆ ಚುನಾವಣಾಧಿಕಾರಿಗಳು ವಿಶಾಲವಾದ ಕಟ್ಟಡ, ಸರ್ಕಾರಿ ಶಾಲಾ ಕಾಲೇಜಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಎಣಿಕೆ ದಿನ ಎಣಿಕೆಗೆ ನೇಮಕಗೊಂಡ ಅಧಿಕಾರಿಗಳು ಬೆಳಗ್ಗೆ 5 ಗಂಟೆಗೇ ನಿಗದಿತ ಮತ ಎಣಿಕೆ ಕೇಂದ್ರಗಳನ್ನು ತಲುಪಿರುತ್ತಾರೆ. 6 ಗಂಟೆ ಹೊತ್ತಿಗೆ ಸಿದ್ದಪಡಿಸಿದ ಟೇಬಲ್‌ಗಳ ಮುಂದೆ ತಮ್ಮ ಸ್ಥಾನ ಅಲಂಕರಿಸುತ್ತಾರೆ. ಈ ವೇಳೆ ಕೇಂದ್ರ ಆವರಣದಲ್ಲಿ ಸೂಕ್ತ ಭದ್ರತೆ ಒದಗಿಲಾಗಿರುತ್ತದೆ. ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್ ಇಲ್ಲವೇ ಸಹಾಯಕ ಚುನಾವಣಾಧಿಕಾರಿಗಳು ಮತ ಎಣಿಕೆ ಕೇಂದ್ರಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.
ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ
ನಾಳೆ ಬೆಳಗ್ಗೆ 8 ಗಂಟೆಗೆ ಚುನಾವಣಾ ಮೇಲ್ವಿಚಾರಣೆಯಲ್ಲಿ ಮತದಾನ ಆರಂಭವಾಗುತ್ತದೆ. ಮೊದಲು ಅಂಚೆ ಮತಗಳನ್ನು ಅಧಿಕಾರಿಗಳು ಎಣಿಕೆ ಮಾಡುತ್ತಾರೆ. ನಂತರ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತಗಳ ಎಣಿಕೆ ಶುರು ಮಾಡುತ್ತಾರೆ. ಎಂಟು ಗಂಟೆಯಿಂದ ಆರಂಭವಾಗುವ ಮತ ಎಣಿಕೆಯಿಂದ ಮಧ್ಯಾಹ್ನದ ವೇಳೆಗಾಗಲೇ ಪೂರ್ಣ ಚಿತ್ರಣ ಸಿಗಲಿದೆ.
ಯಾವ ಪಕ್ಷಕ್ಕೆ ಹೆಚ್ಚು ಮತಗಳು, ಯಾರಿಗೆ ಮುನ್ನಡೆ ಮತ್ತು ಹಿನ್ನಡೆ, ಅದರ ಆಧಾರದಲ್ಲಿ ರಾಜಕೀಯ ಪಕ್ಷಗಳ ಮುಂದಿನ ನಡೆ ಸೇರಿದಂತೆ ಅಂತಿಮ ಅಂಶಗಳು ರಾಜ್ಯದ ಜನರಿಗೆ ಸಿಗುತ್ತವೆ. ಸಂಜೆ ಹೊತ್ತಿಗೆ ಚುನಾವಣಾ ಆಯೋಗದಿಂದಲೇ ಅಧಿಕೃತ ಮಾಹಿತಿ ಹೊರ ಬೀಳಲಿದೆ ಎಂದು ಟಿವಿನೈನ್ ವರದಿ ಮಾಡಿದೆ.
ಚುನಾವಣೆಯಲ್ಲಿ ಗೆದ್ದ ರಾಜ್ಯ ಅಧಿಕಾರ ಗದ್ದುಗೆ ಏರಲು ತಿಂಗಳುಗಳ ಮೊದಲಿಂದಲೂ ಕಾರ್ಯ ಪ್ರವೃತ್ತರಾಗಿದ್ದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಘಟಾನುಗಟಿ ನಾಯಕರು ಮತದಾನದ ನಂತರ ಏಕದಿನ ಬ್ರೇಕ್ ಪಡೆದಿದ್ದರು ಎನ್ನಲಾಗಿದೆ. ಇದೀಗ ಮತ ಎಣಿಕೆಗೆ ಒಂದು ಮುನ್ನವೇ ಮತ್ತೆ ಅಲರ್ಟ್ ಆಗಿದ್ದಾರೆ. ಬಹುಮತ ಬರದಿದ್ದಾರೆ ಮುಂದೇನು ಎಂದು ರಣತಂತ್ರ, ಒಂದು ಪ್ಲಾನ್ ವಿಫಲವಾದರೆ ಮತ್ತೊಂದು ಪ್ಲಾನ್ ಅನ್ನು ಈಗಲೇ ರೆಡಿ ಮಾಡಿಕೊಂಡಿದ್ದಾರೆ. ಮತ ಎಣಿಕೆ ಪೂರ್ಣಗೊಳ್ಳುವುದನ್ನೆ ರಾಜಕೀಯ ಪಕ್ಷಗಳು ಕಾಯುತ್ತಿವೆ.












Click it and Unblock the Notifications