ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ವಿಧಾನಸಭೆ ಚುನಾವಣೆ 2023: 36 ಸದಸ್ಯರ ಸಮಿತಿ ರಚಿಸಿದ ಎಐಸಿಸಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಕರ್ನಾಟಕದಲ್ಲಿ ಮುಂದಿನ ವರ್ಷ 2023ರ ಮೇ ತಿಂಗಳ ಆಸುಪಾಸಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲ್ವಿಚಾರಣೆ ಗಾಗಿ ಸಮಿತಿ ರಚಿಸಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ ಕೆ.ಸಿ.ವೇಣುಗೋಪಾಲ ಅವರು ಈ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯಲ್ಲಿ ಒಟ್ಟು 36ಮಂದಿ ಸದಸ್ಯರಿದ್ದಾರೆ. ಅವರೆಲ್ಲರು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ 2023ರ ಮೇಲ್ವಿಚಾರಣೆ ಮಾಡಲಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ)ಅಡಿ ಚುನಾವಣೆ ಟಿಕೆಟ್‌ಗಾಗಿ ಬೇಡಿ, ಮನವಿಗಳನ್ನು ಪರಿಶೀಲಿಸಿ ಒಪ್ಪಿಗೆ ನೀಡಲಿದ್ದಾರೆ ಎಂದು ವರಿಷ್ಠರು ತಿಳಿಸಿದ್ದಾರೆ.

Breaking; ಮಾಜಿ ಶಾಸಕ, ಬಿಜೆಪಿ ನಾಯಕ ಗುರುವಾರ ಕಾಂಗ್ರೆಸ್ ಸೇರ್ಪಡೆ Breaking; ಮಾಜಿ ಶಾಸಕ, ಬಿಜೆಪಿ ನಾಯಕ ಗುರುವಾರ ಕಾಂಗ್ರೆಸ್ ಸೇರ್ಪಡೆ

ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟು ಮಂದಿ ಹಿರಿಯರಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್‌ ಹೈಕಮಾಂಡ್ ಯಾರಿಗೂ ಬೇಧ ಮಾಡದಂತೆ ಶಾಸಕರು, ಸಂಸದರು, ಹಿರಿಯ ನಾಯಕರು ಸೇರಿದಂತೆ 36ಮಂದಿಯ ಸಮಿತಿ ರಚಿಸುವ ಮೂಲಕ ಎಲ್ಲರನ್ನು ಪರಿಗಣನೆಗೆ ತೆಗೆದುಕೊಂಡಿರುವುದನ್ನು ಈ ಮೂಲಕ ಬಹಿರಂಗಪಡಿಸಿದೆ. ಸಮಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಅಗ್ರಸ್ಥಾನ ನೀಡಿದೆ.ಈ ಬೃಹತ್ ಸಮಿತಿಯಲ್ಲಿ ಯಾರಿದ್ದಾರೆ ಎಂದು ನೋಡುವುದಾದರೆ.

Karnataka Assembly Election 2023: 36 member committee formed by AICC

ಸಮಿತಿ ಸದಸ್ಯರ ಹೆಸರುಗಳು

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿ ಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಮುಖಂಡರಾದ ಎಂ.ಬಿ ಪಾಟೀಲ್, ದಿನೇಶ್ ಗುಂಡೂರಾವ್, ಎಚ್‌.ಕೆ. ಪಾಟೀಲ್, ಕೆಎಚ್‌ ಮುನೇನಕೋಪ್ಪ, ವೀರಪ್ಪ ಮೊಯ್ಲಿ, ಜಿ.ಪರಮೇಶ್ವರ್, ಆರ್‌.ವಿ.ದೇಶಪಾಂಡೆ, ಅಲ್ಲಂ ವೀರಭದ್ರಪ್ಪ, ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಆರ್.ಧ್ರುವ ನಾರಾಯಣ್, ಸಲೀಂ ಅಹ್ಮದ್, ಕೆ.ರೆಹಮಾನ್ ಖಾನ್, ಮಾರ್ಗರೇಟ್ ಆಳ್ವಾ, ಕೆ.ಜೆ.ಜಾರ್ಜ್‌, ಯು.ಟಿ.ಖಾದರ್, ಕೆ.ಗೋವಿಂದರಾಜ್ ಮತ್ತು ಎಚ್‌.ಸಿ.ಮಹಾದೇವಪ್ಪ.

ಎನ್. ಚೆಲುವರಾಯ ಸ್ವಾಮಿ, ಬಸವರಾಜ ರಾಯರೆಡ್ಡಿ, ಡಿ.ಕೆ.ಸುರೇಶ್ ಸುರೇಶ್, ಎಲ್‌ ಹನುಮಂತಯ್ಯ, ಸೈಯದ್ ನಾಸಿರ್ ಹುಸೇನ್, ಎಂ.ಆರ್.ಸೀತಾರಾಮ್, ಶಿವರಾಜ ತಂಗಡಗಿ, ವಿನಯ್ ಕುಲಕರ್ಣಿ, ವಿ.ಎಸ್. ಉಗ್ರಪ್ಪ, ಬೋಸ್‌ರಾಜು, ವಿನಯ್‌ಕುಮಾರ್ ಸೊರಕೆ, ಶರಣಪ್ಪ ಸುಣಗಾರ್, ಜಿ.ಪದ್ಮಾವತಿ ಹಾಗೂ ಶ್ಯಾಮನೂರು ಶಿವಶಂಕರಪ್ಪ ಅವರು ಈ ಸಮಿಯ ಸದಸ್ಯರಾಗಿದ್ದಾರೆ ಎಂದು ಭಾರತೀಯ ಕಾಂಗ್ರೆಸ್‌ ಪಕ್ಷ ತಿಳಿಸಿದೆ. ಎಐಸಿಸಿ ತಿಳಿಸಿದೆ.

English summary
Karnataka Assembly Election 2023: 36 member committee formed for Assembly election supervision by AICC president Mallikarjun Kharge and MP KC Venugopal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X