ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ; ವೆಚ್ಚ ಮರುಪಾವತಿ ಹೇಗೆ?

ಸರ್ಕಾರಿ ನೌಕರರಿಗಾಗಿ ಜಾರಿಗೊಳಿಸಲಾಗುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಯೋಜನೆಯು ನಗದು ರಹಿತ ಹಾಗೂ ವೈದ್ಯಕೀಯ ವೆಚ್ಚದ ಮರುಪಾವತಿ ಎರಡೂ ಅಂಶಗಳನ್ನು ಒಳಗೊಂಡಿದೆ.

ಬೆಂಗಳೂರು, ಮಾರ್ಚ್ 14; ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ, ಅವರ ಕುಟುಂಬದ ಸದಸ್ಯರಿಗಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಲಿದೆ. ಈ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮುಖಾಂತರ (SAST) ಮೂಲಕ ಅನುಷ್ಠಾನಗೊಳಿಸಲು ಸರ್ಕಾರವು ನಿರ್ಧರಿಸಿದೆ. ಈ ಯೋಜನೆ ಕುರಿತು ರಾಜ್ಯಪತ್ರದಲ್ಲಿ ಕಾರ್ಯ ನೀತಿ ಬಗ್ಗೆ ಪರಿಷ್ಕೃತ ಸೂಚಿಯನ್ನೂ ಹೊರಡಿಸಿದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (THE KARNATAKA AROGYA SANJEEVINI SCHEME -KASS)ಯಡಿ ರಾಜ್ಯ ಸರ್ಕಾರಿ ನೌಕರು ಹಾಗೂ ಅವರ ಕುಟುಂಬದ ಸದಸ್ಯರು ಹಲವಾರು ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ. ಚಿಕಿತ್ಸೆಗಳು, ಯೋಜನೆಯ ವ್ಯಾಪ್ತಿ, ಆಸ್ಪತ್ರೆಗಳು ಮುಂತಾದ ಮಾಹಿತಿಯನ್ನು ನೀಡಲಾಗಿದೆ. ಈ ಯೋಜನೆಯಡಿ ವೈದ್ಯಕೀಯ ವೆಚ್ಚದ ಮರುಪಾವತಿ ಹೇಗೆ? ಎಂಬ ವಿವರ ಇಲ್ಲಿದೆ.

Karnataka Arogya Sanjeevini Scheme Guidelines For Re Embarrassment

ಈ ಯೋಜನೆಯು ನಗದು ರಹಿತ ಹಾಗೂ ವೈದ್ಯಕೀಯ ವೆಚ್ಚದ ಮರುಪಾವತಿ ಎರಡೂ ಅಂಶಗಳನ್ನು ಒಳಗೊಂಡಿದೆ. ತುರ್ತು ಸಂದರ್ಭಗಳಲ್ಲಿ ಸರ್ಕಾರಿ ನೌಕರ ಅಥವಾ ಆತನ ಕುಟುಂಬದ ಸದಸ್ಯರು ನೋಂದಾಯಿಸಲ್ಪಡದ ವೈದ್ಯಕೀಯ ಸಂಸ್ಥೆಗಳಲ್ಲಿ (Non empanelled Health Institutions) ಪಡೆದ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು 1963ರ ನಿಯಮಗಳಡಿ ಮರುಪಾವತಿ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಸರ್ಕಾರಿ ನೌಕರರು ಅಥವಾ ಅವರ ಕುಟುಂಬ ಸದಸ್ಯರು ಅವಘಾತಕ್ಕೀಡಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ, ಸಾರ್ವಜನಿಕರು ಅಥವಾ ಸ್ನೇಹಿತರು ತುರ್ತು ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಿದ ಸಂದರ್ಭ. ಹಠಾತ್ತಾಗಿ ಅಕಾಲದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು ಹತ್ತಿರದಲ್ಲಿ ಯಾವುದೇ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳು ಇಲ್ಲದಿದ್ದ ಸಂದರ್ಭದಲ್ಲಿ ಕುಟುಂಬದ ಸದಸ್ಯರು ತುರ್ತು ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದ ಸಂದರ್ಭ ಹೃದಯಾಘಾತಕ್ಕೀಡಾಗಿ ತುರ್ತು ಚಿಕಿತ್ಸೆಯ ಅಗತ್ಯವಿದ್ದು, ಹತ್ತಿರದಲ್ಲಿ ಯಾವುದೇ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳು ಇಲ್ಲದಿದ್ದ ಸಂದರ್ಭದಲ್ಲಿ ವೆಚ್ಚ ಮರುಪಾವತಿ ಮಾಡಿಕೊಳ್ಳಬಹುದು.

ಬೆಂಕಿ ಅಪಘಾತಕ್ಕೀಡಾಗಿ ತುರ್ತು ಚಿಕಿತ್ಸೆಯ ಅಗತ್ಯವಿರುವ ಸಂದರ್ಭದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ ಸಂದರ್ಭ. ಸರ್ಕಾರಿ ನೌಕರರ ಅಥವಾ ಅವರ ಕುಟುಂಬದ ಸದಸ್ಯರಿಗೆ ಜೀವಾಪಾಯವಿದ್ದು, ಸರ್ಕಾರಿ ವೈದ್ಯರ ಅಥವಾ ಮಾನ್ಯತೆ ಪಡೆದ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ತುರ್ತು ಚಿಕಿತ್ಸೆಯ ಅಗತ್ಯವಿರುವ ಬೇರೆ ಯಾವುದೇ ಅತಿ ವಿರಳ ಸಂದರ್ಭ, ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯು ಲಭ್ಯವಿಲ್ಲದಂತಹ ವಿಶೇಷ ಸಂದರ್ಭಗಳಲ್ಲಿ ಈ ಆಸ್ಪತ್ರೆಗಳ ಸಕ್ಷಮ ಆಸ್ಪತ್ರೆ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂದರ್ಭ ಈ ಯೋಜನೆಯಡಿ ಅನ್ಯಥಾ ನಿರ್ಧಿಷ್ಟಪಡಿಸಿದ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ಪ್ರಕರಣದಲ್ಲಿ ಸಂಪೂರ್ಣ ವೈದ್ಯಕೀಯ ವೆಚ್ಚದ ಮರುಪಾವತಿಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Karnataka Arogya Sanjeevini Scheme Guidelines For Re Embarrassment

ಈ ಕೆಳಕಂಡ ಸಂರ್ಭಗಳಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅಡಿ ನೋಂದಾಯಿತ ವೈದ್ಯಕೀಯ ಸಂಸ್ಥೆಯಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಯೋಜನೆಯ ದರಗಳನ್ವಯ SASTನಿಂದ ಮರುಪಾವತಿಸಲಾಗುವುದು ಎಂದು ತಿಳಿಸಿದೆ. ಈ ಯೋಜನೆಯಡಿ ರೋಗಿಯನ್ನು ದಾಖಲಿಸಿದ ನಂತರದಲ್ಲಿ ಕೆಲವೊಂದು ಕಾರಣಗಳಿಗಾಗಿ (ಆಸ್ಪತ್ರೆಯು ದಾಖಲಿಸಬೇಕು) ವೆಚ್ಚವನ್ನು ಭರಿಸಲು ರೋಗಿಗೆ ತಿಳಿಸಿದ ಸಂದರ್ಭ ಅಪೂರ್ಣವಾದ ದಾಖಲಾತಿಗಳ ಅಪ್‌ಲೋಡ್ ಅಥವಾ ಚಿಕಿತ್ಸೆಯ ವಿಧಾನದ ಬದಲಾವಣೆಯ ತುರ್ತು ಸಂದರ್ಭಗಳಲ್ಲಿ ರೋಗಿಯು ವೆಚ್ಚವನ್ನು ಭರಿಸಬೇಕಾದ ಸಂದರ್ಭ ಅಥವಾ ವಿಳಂಬದ ಅನುಮೋದನೆ ಸಂದರ್ಭಗಳಲ್ಲಿ ರೋಗಿಯು ಭರಿಸಿರುವ ವೆಚ್ಚ. ತುರ್ತು ಚಿಕಿತ್ಸಾ ಸಂದರ್ಭಗಳಲ್ಲಿ ತಕ್ಷಣದ ದಾಖಲಾತಿ ಅಥವಾ ತುರ್ತು ಚಿಕಿತ್ಸೆ ಅಗತ್ಯವಾಗಿದ್ದು ರೋಗಿಯು ವೆಚ್ಚವನ್ನು ಭರಿಸಿದ ಸಂದರ್ಭ, ಚಿಕಿತ್ಸಾ ತಜ್ಞತೆ ಅಥವಾ ಚಿಕಿತ್ಸಾ ಸಲಕರಣೆ ಲಭ್ಯವಿಲ್ಲದ ಸಂದರ್ಭದಲ್ಲಿ ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಬೇಕಾದ ಸಂದರ್ಭದಲ್ಲಿ ರೋಗಿಯು ವೆಚ್ಚವನ್ನು ಪಾವತಿಸುವಂತೆ ನಿರ್ಬಂಧಿಸಿದ ಸಂದರ್ಭದಲ್ಲಿ ಮರುಪಾವತಿ ಮಾಡಲಾಗುತ್ತದೆ.

ಮೃತದೇಹವನ್ನು ಪಡೆಯವಲ್ಲಿ ವೈದ್ಯಕೀಯ ವೆಚ್ಚವನ್ನು ಇತ್ಯರ್ಥಗೊಳಿಸಲು ತಿಳಿಸಿದ ಸಂದರ್ಭ. ಆಸ್ಪತ್ರೆಯಲ್ಲಿ ದಾಖಲಿಸುವ ಸಂದರ್ಭದಲ್ಲಿ ಯಾವುದೇ ಚಿಕಿತ್ಸಾ ವಿಧಾನಗಳಿಗೆ ಅಥವಾ ವೈದ್ಯಕೀಯ ತಪಾಸಣೆಗೆ ಇನ್ನೊಂದು ಕ್ಲಿನಿಕ್ ಅಥವಾ ತಪಾಸಣಾ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಅದಕ್ಕೆ ವೆಚ್ಚ ಪಾವತಿಸಲು ತಿಳಿಸಿದ ಸಂದರ್ಭ, ರಸ್ತೆ ಅಪಘಾತ ಸಂದರ್ಭಗಳಂತಹ ತುರ್ತು ಸಂದರ್ಭಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಸಾರ್ವಜನಿಕರು/ ಅಪರಿಚಿತರು ಆಸ್ಪತ್ರೆಗೆ ಸೇರಿಸಿ ಪ್ರಾರಂಭಿಕ ಚಿಕಿತ್ಸೆಗೆ ಪಾವತಿಸಿದ ವೆಚ್ಚ. ಉಪಶಾಮಕ ಆರೈಕೆಗೆ ಇನ್ನೊಂದು ಆಸ್ಪತ್ರೆಗೆ ಶಿಫಾರಸ್ಸು ಮಾಡಿದ ಸಂದರ್ಭದಲ್ಲಿ ಪಾವತಿಸಿದ ವೆಚ್ಚ. ದಾಖಲಾತಿಯ ಸಂದರ್ಭದಲ್ಲಿ ಔಷಧಗಳನ್ನು ಔಷಧಾಲಯಗಳಲ್ಲಿ ಖರೀದಿಸಿದ ಸಂದರ್ಭ, ನೋಂದಾಯಿತ ವೈದ್ಯರು ಸೂಚಿಸಿದ ಅಥವಾ ವೈದ್ಯಕೀಯ ಸಾಧನಕ್ಕೆ ಪಾವತಿಸಿದ ವೆಚ್ಚ ಮರುಪಾವತಿಯಾಗುತ್ತದೆ.

ದೀರ್ಘಕಾಲಾವಧಿಗೆ ಆಸ್ಪತ್ರೆಯಲ್ಲಿ ದಾಖಲಾತಿ ಹೊಂದಿದ ಸಂದರ್ಭದಲ್ಲಿ (ತಲೆಗೆ ಏಟು, ಕೋಮ, Septicaemia, MODS) ಹಾಗೂ ರೋಗಿಯು ಚಿಕಿತ್ಸೆಗೆ ವೆಚ್ಚ ಭರಿಸಿದ ಸಂದರ್ಭ. ರೋಗಿಯ ಇಚ್ಛೆಯಿಲ್ಲದೆ ಅವನ ಅರ್ಹತೆಯ ವಾರ್ಡಿಗಿಂತ ಹೆಚ್ಚಿನ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದ ಸಂದರ್ಭ ಅಥವಾ ಇಂತಹ ಸಂದರ್ಭಗಳಲ್ಲಿ ಆಸ್ಪತ್ರೆಯು ವಿಧಿಸಿದ ದರವನ್ನು ಆಸ್ಪತ್ರೆಯ ಕ್ಷೇಮುಗಳಿಂದ ಕಳೆದು, ರೋಗಿಗೆ ಪಾವತಿಸಲಾಗುತ್ತದೆ. ತುರ್ತು ಸಂದರ್ಭದಲ್ಲಿ KASS ಕಾರ್ಡ್ ಅನ್ನು ಒದಗಿಸದೆ ಚಿಕಿತ್ಸೆಯನ್ನು ಪಡೆದು, ವೆಚ್ಚವನ್ನು ಭರಿಸಿದ ಸಂದರ್ಭ ಮರುಪಾವತಿಗೆ ಅವಕಾಶವಿದೆ ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+